ಸೆಪ್ಟೆಂಬರ್ 1ಕ್ಕೆ ಸಿಇಟಿ/ನೀಟ್ ಸೀಟು ಹಂಚಿಕೆ ಫಲಿತಾಂಶ
– ಆಪ್ಯನ್ ಎಂಟ್ರಿಗೆ ಅವಕಾಶ
NAMMUR EXPRESS NEWS
ಸೆಪ್ಟೆಂಬರ್ 1ಕ್ಕೆ ಸಿಇಟಿ ಹಾಗೂ ನೀಟ್ ಸೀಟು ಹಂಚಿಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ವೈದ್ಯಕೀಯ ಪ್ರವೇಶಕ್ಕೆ ಆಪೈನ್ ಎಂಟ್ರಿ ಆರಂಭವಾಗಿದ್ದು, 2 ದಿನ ಅವಕಾಶ ಕಲ್ಪಿಸಲಾಗಿದೆ.
ಮೊದಲ ಸುತ್ತಿನ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸುಗಳ ಪ್ರವೇಶಕ್ಕೆ (UGCET 2024) ಆಪೈನ್ (ಆಯ್ಕೆ/ಇಚ್ಛೆ) ಗಳನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಂಗಳವಾರ (ಆ.20) ರಾತ್ರಿ ತನ್ನ ವೆಬ್ ಸೈಟ್ ನಲ್ಲಿ ಪೋರ್ಟಲ್ ತೆರೆದಿದೆ.ಆ.25ಕ್ಕೆ 2ನೇ ಅಣಕು ಸೀಟು ಹಂಚಿಕೆ ರಿಸ್ಟಲ್
ಆಗಸ್ಟ್ 25ರ ರಾತ್ರಿ 8ಕ್ಕೆ ಎರಡನೇ ಅಣಕು ಸೀಟು ಹಂಚಿಕೆಯ ಫಲಿತಾಂಶ (ಯುಜಿ ಸಿಇಟಿ/ನೀಟ್) ಪ್ರಕಟಿಸಲಾಗುತ್ತದೆ. ನಂತರ ಆಗಸ್ಟ್ 27ರ ಬೆಳಗ್ಗೆ 11ರವರೆಗೆ ಇಚ್ಛೆಗಳನ್ನು ಬದಲಿಸಿಕೊಳ್ಳಬಹುದು. ಸೆಪ್ಟೆಂಬರ್ 1ರಂದು ಸಂಜೆ 6ಕ್ಕೆ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ.
ವೆಬ್ ಸೈಟ್ನಲ್ಲಿ ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಿ ಇಚ್ಚೆ / ಆಯ್ಕೆಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಗಳನ್ನು ಅನುರಿಸಲು ಸೂಚಿಸಲಾಗಿದೆ. ಹಾಗೆಯೇ ಕಾಲೇಜು ಶುಲ್ಕದ ಮಾಹಿತಿ ಕೂಡ ಇದ್ದು, ಅದನ್ನೂ ಗಮನಿಸಿಯೇ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದೂ ಪ್ರಸನ್ನ ಸಲಹೆ ನೀಡಿದ್ದಾರೆ.ಆಪ್ತನ್ಗಳನ್ನು ದಾಖಲಿಸುವ ಬಗ್ಗೆ ಸೀಟು ಹಂಚಿಕೆಯ ವಿವಿಧ ಹಂತಗಳ ಕುರಿತು ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಯುಜಿಸಿಇಟಿ-24ರ ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಂಡೇ ಮುಂದುವರಿಯಬೇಕು.
ಅಭ್ಯರ್ಥಿಗಳೇ ಹುಷಾರ್..
ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ಗಳ ಸೀಟು ಕೊಡಿಸುವುದಾಗಿ ಹೇಳಿ ವಂಚಿಸುವವರ ಬಗ್ಗೆ ಎಚ್ಚರ ಇರಲಿ. ಸರ್ಕಾರಿ, ಖಾಸಗಿ, ಮ್ಯಾನೇಜೆಂಟ್, ಎನ್.ಆರ್.ಐ ಹೀಗೆ ಎಲ್ಲ ಕೋಟಾಗಳ ಸೀಟು ಹಂಚಿಕೆ ಮೆರಿಟ್ ಆಧಾರದ ಮೇಲೆ ಕೆಇಎ ವತಿಯಿಂದಲೇ ಆಗುತ್ತದೆ. ಈ ಕುಡಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಎಕ್ಸ್ ಮೂಲಕ ತಿಳಿಸಿದ್ದಾರೆ.