ಇದು ದೇಶ ಕಾಯೋ ಕಬ್ಬಿಣದ ಕುದುರೆಗಳು!!
* ಇಂಡಿಯನ್ ಆರ್ಮಿ ಕಾರ್ ಗಳು!
* ಬಾಂಬುಗೆ ಬಗ್ಗಲ್ಲ ಬುಲೆಟ್ ನುಗ್ಗಲ್ಲ!
NAMMUR EXPRESS NEWS
ಮಹಿಂದ್ರಾ ಅರ್ಮಾಡೋ, ಟಾಟಾ ಮರ್ಲಿನ್ ಎಲ್ಎಸ್ವಿ, ರೇನೋ ಶಾರ್ಪ, ಪೊಲಾರಿಸ್ ರೇಂಜರ್ ಈ ಕಾರುಗಳ ಹೆಸರುಗಳು ವಿಭಿನ್ನವಾಗಿದೆ ಹಾಗೂ ಹೆಚ್ಚಿನ ಜನರಿಗೆ ಅಪರಿಚಿತವಾಗಿದೆ. ಇದು ಹೆಚ್ಚಾಗಿ ಭಾರತದಲ್ಲಿ ಸೇನೆಗಾಗಿ ಗಡಿ ಕಾಯೋ ಸೈನಿಕರ ರಕ್ಷಣೆಗಾಗಿ ನಿರ್ಮಾಣವಾಗುತ್ತಿರುವ ಕಾರುಗಳು.ಎದುರಾಳಿಗಳ ಬುಲೆಟ್ ಈ ಕಾರುಗಳಿಗೆ ಯಾವುದೇ ರೀತಿಯಲ್ಲಿ ನುಗ್ಗುವುದಿಲ್ಲ!
ಯಾವುದೇ ದಾರಿಯಲ್ಲಿ ನಿಲ್ಲದೆ ಉಕ್ಕಿನ ಕುದುರೆಯಂತೆ ಓಡುತ್ತಿರುತ್ತದೆ. ಈ ಕಾರುಗಳ ತಯಾರಿಕೆಗೆ ಟಾಟಾ ಮಹೀಂದ್ರಗಳ ಪಾಲು ಹೆಚ್ಚಾಗಿ ಕಂಡುಬರುತ್ತದೆ.
* ಕಾರುಗಳ ಬಳಕೆ ಹೇಗೆ?
ಸೇನೆಯ ವಾಹನಗಳಲ್ಲಿ ಹಲವಾರು ವಿಭಾಗಗಳಿರುತ್ತವೆ. ಅದೇ ರೀತಿ ಸಾಮಾನ್ಯ ಮಾರ್ಗಗಳಲ್ಲಿ ಕಾಣಸಿಗುವ ಕಾರ್ ಗಳು ಕೂಡ ಸೇನೆಯ ವಿಭಾಗದಲ್ಲಿರುತ್ತದೆ.ಈ ದೈತ್ಯ ಕಾರುಗಳು ಸೈನಿಕರಿಗೆ ಓಡಾಟಕ್ಕೆ ಬಳಕೆಯಾಗ ಯುದಧ ಭೂಮಿಯಲ್ಲೂ ಬೆಳಕಿಗೆ ಬರುತ್ತದೆ.
ಮಹಿಂದ್ರಾ ಅರ್ಮಾಡೋ ಇದೊಂದು ವಿಶೇಷ ವಾಹನವಾಗಿದ್ದು, ಭಯೋತ್ಪಾದನಾ ವಿರೋಧಿ ಆಪರೇಷನ್ ಗಳ ಬಳಕೆಗೆ ವಿಶೇಷವಾಗಿ ತಯಾರಿಸಿದ ಕಾರ್ ಆಗಿದೆ. ಇದೊಂದು ಅತ್ಯಂತ ಆಕರ್ಷಣೀಯವಾಗಿರುವ ವಾಹನವಾಗಿದ್ದು, ಗಡಿ ರಕ್ಷಣೆಯ ಕಾವಲು ಪರಿಶೀಲನೆಗೆ, ರಾಜಸ್ಥಾನದಂತಹ ಮರುಭೂಮಿ ಪ್ರದೇಶಗಳಲ್ಲಿ ಆಪರೇಷನ್ ಗಳಿಗೆ ಬಳಸಲಾಗುತ್ತದೆ. ಸುಮಾರು ಒಂದು ಟನ್ ಆಯುಧಗಳನ್ನು ಸಾಗಿಸಬಹುದಾದ ವಾಹನವಾಗಿದ್ದು,ಬುಲೆಟ್ಗಳು ಈ ಕಾರಿನೊಳಗೆ ಸುಲಭವಾಗಿ ನುಗ್ಗಲು ಸಾಧ್ಯವಿಲ್ಲ.
ಮಹಿಂದ್ರಾ ಮೆವ ಸೀರಿಸ್, ಇದರಲ್ಲಿ ಹಲವಾರು ರೀತಿಯ ಕಾರ್ ಗಳಿದ್ದು, 11 ಸೈನಿಕರನ್ನು ಸುಲಭವಾಗಿ ಕರೆದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ಎಡ ಬದಿ ಸ್ಟೇರಿಂಗ್ ಅನ್ನು ಈ ವಾಹನ ಹೊಂದಿರುತ್ತದೆ. ಬರೋಬ್ಬರಿ 4.5 ಲೀಟರ್ ನ 8 ಡೀಸೆಲ್ ನ ಇಂಜಿನ್ ಇದಕ್ಕೆ ಶಕ್ತಿ ನೀಡುತ್ತದೆ. ಐದು ಗೇರ್ ಗಳನ್ನು ಒಳಗೊಂಡ ಈ ಕಾರ್ ಬಹಳಷ್ಟು ಸುರಕ್ಷಿತವಾಗಿದೆ.
ರೇನೋ ಶಾರ್ಪ ವಾಹನವನ್ನು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಬಳಕೆ ಮಾಡುತ್ತಾರೆ. 4 ಸೈನಿಕರು ಈ ಕಾರಿನೊಳಗೆ ಕುಳಿತುಕೊಂಡು ಒಟ್ಟಿಗೆ ಗುಂಡನ್ನು ಹಾರಿಸಬಹುದು. ಬರೋಬ್ಬರಿ ಹತ್ತು ಜನರು ಚಲಿಸಬಹುದಾದ ಈ ವಾಹನವು ಪೂರ್ತಿಯಾಗಿ ಲೋಡ್ ಆಗಿದ್ದಾಗ 11 ಟನ್ ತೂಕವಿರುತ್ತದೆ, ಆದರೂ ಈ ಗಾಡಿ 110ಕಿ.ಮೀ. ವೇಗದಲ್ಲಿ ಚಲಿಸಲು ಸಾಧ್ಯ!!..ಈ ಕಾರುಗಳನ್ನು ವಿದೇಶದಲ್ಲೂ ಮಾರಾಟ ಮಾಡಲಾಗುತ್ತಿದೆ.
ಟಾಟಾ ಮರ್ಲಿನ್ ಎಲ್ಎಸ್ವಿ ಇದು ಸಾಮಾನ್ಯವಾಗಿ ಪರಿಚಿತವಾಗಿರುವ ಕಾರ್ ಗಳು ಒಂದು ಕಾಲದಲ್ಲಿ ಈ ಕಾರ್ ಗಳು ಇಂಡಿಯನ್ ಆರ್ಮಿಗಳ ಅಫೀಷಿಯಲ್ ವಾಹನವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ಕಾರ್ ಗಳು ವಯಸ್ಸಾಗಿರುವ ಮಾರುತಿ ಕಾರುಗಳ ಸ್ಥಾನವನ್ನು ತುಂಬುತ್ತದೆ. ಭಾರತದ ಸೈನಿಕರಿಗೆ ಟಾಟಾ ದೈತ್ಯ ಕಾರುಗಳನ್ನು ತಯಾರಿ ಮಾಡುತ್ತಿದ್ದಾರೆ. ವಿಶ್ವ ಸಂಸ್ಥೆಯು ಸೇನಗೆ ಕಲ್ಯಾಣಿ m4 ಿಂದ ಸೇವೆಯನ್ನು ನೀಡುತ್ತಿದೆ. ಕಲ್ಯಾಣಿ m4 ಜನರನ್ನು ರಕ್ಷಣೆ ಮಾಡಲು ಇರುವ ವಾಹನವಾಗಿದೆ. 16 ಟನ್ ತೂಕ ಇದ್ದರೂ ಕೂಡ ಗಂಟೆಗೆ 140ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ವಾಹನಕ್ಕೆ 10 ಕೆಜಿ ಸ್ಪೋಟಕ ಇಟ್ಟು ಉಡಾವಣೆ ಮಾಡಿದರೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಹೀಗೆ ಹಲವಾರು ವಿಭಾಗಗಳು ಸೇನೆಗೆ ಉಪಯುಕ್ತ ದೈತ್ಯ ವಾಹನಗಳ ನಿರ್ಮಾಣದಲ್ಲಿ ತೊಡಗಿಕೊಂಡಿದೆ.