ಇಂದಿನಿಂದ ಹೊಸ ನಿಯಮ ಜಾರಿ!
– ಕ್ರೆಡಿಟ್ ಕಾರ್ಡ್, LPG ಸಿಲಿಂಡರ್, ಫಾಸ್ಟ್ಯಾಗ್ ನಿಯಮಗಳಲ್ಲಿ ಭಾರೀ ಬದಲಾವಣೆ
– ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ಗಳಿಗೆ 13 ದಿನ ರಜೆ
NAMMUR EXPRESS NEWS
ಆಗಸ್ಟ್ ಒಂದರಿಂದ ಕ್ರೆಡಿಟ್ ಕಾರ್ಡ್, LPG ಸಿಲಿಂಡರ್, ಫಾಸ್ಟ್ಟ್ಯಾಗ್ ನಿಯಮಗಳಲ್ಲಿ ಭಾರೀ ಬದಲಾವಣೆ ಆಗಲಿದೆ. ಈ ಬಗ್ಗೆ ಬಜೆಟ್ ಮಂಡನೆ ವೇಳೆಯೇ ಹೇಳಲಾಗಿತ್ತು. ಹಲವು ವಹಿವಾಟುಗಳ ಬೆಲೆಗಳಲ್ಲಿ ಬದಲಾವಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆಗಸ್ಟ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ. ಈ ತಿಂಗಳು ಅಂದರೆ ಜುಲೈನಲ್ಲಿ ಬಜೆಟ್ ಮಂಡನೆಯ ನಂತರ ಹಲವು ವಿಚಾರಗಳಲ್ಲಿ ಬದಲಾವಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಇದು ಆಸಗ್ಟ್ ಒಂದರಿಂದ ಜಾರಿಗೆ ಬರಲಿದೆ. ಈ ಬದಲಾವಣೆ ನಿಮ್ಮ ಜೇಬಿಗೆ ಕತ್ತರಿ ಕೂಡ ಹಾಕಬಹುದು. ಇದು ನಿಮ್ಮ ದಿನನಿತ್ಯ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಹಾಗೂ ವಸ್ತುಗಳ ಬೆಲೆಯಲ್ಲಿ ಬದಲಾವಣೆಯನ್ನು ತರಲಿದೆ. HDFC ಬ್ಯಾಂಕ್ನ ಕ್ರೆಡಿಟ್ ಕಾರ್ಡ್ಗಳು ಮತ್ತು LPG ಸಿಲಿಂಡರ್ನ ಬೆಲೆಗೆ ಸಂಬಂಧಿಸಿದ ನಿಯಮಗಳನ್ನು ಇದು ಒಳಗೊಂಡಿದೆ.
– HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್
ಎಚ್ಡಿಎಫ್ಸಿ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಸಂಬಂಧಿತ ನಿಯಮಗಳಲ್ಲಿ ಆಗಸ್ಟ್ನಿಂದ ಹಲವು ಬದಲಾವಣೆಗಳು ಆಗಲಿವೆ. ಎಚ್ಡಿಎಫ್ಸಿ ಬ್ಯಾಂಕ್ ಶುಲ್ಕ ಪಾವತಿಯಿಂದ ಹಿಡಿದು CRED, Cheq, MobiKwik ಮತ್ತು ಫ್ರೀಚಾರ್ಜ್ನಂತಹ ಸೇವೆಗಳನ್ನು ಬಳಸುವವರೆಗೆ ಶೇಕಾಡ 1ರಷ್ಟು ವಹಿವಾಟು ಶುಲ್ಕವನ್ನು ವಿಧಿಸಲಾಗುತ್ತದೆ. ಇದರ ಮಿತಿ 15,000 ಕ್ಕಿಂತ ಹೆಚ್ಚಿನ ವಹಿವಾಟುಗಳನ್ನು ನಡೆಸುವವರಿಗೆ ಈ ಶುಲ್ಕ ವಿಧಿಸಲಾಗಿದೆ.
– LPG ಸಿಲಿಂಡರ್
ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನದಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ನಿಗದಿಪಡಿಸುತ್ತವೆ. ಕಳೆದ ತಿಂಗಳು 19 ಕೆಜಿ ವಾಣಿಜ್ಯ ಅನಿಲದ ಬೆಲೆ ಇಳಿಕೆಯಾಗಿತ್ತು. ಆದರೆ ಮನೆಗಳಲ್ಲಿ ಬಳಸುವ 14.2 ಕೆಜಿ ಎಲ್ ಪಿ ಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಬಾರಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
– ಗೂಗಲ್ ಮ್ಯಾಪ್ :
ಆಗಸ್ಟ್ 1 ರಿಂದ ಭಾರತದಲ್ಲಿ ಗೂಗಲ್ ಮ್ಯಾಪ್ ಸೇವೆಗಳು ಅಗ್ಗವಾಗಲಿವೆ. ಈ ಗೂಗಲ್ ಮ್ಯಾಪ್ ಸೇವೆ ಪಡೆಯಲು ಗ್ರಾಹಕರು 70 ಪ್ರತಿಶತ ಕಡಿಮೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಸೇವೆಯ ಪಾವತಿಯನ್ನು ಈಗ ಡಾಲರ್ಗಳ ಬದಲಿಗೆ ಭಾರತೀಯ ರೂಪಾಯಿಗಳಲ್ಲಿ ಮಾಡಲಾಗುವುದು. ಇದು ಸಾಮಾನ್ಯ ಬಳಕೆದಾರರ ಮೇಲೆ ಪರಿಣಾಮ ಬೀರದಿದ್ದರೂ, ಅವರಿಂದ ಹೆಚ್ಚು ಶುಲ್ಕವನ್ನು ಪಡೆಯುವುದಿಲ್ಲ ಎಂದು ಹೇಳಿದೆ.
– ಬ್ಯಾಂಕ್ಗಳಿಗೆ 13 ದಿನ ರಜೆ
ಆಗಸ್ಟ್ನಿಂದ ಹಲವು ಹಬ್ಬಗಳು ಬರುತ್ತಿದೆ, ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನ, ಇದರ ನಂತರ ಆಗಸ್ಟ್ನಲ್ಲಿ 13 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಿರುತ್ತವೆ. ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಒಳಗೊಂಡಿದೆ. ರಕ್ಷಾ ಬಂಧನ ಮತ್ತು ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಬ್ಯಾಂಕುಗಳು ರಜೆ ಇರುತ್ತದೆ.
– ಫಾಸ್ಟ್ಟ್ಯಾಗ್ ನಿಯಮದಲ್ಲಿ ಹೊಸ ಬದಲಾವಣೆ:
ಫಾಸ್ಟ್ಟ್ಯಾಗ್ ನಿಯಮಗಳ ಹೊಸ ಬದಲಾವಣೆಗಳು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಇದು ಟೋಲ್ ಪಾವತಿಯಲ್ಲಿ ನವೀಕರಣವನ್ನು ತಂದಿದೆ. ಟೋಲ್ ಬೂತ್ಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುಲು ಈ ವಿಧಾನಗಳನ್ನು ತರಲಾಗಿದೆ. ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆ FASTag Know Your Customer (KYC) ಅಗತ್ಯವಾಗಿರುತ್ತದೆ ಎಂದು ಹೇಳಿದೆ. ಇದು ಆಗಸ್ಟ್ 1 ರಿಂದ ಕಡ್ಡಾಯವಾಗಿರುತ್ತದೆ.
ಫಾಸ್ಟ್ಯಾಗ್ KYC
ಫಾಸ್ಟ್ಯಾಗ್ ಹೊಸ ನಿಯಮಗಳ ಪ್ರಕಾರ, KYC ಅನ್ನು ಅಕ್ಟೋಬರ್ 31 ರೊಳಗೆ ಪೂರ್ಣಗೊಳಿಸಬೇಕು. ಫಾಸ್ಟ್ಟ್ಯಾಗ್ ಸೇವೆಗಳನ್ನು ನೀಡುವ ಕಂಪನಿಗಳು ಮೂರರಿಂದ ಐದು ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್ಟ್ಯಾಗ್ಗಳಿಗೆ KYC ಅನ್ನು ಅಕ್ಟೋಬರ್ 31 ರೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದೆ. ಈ ಬಗ್ಗೆ ಪ್ರಕ್ರಿಯೆ ಆಗಸ್ಟ್ 1ರಿಂದಲ್ಲೇ ಪ್ರಾರಂಭವಾಗುತ್ತದೆ. ಇದರಲ್ಲಿ ಫಾಸ್ಟ್ಟ್ಯಾಗ್ ಸಂಖ್ಯೆಗಳನ್ನು ಕೂಡ ಬದಲಾವಣೆ ಮಾಡಬೇಕು ಎಂದು ಹೇಳಿದೆ.