ಇನ್ಮೇಲೆ ಕೆಲವೇ ನಿಮಿಷದಲ್ಲಿ ಸಿಗುತ್ತೆ ಸಾಲ!
– ಡಿಜಿಟಲ್ ಪೇಮೆಂಟ್: ಇನ್ನೊಂದು ಕ್ರಾಂತಿಕಾರಿ ಪೇಮೆಂಟ್ ಸಿಸ್ಟಮ್!
• UPI ನಂತರ ULI ಗೆ ಮುಹೂರ್ತ ಫಿಕ್ಸ್!?
NEWS EXPRESS NEWS
ಸಾಲ ಪಡೆಯಬೇಕು ಎಂದರೆ ಅದರಷ್ಟು ಕಷ್ಟ ಯಾವುದಿಲ್ಲ. ದಾಖಲೆ ಕೊಡಬೇಕು, ಬ್ಯಾಂಕ್ ಸುತ್ತಾಡಬೇಕು. ಹೀಗೆ ನೂರೆಂಟು ತೊಂದರೆ ಇದ್ದದ್ದೇ. ಈ ಹೊಸ ಸಾಲ ವ್ಯವಹಾರದ ಯು.ಎಲ್.ಐ ಲಾಂಚ್ ಬಗ್ಗೆ ಆರ್.ಬಿ.ಐ ಗವರ್ನರ್ ಶಕ್ತಿಕಾಂತ್ ದಾಸ್ ಮಾತನಾಡಿದ್ದಾರೆ.
ಡಿಜಿಟಲ್ ಪೇಮೆಂಟ್ ಗಳಿಗೆ ಯುಪಿಐ ತರಹದ ಸಾಲ ವ್ಯವಹಾರಕ್ಕಾಗಿ ULI ಬರುತ್ತಿವೆ. ULIನಿಂದ ರೈತರು ಹಾಗೂ ಸಣ್ಣ ಉದ್ಯಮಿಗಾರರಿಗೆ ಸಾಲ ಅನುಮೋದನೆಯಾಗುವ ಅವಧಿ ಗಣನೀಯವಾಗಿ ಇಳಿಯಲಿದೆ. ಕೆಲವೇ ನಿಮಿಷಗಳಲ್ಲಿ ಜನರಿಗೆ ಸಾಲ ದೊರೆಯುವ ಸೌಲಭ್ಯ ಸಿಗಲಿದೆ.
ಹಾಗಿದ್ದರೆ ಏನಿದು ULI?
2016ರಲ್ಲಿ ಲಾಂಚ್ ಆದ UPI ಭಾರತದಲ್ಲಷ್ಟೇ ಅಲ್ಲದೆ ಬೇರೆ ದೇಶಗಳಲ್ಲೂ ನಗದು ರಹಿತ ವ್ಯವಹಾರಗಳಲ್ಲಿ ಕಾರ್ಯನಿರ್ವಹಿಸಿದೆ. UPI ರೀತಿಯಲ್ಲಿ ವ್ಯವಹಾರ್ಕಾಗಿ ಂದು ವೇದಿಕೆಯನ್ನು ನಿರ್ಮಿಸುವುದಾಗಿ RBI ನಿರ್ಧರಿಸಿತ್ತು. ಇದೀಗ ಈ ಪ್ಲಾಟ್ಫಾರ್ಮ್ ಬೆಳಕಿಗೆ ಬಂದಿದ್ದು, ಇದನ್ನು ULI ಎಂದು ಕರೆಯಲಾಗುತ್ತದೆ ಎಂಬುದಾಗಿ ಶಕ್ತಿಕಾಂತ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಆಧುನಿಕ ತಂತ್ರಜ್ಞಾನಗಳ ಕಾರ್ಯಕ್ರಮದಲ್ಲಿ ದಾಸ್ ULI ಹೆಸರನ್ನು ನಮೂದಿಸಿ ಇದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಒಂದೇ ಪ್ಲ್ಯಾಟ್ ಫಾರ್ಮ್ ನಲ್ಲಿ ಗ್ರಾಹಕರ ಸಂಪೂರ್ಣ ಮಾಹಿತಿ
ಸಾಲ ಪಡೆಯಬೇಕಾದರೆ ಬ್ಯಾಂಕ್ ಸಂಸ್ಥೆಗಳಲ್ಲಿ ದಾಖಲೆ ಪತ್ರಗಳ ಮೂಲಕ ಅಲೆದಾಡುವ ಕೆಲಸ ಇದ್ದೇ ಇರುತ್ತದೆ. ದೊಡ್ಡ ದೊಡ್ಡ ಉದ್ದಿಮೆಗಳಿಗೆ ಕೆಲವೇ ನಿಮಿಷಗಳಲ್ಲಿ ಸಾಲಗಳನ್ನು ನೀಡಿರಬಹುದು. ಆದರೆ ರೈತರು ಹಾಗೂ ಸಣ್ಣ ಉದ್ದಿಮೆದಾರರಿಗೆ ಸಾಲ ಪಡೆಯಲು ಕಷ್ಟವಾಗುತ್ತಿದ್ದು, ಇದೇ ಕಾರಣಕ್ಕಾಗಿ ಅವರ ಸೇವೆಗಾಗಿ ULI ಯನ್ನು ಜಾರಿ ಮಾಡಲಾಗುತ್ತಿದೆ. ಸಾಲ ಪಡೆಯುವ ವ್ಯಕ್ತಿಗೆ ಭೂ ದಾಖಲೆಗಳಿಂದ ಹಿಡಿದು ಸಾಲ ನೀಡಲು ಎಲ್ಲಾ ದಾಖಲೆಗಳು ಈ ಮೂಲಕ ಬ್ಯಾಂಕುಗಳಿಗೆ ಲಭ್ಯವಾಗುತ್ತದೆ.
ಇದು ಯಾವುದೇ ರೀತಿಯ ಸಾಲಗಾರರ ಗೌಪ್ಯತೆಗೆ ದಕ್ಕೆ ಮಾಡುವುದಿಲ್ಲ. ಇದು ಸಾಲ ತೆಗೆದುಕೊಳ್ಳುವವರ ಮೇರೆಗೆ ಕಾರ್ಯನಿರ್ವಹಿಸುತ್ತದೆ. ULI ಯಲ್ಲಿ ಸಂಪೂರ್ಣ ಸುರಕ್ಷತೆಯನ್ನು ಕಾಪಾಡಿಕೊಳ್ಳಲಾಗುತ್ತದೆ ಎಂದು ಅವರೇ ತಿಳಿಸಿದ್ದಾರೆ.
ವ್ಯವಹಾರಗಳಲ್ಲಿ ದೊಡ್ಡ ಸಮಸ್ಯೆ ಸಾಲ ಸಂಬಂಧ ಮಧ್ಯವರ್ತಿಗಳ ಪಾಲು, ಆದರೆ ಇವುಗಳನ್ನೆಲ್ಲಾ ನಿಲ್ಲಿಸಲು ULI ಬಹುಪ್ರಯೋಜನಕಾರಿಯಾಗಿದೆ.