ಮಲೆನಾಡು, ಕರಾವಳಿಯಲ್ಲಿ ಸಸಿ ನೆಟ್ಟಿ!
– ಅನ್ನ ಕೊಡುವ ಭತ್ತದ ಬೆಳೆ ಸಂಭ್ರಮ
– ಮಳೆ ಹೋಯ್ತು.. ಬಿಸಿಲು ಬಂತು..ಮುಂದೇನು?
NAMMUR EXPRESS NEWS
ಮಳೆಗಾಲ ಕೊಂಚ ಕಡಿಮೆ ಆಗಿದೆ. ಎಲ್ಲೆಡೆ ಭತ್ತದ ಗದ್ದೆಗಳು ಹಚ್ಚ ಹಸಿರಿನಿಂದ ಸಂಭ್ರಮಿಸುತ್ತಿದೆ. ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ. ಮಲೆನಾಡು, ಕರಾವಳಿಯಲ್ಲಿ ಭತ್ತದ ಸಸಿ ನಾಟಿ ಕಾರ್ಯದಲ್ಲಿ ಜನ ನಿರತರಾಗಿದ್ದಾರೆ.
ಮಲೆನಾಡಲ್ಲಿ ಅಡಿಕೆ ತೋಟಗಳು ಭತ್ತದ ಕೃಷಿಯನ್ನು ಮರೆ ಮಾಚಿವೆ. ಎಲ್ಲೆಡೆ ಗದ್ದೆಗಳು ತೋಟಗಳಾಗಿವೆ. ಆದರೂ ಅಲ್ಲಿ ಇಲ್ಲಿ ಭತ್ತದ ಗದ್ದೆಗಳಲ್ಲಿ ಕೃಷಿ ಕಾರ್ಯ ನಡೆಯುತ್ತಿದೆ.