ಶ್ರಾವಣ ಮಾಸ: ಎಲ್ಲೆಡೆ ವಿಶೇಷ ಪೂಜೆ!
– ಸಾಲು ಸಾಲು ಹಬ್ಬಕ್ಕೆ ಸಿದ್ಧತೆ: ಮಳೆ ಕೊಂಚ ಕಡಿಮೆ
– ವ್ಯಾಪಾರಿಗಳಿಗೆ ಉದ್ಯಮ ಅಭಿವೃದ್ಧಿ ನಿರೀಕ್ಷೆ
NAMMUR EXPRESS NEWS
ಆಗಸ್ಟ್ 5 ರಿಂದ ಶಿವನಿಗೆ ಸಮರ್ಪಿತವಾದ ಶ್ರಾವಣ ಮಾಸ ಪ್ರಾರಂಭವಾಗಿದೆ . ಶಿವಭಕ್ತರು ಈ ಮಾಸದಲ್ಲಿ ಉಪವಾಸ ವ್ರತವನ್ನು ಆಚರಿಸುವ ಮೂಲಕ ಶಿವನನ್ನು ಪೂಜಿಸುತ್ತಾರೆ. ಈ ವರ್ಷ ಶ್ರಾವಣ ಮಾಸವು ಸೋಮವಾರದಿಂದ ಆರಂಭವಾಗುತ್ತಿರುವುದರಿಂದ ಶ್ರಾವಣ ಮಾಸದ ಮಹತ್ವ ಮತ್ತಷ್ಟು ಹೆಚ್ಚಿದೆ.
ವ್ಯಾಪಾರಿಗಳಿಗೆ, ತಯಾರಕರಿಗೆ ಕೈತುಂಬ ಕೆಲಸ!
ಆ.5 ರಿಂದ ಶುರುವಾದ ಶ್ರಾವಣ ಮಾಸ ನಾಗರ ಪಂಚಮಿ, ವರಮಹಾಲಕ್ಷ್ಮಿ, ಗಣೇಶ ಚತುರ್ಥಿಯಿಂದ ಹಿಡಿದು ನವರಾತ್ರಿಯಲ್ಲಿ ನವದುರ್ಗೆಯರ ಪೂಜೆಯವರೆಗೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಕುಶಲಕರ್ಮಿಗಳು ಶುಭ ಸಮಾರಂಭಗಳಿಗಾಗಿ ಮೂರ್ತಿಗಳನ್ನು ರಚಿಸಲು ಸಜ್ಜಾಗಿದ್ದಾರೆ. ಹಾಗೂ ಆಭರಣದ ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ವಿವಿಧ ವ್ಯಾಪಾರಿಗಳು ಲಾಭದ ನಿರೀಕ್ಷೆಯಲ್ಲಿದ್ದು ಈ ವರ್ಷ ಭರ್ಜರಿ ವಹಿವಾಟು ಕಾಣುವ ನಿರೀಕ್ಷೆ ಇದೆ.
ಮಳೆ ಕೊಂಚ ಕಡಿಮೆ: ಜನ ಪಟ್ಟಣಗಳತ್ತ
2 ತಿಂಗಳಿಂದ ಅಬ್ಬರಿಸಿದ್ದ ಮಳೆ ಈ ವಾರ ಕೊಂಚ ಕಡಿಮೆ ಆಗಿದೆ. ಅದರಲ್ಲೂ ಭಾರೀ ಅವಾಂತರ ಸೃಷ್ಟಿ ಮಾಡಿದ್ದ ಮಲೆನಾಡು, ಕರಾವಳಿಯಲ್ಲಿ ಮಳೆ ಕಡಿಮೆ ಆಗಿದೆ. ಹೀಗಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿದೆ.
ದೇಗುಲಗಳಲ್ಲಿ ವಿಶೇಷ ಪೂಜೆ
ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಮಹಿಳೆಯರು ಶ್ರಾವಣವನ್ನು ವಿಶೇಷವಾಗಿ ಆಚರಣೆ ಮಾಡುತ್ತಿದ್ದಾರೆ. ಶ್ರಾವಣ ಆದ್ದರಿಂದ ಮೀನು, ಮಾಂಸಕ್ಕೆ ಬೇಡಿಕೆ ಕಡಿಮೆ ಆಗಿದೆ.