ಪಡಿತರ ಚೀಟಿದಾರರಿಗೆ ಶೀಘ್ರವೇ ಬಿಪಿಎಲ್ ಹೆಲ್ತ್ ಕಾರ್ಡ್
– ವೈದ್ಯಕೀಯ ಸೇವೆಗೆ ಪ್ರತ್ಯೇಕ ಪಡಿತರ ಚೀಟಿ
– ವೈದ್ಯಕೀಯ ಸೌಲಭ್ಯದ ಅಗತ್ಯ ಇರುವವರಿಗೆ ಆದ್ಯತೆ
NAMMUR EXPRESS NEWS
ಬೆಂಗಳೂರು: ವೈದ್ಯಕೀಯ ಸೇವೆಗೆ ಪ್ರತ್ಯೇಕ ಪಡಿತರ ಚೀಟಿ ನೀಡಲು ಚಿಂತನೆ ನಡೆಸಲಾಗಿದೆ.
ಮನೆ ಮನೆ ಸರ್ವೆ ಮಾಡಿ ಸಲಹೆ ಪಡೆದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಬಿಪಿಎಲ್ ( B P L Card ) ಪಡಿತರಚೀಟಿದಾರರನ್ನು ಎ, ಬಿ ಎಂದು ವರ್ಗೀಕರಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಆರೋಗ್ಯ ಸೇವೆಗಾಗಿಯೇ ಪ್ರತ್ಯೇಕ ಪಡಿತರ ಚೀಟಿ ನೀಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಮನೆ ಮನೆ ಸರ್ವೆ ಮಾಡಿ ಸಲಹೆ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದ ಎಷ್ಟು ಜನ ಅಕ್ಕಿ ಮತ್ತು ಆರೋಗ್ಯ ಸೇವೆ ಎರಡನ್ನೂ ಕೂಡ ಬಯಸುತ್ತಾರೆ ಎಂಬುದು ಗೊತ್ತಾಗಲಿದೆ ಎಂದರು.
ಬಿಪಿಎಲ್ ಕಾರ್ಡ್ಗಾಗಿ ಹೊಸದಾಗಿ ಮೂರು ಲಕ್ಷ ಅರ್ಜಿಗಳು ಬಂದಿದ್ದು, ವೈದ್ಯಕೀಯ ಸೌಲಭ್ಯದ ಅಗತ್ಯ ಇರುವವರಿಗೆ ಆದ್ಯತೆ ನೀಡಲಾಗುವುದು. ಪರಿಶೀಲನೆ ನಡೆಸಿ ಅರ್ಹತೆಯುಳ್ಳವರಿಗೆ ನೀಡಲಾಗುವುದು. ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಹಣ ವರ್ಗಾವಣೆಯಾಗುತ್ತಿದ್ದು, ರಾಜ್ಯದಲ್ಲಿ 1, 28,17,337 ಪಡಿತರಚೀಟಿದಾರರು ಇದ್ದು, 97,27,165 ಪಡಿತರಚೀಟಿದಾರರಿಗೆ ಈ ರೀತಿ ಅಕ್ಕಿ ಬದಲು ಹಣ ವರ್ಗಾವಣೆಯಾಗಲಿದೆ ಎಂದರು.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023