ರಿಪ್ಪನ್ಪೇಟೆ ಸರ್ಕಾರಿ ಆಸ್ಪತ್ರೆ ಸರಿ ಆಯ್ತು..!
– ಇನ್ನು ಮುಂದೆ 24 ಗಂಟೆಯೂ ವೈದ್ಯರ ಸೇವೆ ಲಭ್ಯ
– ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವರದಿ ಎಫೆಕ್ಟ್
– ಶಾಸಕ ಬೇಳೂರು ಗೋಪಾಲಕೃಷ್ಣ ಖಡಕ್ ಆದೇಶ
NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕು ರಿಪ್ಪನ್ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಈಗ ಎಲ್ಲಾ ಸೌಲಭ್ಯಗಳು ಬರಲಿವೆ. ಇತ್ತೀಚಿಗೆ ಅನೇಕ ಜನರ ಆರೋಪದಿಂದ ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ವಿಶೇಷ ವರದಿಯೊಂದನ್ನು ಮಾಡಿತ್ತು. ಈ ಹಿನ್ನೆಲೆ ಅನೇಕ ಮಾಧ್ಯಮಗಳು ಕೂಡ ಆಸ್ಪತ್ರೆ ಸಮಸ್ಯೆ ಬಗ್ಗೆ ದನಿ ಎತ್ತಿದ್ದವು. ಇದೀಗ ಹೊಸನಗರ-ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೈಗಾರಿಕಾ ಅರಣ್ಯ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ಖಡಕ್ ಕ್ರಮ ತೆಗೆದುಕೊಂಡಿದ್ದಾರೆ.
ಏನೇನು ಹೊಸ ಸೌಲಭ್ಯ?
ರಿಪ್ಪಿನಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ವೈದ್ಯರು ಕಾರ್ಯ ನಿರ್ವಹಿಸಲಿದ್ದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ರಾತ್ರಿ ಪಾಳಿಯಲ್ಲಿ ಸಮರ್ಪಕವಾದ ವೈದ್ಯರ ಸೇವೆಯ ಕೊರತೆಯಿಂದ ಹಲವಾರು ಅವಘಡಗಳು ನಡೆದಿತ್ತು. ಈ ಬಗ್ಗೆ ಸಂಬಂದಪಟ್ಟವರಿಗೆ ಎಷ್ಟೇ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದೇ ಜನಸಾಮಾನ್ಯರು ಹಿಡಿಶಾಪ ಹಾಕುತಿದ್ದದ್ದು ಸರ್ವೇ ಸಾಮಾನ್ಯವಾಗಿತ್ತು. ಇತ್ತೀಚೆಗೆ ವೈದ್ಯರ ಕೊರತೆಯಿಂದ ಮಹಿಳೆಯೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕರು ಸ್ಥಳದಲ್ಲಿಯೇ ಸಂಭದಪಟ್ಟ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಆಸ್ಪತ್ರೆಯ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ತಾಕೀತು ಮಾಡಿದ್ದರು.
3 ವೈದ್ಯರು, 5 ಮಂದಿ ನರ್ಸ್ ನಿಯೋಜನೆ
ಕಳೆದ ಹಲವಾರು ವರ್ಷಗಳಿಂದ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರುಗಳ ಸೇವೆ ನಿರಂತರವಾಗಿ ಇರಲಿಲ್ಲ. ಮಹಿಳೆಯರು ವೃದ್ಧರು ಹಾಗೂ ಮಕ್ಕಳಿಗೆ ತುರ್ತು ಚಿಕಿತ್ಸೆಯ ಅಗತ್ಯತೆಯ ಸಂದರ್ಭದಲ್ಲಿ ಜತೆಗೆ ಹೃದಯಘಾತ,ರಸ್ತೆ ಅಪಘಾತ, ಹಾಗೂ ವಿಷ ಸೇವನೆಯಂತಹ ತುರ್ತು ಸಂದರ್ಭದಲ್ಲಿ ವೈದ್ಯರುಗಳ ಸೇವೆ ಇಲ್ಲದೆ ಮೃತಪಟ್ಟಿರುವ ಘಟನೆಯೂ ಸಹ ನಡೆದಿತ್ತು. ಇದನ್ನೆಲ್ಲ ಗಮನಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಗ್ರಾಮೀಣ ಪ್ರದೇಶದ ಜನತೆಯ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ದಿನದ 24 ಗಂಟೆ ಸೇವೆಯನ್ನು ಸಲ್ಲಿಸಲು ಮೂರು ಜನ ವೈದ್ಯರು ಹಾಗೂ 05 ಜನ ದಾದಿಯರನ್ನು ನೇಮಕಗೊಳಿಸಿದ್ದಾರೆ.
ಯಾವ ಯಾವ ವೈದ್ಯರು ಲಭ್ಯ!
ಹೊರ ರೋಗಿಗಳು ಬೆಳಿಗ್ಗೆ 09 ರಿಂದ ಸಂಜೆ 4.30 ರೊಳಗೆ ಚಿಕಿತ್ಸೆ ಪಡೆದುಕೊಳ್ಳಬಹುದು ಆ ನಂತರದಲ್ಲಿ ಎಮರ್ಜೆನ್ಸಿಯಂತಹ ಪ್ರಕರಣಗಳಿಗೆ ವೈದ್ಯರ ಸೇವೆ ಲಭ್ಯವಿದೆ. ರೇಬಿಸ್ ಇಂಜೆಕ್ಷನ್, ಹಾಗೂ ಮಾತ್ರೆಗಳನ್ನು ಪಡೆದುಕೊಳ್ಳುವವರು ಸಂಜೆ 4.30 ರೊಳಗೆ ಪಡೆದುಕೊಳ್ಳಬಹುದಾಗಿದೆ.
ಆಂಬುಲೆನ್ಸ್ ಸರಿಯಾಗಿಲ್ಲ!
ರಿಪ್ಪಿನಪೇಟೆ ಸರ್ಕಾರಿ ಆಸ್ಪತೆ ಆಂಬುಲೆನ್ಸ್ ಬಗ್ಗೆ ಸ್ವಲ್ಪ ಗಮನಿಸಬೇಕಿದೆ. ಜತೆಗೆ ಸಿಬ್ಬಂದಿ ಸಮಯ ಪಾಲನೆ, ಅಧಿಕಾರಿಗಳ ಕಾಳಜಿ ಬೇಕಿದೆ.
ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವರದಿಗೆ ಹೊಸನಗರ ತಾಲೂಕಿನ ಜನ ಧನ್ಯವಾದ ಅರ್ಪಿಸಿದ್ದಾರೆ.