ಸಾಲಾಗಿ ಮೂರು ದಿನಗಳ ಕಾಲ ರಜೆ..!
– ಮಲೆನಾಡಿನ ಪ್ರವಾಸಿ ತಾಣಗಳತ್ತ ಜನರ ದಂಡು.!
– ಹೋಟೆಲ್, ಹೋಂ ಸ್ಟೇ, ರೆಸ್ಟೋರೆಂಟ್ಗಳು ಫುಲ್
– ಪ್ರವಾಸಿ ತಾಣಗಳಲ್ಲಿ ವ್ಯಾಪಾರ ವಹಿವಾಟು ಚುರುಕು
NAMMUR EXPRESS NEWS
ಗಣರಾಜ್ಯೋತ್ಸವ ಶುಕ್ರವಾರ ಬಂದಿರುವುದರಿಂದ ಸಾಲಾಗಿ ಮೂರು ದಿನಗಳ ರಜೆಗಳನ್ನು ಬಳಸಿಕೊಂಡು ಮಲೆನಾಡಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಹಾಕುತ್ತಿದ್ದಾರೆ. ಕೇವಲ 3 ದಿನದಲ್ಲಿ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ವೀಕ್ಷಣೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರವಾಸಿ ತಾಣಗಳು ಫುಲ್: 3 ದಿನಗಳ ರಜೆಯ ಹಿನ್ನಲೆಯಲ್ಲಿ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದು, ಮಲೆನಾಡಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ವಿಶೇಷವಾಗಿ ಯುವಕ, ಯುವತಿಯರ ಸಂಖ್ಯೆ ಅಧಿಕವಾಗಿದೆ. ಮಲೆನಾಡಿನ ಸೊಬಗನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ.
ಹೋಟೆಲ್, ಹೋಂ ಸ್ಟೇ, ರೆಸ್ಟೋರೆಂಟ್ಗಳು ಫುಲ್!
ಮೂರು ದಿನಗಳ ರಜೆ ಪ್ರಯುಕ್ತ ಮಲೆನಾಡು ಮಾತ್ರವಲ್ಲದೆ ರಾಜ್ಯದ ಎಲ್ಲೆಡೆ ಪ್ರವಾಸೋದ್ಯಮ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಕುಟುಂಬ ಸಮೇತರಾಗಿ ಪ್ರವಾಸಿಗರು ಆಗಮಿಸಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಅಕ್ಕಪಕ್ಕದ ಹೋಟೆಲ್ ಸೇರಿದಂತೆ ಬಾರ್ ಅಂಡ್ ರೆಸ್ಟೋರೆಂಟ್ಗಳು ಭರ್ತಿ ಆಗುತ್ತಿವೆ. ಪ್ರವಾಸಿಗರ ದಟ್ಟಣೆಯಿಂದ ಹೋಟೆಲ್ಗಳು ರಶ್ ಆಗುತ್ತಿವೆ. ಹೋಟೆಲ್, ಹೋಂ ಸ್ಟೇ, ಡಾಬಾಗಳಲ್ಲಿ ಜನದಟ್ಟಣೆ ಇದ್ದು, ಬೆಳಗ್ಗೆ ಹಾಗೂ ಸಂಜೆ ವೇಳೆ ವಾಹನಗಳ ದಟ್ಟಣೆ ಕಂಡು ಬರುತ್ತಿದೆ. ಇನ್ನು ಪ್ರವಾಸಿ ತಾಣಗಳ ಬಳಿ ಕೂಡ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ.
ಬಸ್, ಹೋಂ ಸ್ಟೇಗಳಿಗೆ ಡಿಮ್ಯಾಂಡ್
ಬೆಂಗಳೂರು ಸೇರಿ ವಿವಿಧ ಭಾಗಗಳಿಂದ ಜನ ತಮ್ಮ ತಮ್ಮ ಊರುಗಳಿಗೆ ಹೊರಟಿದ್ದರಿಂದ ಬಸ್, ರೈಲುಗಳು ಭರ್ತಿಯಾಗಿದ್ದವು. ಪ್ರವಾಸಿ ತಾಣಗಳ ಬಳಿ ಹೋಂ ಸ್ಟೇ ಫುಲ್ ಆಗಿವೆ.