- ಗುಪ್ತಾಂಗಕ್ಕೆ ಚಾಕು ಇರಿದ ಆಗಂತುಕರು
- ಹುಬ್ಬಳ್ಳಿಯ ಎರಡು ಕಡೆ ಘಟನೆ: ಆತಂಕ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೋಮವಾರ ರಾತ್ರಿ ಮತ್ತೇ ಚಾಕು ಇರಿತ ಪ್ರಕರಣ ಸದ್ದು ಮಾಡಿದ್ದು ಶಾಂತಿಪ್ರೀಯ ಜನತೆಯ ಮನದಲ್ಲಿ ಆತಂಕ ಮಡಗುಟ್ಟುವಂತೆ ಮಾಡಿದೆ.
ಎರಡು ಪ್ರತ್ಯೇಕ ಕಡೆಗಳಲ್ಲಿ ನಡೆದ ಎರಡು ಪ್ರಕರಣಗಳಲ್ಲಿ ಇಬ್ಬರು ಚಾಕುವಿನ ಇರಿತಕ್ಕೆ ಮಾರಣಾಂತಿಕ ಗಾಯಗೊಂಡಿದ್ದು ಸಾವು-ಬದುಕಿನ ಮಧ್ಯೆ ಜೂಜಾಟ ನಡೆಸಿದ್ದಾರೆ. ಗಾಯಾಳುಗಳಿಬ್ಬರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪ್ಪುನಗರ ನಿವಾಸಿ ಶೋಯಬ್ ಅಬ್ಬನ್ನವರ ಹಾಗೂ ಮಾಧವ ನಗರ ನಿವಾಸಿ ರಮೇಶ ಕಟ್ಟಿಮನಿ ಎಂಬಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಚಾಕು ಇರಿತ ಪ್ರಕರಣಕ್ಕೆ ನಿಖರವಾಗಿ ಕಾರಣವೇನು ಎಂಬುದು ಗೊತ್ತಾಗಿಲ್ಲ. ಆದರೆ, ಘಟನೆ ನಂತರ ಹಳೆ ಹುಬ್ಬಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ಟಿಪ್ಪುನಗರ ಹಾಗೂ ಅಶೋಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ಮಾಧವ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.
ನಿರ್ಗಮಿತ ಪೆÇಲೀಸ್ ಆಯುಕ್ತ ಆರ್.ದಿಲೀಪ್ ಅವರ ಅಧಿಕಾರವಧಿಯಲ್ಲಿ ಅತಿ ಹೆಚ್ಚು ಚಾಕು ಇರಿತ ಪ್ರಕರಣಗಳು ನಡೆದು ಅವಳಿ ನಗರದಲ್ಲಿ ಪೆÇಲೀಸ್ ವ್ಯವಸ್ಥೆ ಇದೆಯೋ ಎಲ್ಲವೋ ಎಂದು ಜನತೆ ಪ್ರಶ್ನಿಸಿಕೊಳ್ಳುವಂತಾಗಿತ್ತು. ಚಾಕು ಇರಿತ ಪ್ರಕರಣಗಳಿಂದ ಬೇಸತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸಹಾ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಪೆÇಲೀಸ್ ಇಲಾಖೆ ಖದರು ತೋರ್ಪಡಿಸಬೇಕು ಎಂದು ಇಲಾಖೆಗೆ ತಾಕಿತ್ತು ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಇದೀಗ ಮಹಾನಗರ ಪೆÇಲೀಸ್ ಇಲಾಖೆಯ ಚುಕ್ಕಾಣಿ ಹಿಡಿದಿರುವ ಲಾಭುರಾಮ, ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದು ಈ ಚಾಕು ಇರಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅವಳಿನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರಲು ಯಾವ ರೀತಿಯ ಕ್ರಮಕೈಗೊಳ್ಳಿದ್ದಾರೆ ಎಂಬುದನ್ನು ಅವಳಿ ನಗರದ ಜನತೆ ಎದುರು ನೋಡುವಂತೆ ಮಾಡಿದ್ದು ಸುಳ್ಳಲ್ಲ.
ದೀಪಗಳ ಹಬ್ಬ ದೀಪಾವಳಿ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಚಾಕು ಇರಿತ ಪ್ರಕರಣ ನಡೆದಿದ್ದು ಸಹಜವಾಗಿಯೇ ಮಹಾನಗರದ ಜನತೆಯಲ್ಲಿ ಮನದಲ್ಲಿ ಅಶಾಂತಿ ಮೂಡಿಸಿದೆ. ಸಣ್ಣಪುಟ್ಟ ಘಟನೆಗಳಿಗೂ ಚಾಕು, ಮಚ್ಚು, ಲಾಂಗ್ನಿಂದ ಹಲ್ಲೆ ನಡೆಸುವ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸುವ ಆರೋಪಿಗಳಿಗೆ ಪೆÇಲೀಸ್ ಇಲಾಖೆ ಖಾಕಿ ಖದೀರಿಸುವ ತೋರಿಸಬೇಕಾದ ಕಾಲ ಕೂಡಿ ಬಂದಿದೆ ಎಂದರೇ ತಪ್ಪಾಗಲಾರದು. ಈ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಹಾಗೂ ಅಶೋಕ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.