ಇನ್ನು ವಿವಾಹ ನೋಂದಣಿ ಆನ್ಲೈನ್ ಅಲ್ಲೂ ಆಗುತ್ತೆ!
* ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸಲು ಕ್ರಮ
* ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿ ಸೇವೆ
NAMMUR EXPRESS NEWS
ಬೆಂಗಳೂರು :ಈವರೆಗೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿಯನ್ನು ಕೈಗೊಳ್ಳಲಾಗುತ್ತಿದ್ದ ವಿವಾಹ ನೋಂದಣಿಯನ್ನು ರಾಜ್ಯ ಸರ್ಕಾರ ಇನ್ನಷ್ಟು ಸುಗಮಗೊಳಿಸಿದೆ. ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸಲು ಕ್ರಮ ಕೈಗೊಂಡಿದೆ.
ವಿವಾಹ ನೋಂದಣಿಯನ್ನು ಜನ ಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗೆ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.
ಬಳಕೆದಾರರ ಖಾತೆ ಸೃಜಿಸಿ ಕಾವೇರಿ ಪೋರ್ಟಲ್ಗೆ ಲಾಗಿನ್ ಮಾಡಿ, ವಿವಾಹ ನೋಂದಣಿ ಸೇವೆಗೆ ಭೇಟಿ ನೀಡಿ ವಿವರ ನಮೂದಿಸಿ ಅರ್ಜಿ ಸಲ್ಲಿಸಬಹುದಾಗಿದೆ.
* ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವ ಹಂತಗಳು
ಯಾವುವು??
https://kaveri.karnataka.gov.in ಭೇಟಿ ನೀಡಿ ಬಳಕೆದಾರರ ಖಾತೆ ಸೃಜಿಸಬೇಕು,ಕಾವೇರಿ ಪೋರ್ಟಲ್ಗೆ ಲಾಗಿನ್ ಮಾಡಬೇಕು,ವಿವಾಹ ನೋಂದಣಿ ಸೇವೆಯನ್ನು ನಮೂದಿಸಿ ಮತ್ತು ವಿವರವಾದ ಅರ್ಜಿ ಸಲ್ಲಿಸಬಹುದು
ಗಂಡ, ಹೆಂಡತಿ ಮತ್ತು ಮೂರು ಸಾಕ್ಷಿದಾರರ ಆಧಾರ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಬೇಕು ನೋಂದಣಾಧಿಕಾರಿಯಿಂದ ಅರ್ಜಿ ಪರಿಶೀಲನೆ, ಆನ್ಲೈನ್ ಮೂಲಕ ಶುಲ್ಕ ಸಂದಾಯಕ್ಕೆ ಅವಕಾಶ ಇದೆ.ಕಾವೇರಿ ಪೋರ್ಟಲ್ನಲ್ಲಿ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
(https://kaveri.karnataka.gov.in) ಮಾಹಿತಿಗಾಗಿ 080 68265316 ಅನ್ನು ಸಂಪರ್ಕಿಸಿ ಎಂದು ಅಧಿಕೃತ ಪ್ರಕಟಣೆಯನ್ನು ನಮೂದಿಸುವ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.