ಮಾದರಿಯಾಯಿತು ಯಡೂರು ಸರ್ಕಾರಿ ಆಸ್ಪತ್ರೆ!
– ಮೂಲಭೂತ ಸೌಕರ್ಯವನ್ನು ಒದಗಿಸಿಕೊಟ್ಟ ಯುವಕರು
– ಮಾದರಿ ಆಸ್ಪತ್ರೆಯಾಗುವತ್ತ ಹೊಸ ಹೆಜ್ಜೆ
NAMMUR EXPRESS NEWS
ಹೊಸನಗರ : ಹೊಸನಗರ ತಾಲೂಕಿನ ಯಡೂರು ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಇದೀಗ ಸ್ಥಳೀಯ ದಾನಿಗಳು, ಯುವಕರು, ಸಿಬ್ಬಂದಿ ಸಹಕಾರದಿಂದ ಅನೇಕ ಸೌಲಭ್ಯಗಳನ್ನು ಕಂಡುಕೊಂಡು ಮತ್ತಷ್ಟು ಸೇವೆಗೆ ನಿಂತಿದೆ. ಈ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆಯನ್ನು ಮಾಡಲಾಗಿದ್ದು ಮೂಲಭೂತ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಇಸಿಜಿ ಯಂತ್ರ ಕೆಟ್ಟ ನಿಂತಿದ್ದು ಇದೀಗ ರಿಪೇರಿ ಮಾಡಲಾಗಿದೆ. ಜೊತೆಗೆ ಆಸ್ಪತ್ರೆಗೆ ಬರುವ ಹೊರರೋಗಿಗಳಿಗೆ ಬೇಕಾದ ಸಕಲ ಸೌಲಭ್ಯಗಳನ್ನ ಕೂಡ ಇಲ್ಲಿ ಮಾಡಲಾಗಿದೆ.
ಉಳುಕೊಪ್ಪ ಪುನೀತ್ ಮತ್ತು ಚರಣ್ (ಎಫ್ ಡಿ ಎ) ಎಂಬುವವರು ಇಸಿಜಿ ಯಂತ್ರವನ್ನು ರಿಪೇರಿ ಮಾಡಿ ಕೊಟ್ಟಿದ್ದು, ಕೆಲವೊಂದಿಷ್ಟು ಸಾಮಗ್ರಿಗಳನ್ನು ಹಾಕಿದ್ದಾರೆ. ಪ್ರಮುಖ ದಾನಿಗಳಾದ ಮಹೇಶ್ ಬಂಕರ ಬೀಡು , ಅಮಿತ್ ಈಶ್ವರಪ್ಪ ಸತೀಶ್ ಅವರು ದಾನವನ್ನು ನೀಡಿ ಸಹಕರಿಸಿದ್ದಾರೆ. ಯಡೂರಿನ ಕೆಲವು ಉತ್ಸಾಹಿ ಹುಡುಗರು ಸೇರಿ ಈ ಕೆಲಸವನ್ನು ಮಾಡಿದ್ದಾರೆ. ಇದರಿಂದ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. ಚರಣ್, ಚಂದನ್, ಮಂಜುಶ್ರೀ ಗೌಡ, ಪ್ರಸಾದ್ ಶೆಟ್ಟಿ, ಪುನೀತ್, ನಂದನ್ ಚೇತನ್, ವಿನಯ್ ಯಡೂರು, ಸುಮಂತ ಶೆಟ್ಟಿ ಅನೇಕ ಯುವಕರು ಈ ಕೆಲಸ ಮಾಡಿದ್ದಾರೆ. ಡಾ. ಪವನ್, ಡಾ. ಮಿನಿ ಸಿಸ್ಟರ್ ಸಿಬ್ಬಂದಿ ವರ್ಗದ ಕೆಲಸ ಈಗ ಜನಸ್ಪಂದನೆ ವ್ಯಕ್ತವಾಗಿದೆ. ಅವರು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು ಇವರು ಕೂಡ ಇದೀಗ ಉತ್ತಮ ಕೆಲಸಕ್ಕೆ ಕೈಜೋಡಿಸಿದ್ದಾರೆ.
ಸರ್ಕಾರಿ ಅನುದಾನದ ಕಾಯಿದೆ ಸ್ಥಳೀಯವಾಗಿ ಆಸ್ಪತ್ರೆಯನ್ನ ಅಭಿವೃದ್ಧಿ ಮಾಡುವ ಈ ಯೋಜನೆಗೆ ಯುವ ಸಂಘಟಕ ಪ್ರೇಮ್ ಯಡೂರು ಸಾರಥ್ಯವನ್ನ ವಹಿಸಿಕೊಂಡಿದ್ದಾರೆ. ತುರ್ತು ಚಿಕಿತ್ಸೆಗೆ ಬೇಕಾದ ಅನೇಕ ಅವಶ್ಯಕ ವಸ್ತುಗಳನ್ನ ದಾನಿಗಳ ಸಹಾಯದಿಂದ ಇಲ್ಲಿ ಆಯೋಜಿಸಿ ಕೊಟ್ಟಿದ್ದಾರೆ. ಆಟೋ ಕಾಕ್ ಮಿಷನ್, ಇಸಿಜಿ ರಿಪೇರಿ, ಆಸ್ಪತ್ರೆಗೆ ಬೇಕಾದ ಹೊಸ ಬೆರ್ಶೀಟ್, ಬಿಪಿ ಚೆಕಿಂಗ್ ಮಿಷನ್, ಸ್ಟ್ಯಾಂಡ್ ಗಳು, ತುರ್ತು ಚಿಕಿತ್ಸೆಗೆ ಬೇಕಾದಂತ ಸಾಮಾಗ್ರಿಗಳನ್ನು ಒದಗಿಸಲಾಗಿದೆ. ಇನ್ನು ಅನೇಕ ದಾನಿಗಳು ಹಾಗೂ ಯುವಕರು ಸೇರಿಕೊಂಡು ಇನ್ನಷ್ಟು ಅಭಿವೃದ್ಧಿ ಕೆಲಸವನ್ನ ಮಾಡಲು ಮುಂದಾಗಿದ್ದಾರೆ.
ಬಾಲಕನ ತುರ್ತು ಚಿಕಿತ್ಸೆಗೆ ಸಹಕಾರಿ
ಇತ್ತೀಚಿಗೆ ಸ್ಥಳೀಯ ಬಾಲಕನೊಬ್ಬನ ತುರ್ತು ಚಿಕಿತ್ಸೆಗೆ ಈ ಆಸ್ಪತ್ರೆಯಲ್ಲಿ ಎಲ್ಲಾ ಅವಶ್ಯ ಸಾಮಗ್ರಿ ಇದ್ದ ಕಾರಣ ಅನುಕೂಲ ಆಗಿದೆ. ಆದ್ದರಿಂದ ಪ್ರತಿ ಊರಲ್ಲೂ ಇಂತಹ ಆಸ್ಪತ್ರೆಗಳನ್ನು ಸರ್ಕಾರದ ಅನುದಾನಕ್ಕಾಗಿ ಕಾಯದೆ ಸ್ಥಳೀಯರೇ ಸೇರಿ ಅಭಿವೃದ್ಧಿಪಡಿಸುವ ಚಿಂತನೆ ಇದೀಗ ಮಾದರಿಯಾಗಿದೆ.