ಮಳೆ, ಗಾಳಿ, ಧರೆ ಕುಸಿತ: ವಿದ್ಯುತ್ ಬಗ್ಗೆ ಎಚ್ಚರ!
– ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಬಗ್ಗೆ ಜಾಗೃತಿ ಇರಲಿ
– ಈ ವರ್ಷ 20ಕ್ಕೂ ಹೆಚ್ಚು ಮಂದಿ ವಿದ್ಯುತ್ ಶಾಕ್ ಇಂದ ಸಾವು!
– ಹಾಗಾದ್ರೆ ಏನು ಮಾಡಬೇಕು..ಏನು ಮಾಡಬಾರದು..?
NAMMUR EXPRESS NEWS
ಅತಿಯಾದ ಗಾಳಿ ಮಳೆ ಇರುವ ಕಾರಣದಿಂದ ಸಾರ್ವಜನಿಕರು ವಿದ್ಯುತ್ ಬಗ್ಗೆ ಎಚ್ಚರ ವಹಿಸಬೇಕು.
ಮಳೆ, ಗಾಳಿ, ಧರೆ ಕುಸಿತ ಕಾರಣಗಳಿಂದ ವಿದ್ಯುತ್ ಬಗ್ಗೆ ಎಚ್ಚರ ವಹಿಸಬೇಕು.ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಬಗ್ಗೆ ಜಾಗೃತಿ ಇರಬೇಕು. ಈ ವರ್ಷ 20ಕ್ಕೂ ಹೆಚ್ಚು ಮಂದಿ ವಿದ್ಯುತ್ ಶಾಕ್ ಇಂದ ಸಾವು ಕಂಡಿದ್ದಾರೆ. ಇನ್ನು ಮಳೆ ಜೋರಾಗಲಿದೆ. ಎಲ್ಲಾ ಕಡೆ ಮಣ್ಣು ಸಡಿಲವಾಗಿದೆ. ತಂತಿ, ಕಂಬ ಬೀಳುವ ಸಾಧ್ಯತೆ ಇದೆ. ಗೋಡೆ ತಂಡಿಯಾಗಿ ವಿದ್ಯುತ್ ಶಾಕ್ ಹೊಡೆಯುವ ಸಾಧ್ಯತೆ ಇದೆ.
– ಹಾಗಾದ್ರೆ ಏನು ಮಾಡಬೇಕು..ಏನು ಮಾಡಬಾರದು..?
– ಗಾಳಿ ಇರುವಾಗ ವಿದ್ಯುತ್ ಮಾರ್ಗದ ಕೆಳಗೆ ನಿಲ್ಲಬೇಡಿ, ಕಬ್ಬಿಣ ಕಂಬ, ಗೈವೈರ್ಗಳನ್ನು ಮುಟ್ಟಬೇಡಿ.
– ತುಂಡಾದ ಕಂಬ, ವೈರ್ ಕಂಡಲ್ಲಿ ಕೂಡಲೇ ಹತ್ತಿರದ ಕೆಇಬಿ ಕಛೇರಿ ಅಥವಾ ನಿಮ್ಮ ಏರಿಯಾ ಪವರ್ ಮ್ಯಾನ್ ಅಥವಾ ಮೆಸ್ಕಾಂ ಗ್ರಾಹಕರ ಸೇವಾಕೇಂದ್ರ 1912ಗೆ ತಿಳಿಸಿ. ಅತಿಯಾದ ಆತ್ಮ ವಿಶ್ವಾಸ ಬಿಟ್ಟು ಸುರಕ್ಷತೆಯಿಂದ ಕೆಲಸ ನಿರ್ವಹಿಸಿ.
– ತೋಟದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ಅಲ್ಯುಮಿನಿಯಂ / ಲೋಹದ ಏಣಿಯನ್ನು ಬಳಸುವಾಗ ವಿದ್ಯುತ್ ಮಾರ್ಗದಿಂದ ಅಂತರವಿರಲಿ ಹಾಗೂ ಅದರ ಹತ್ತಿರ ಹೋಗದಂತೆ ನಿಗಾವಹಿಸಿ.
– ತಂಡಿ ಕೈಗಳಿಂದ ಸ್ವಿಚ್ ಬೋರ್ಡ್ / ವಿದ್ಯುತ್ ಉಪಕರಣಗಳನ್ನು ಮುಟ್ಟಬೇಡಿ.
– ವಿದ್ಯುತ್ ಸಂಬಂಧಿ ರಿಪೇರಿ ಕೆಲಸಗಳನ್ನು ನುರಿತ ಕೆಲಸಗಾರರಿಂದ ಮಾಡಿಸಿ.
– ಜಾನುವಾರಗಳನ್ನು ಕಂಬಕ್ಕೆ ಕಟ್ಟುವುದು, ಬ್ಯಾನರ್ಗಳನ್ನು ಕಂಬಕ್ಕೆ ನೇತುಹಾಕುವುದನ್ನು ಮಾಡಬೇಡಿ
– ಕಟ್ ಔಟ್ಗಳನ್ನು ವಿದ್ಯುತ್ ಮಾರ್ಗದ ಸಮೀಪ ಕಟ್ಟಬೇಡಿ.
– ಮನೆಯ ವಿದ್ಯುತ್ ಸಂಪರ್ಕ, ಸ್ವಿಚ್ ಬಗ್ಗೆ ಗಮನ ಇರಲಿ
– ಅಕ್ರಮ ವಿದ್ಯುತ್ ಸಂಪರ್ಕ ಪಡೆಯದಿರಿ
– ವಿದ್ಯುತ್ ಕಂಬ, ತಂತಿ ಬೀಳುವ ಹಂತದಲ್ಲಿದ್ದರೆ ಮಾಹಿತಿ ನೀಡಿ
ಎಲ್ಲರಿಗೂ ಶೇರ್ ಮಾಡಿರಿ… ಜನ ಜಾಗೃತಿ ಮೂಡಿಸಿ..!