- ಕೊಪ್ಪಳದ ಕುಷ್ಟಗಿಯಲ್ಲಿ ಮನ ನೊಂದು ಸಾವು
- ಡೆತ್ನೋಟ್ ಪತ್ತೆ: ಅಂತ್ಯ ಕಂಡ ಗಂಗಾ ಬದುಕು
ಕೊಪ್ಪಳ: ಖ್ಯಾತ ಸಾಹಿತಿ ಮತ್ತು ಸಂಗೀತ ನಿರ್ದೇಶಕ ಕೆ. ಕಲ್ಯಾಣ ದಂಪತಿಗಳಲ್ಲಿ ವಿರಸಕ್ಕೆ ಕಾರಣವಾಗಿದ್ದ ಗಂಗಾ ಎಂಬ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ.
ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ ಕೆಲಸ ಕೊಡಿಸುವುದಾಗಿ ಸಂತೋಷ ಕುಲಕರ್ಣಿ ಎಂಬುವರಿಂದ 3 ಲಕ್ಷ ರೂ. ಪಡೆದಿದ್ದ ಗಂಗಾ ವಿರುದ್ಧ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದ ವಿಚಾರಣೆಗಾಗಿ ಗುರುವಾರ ಗಂಗಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ, ನ್ಯಾಯಾಲಯದ ಆವರಣದಲ್ಲೇ ಗಂಗಾ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾದರೂ, ಉಪಚಾರ ಫಲಿಸದೇ ಸಾವನ್ನಪ್ಪಿದ್ದಾರೆ.
ಆಪ್ತೆಯಾಗಿದ್ದಳು…: ಮೂಲತಃ ಬಾಗಲಕೋಟ ಜಿಲ್ಲೆಯ ಗಂಗಾ ಕುಲಕರ್ಣಿ ಉರ್ಫ್ ಜ್ಯೋತಿ, ಗೀತರಚನೆಕಾರ ಕೆ.ಕಲ್ಯಾಣ ಕುಟುಂಬದ ಆಪ್ತೆಯಾಗಿದ್ದಳು. ಅಲ್ಲದೇ, ಅವರ ಕುಟುಂಬವನ್ನು ಬೇರ್ಪಡಿಸಿದ ಆರೋಪ ಕೂಡ ಈಕೆಯ ಮೇಲಿತ್ತು. ಮೂಲತಃ ಬಾಗಲಕೋಟ ಜಿಲ್ಲೆಯವಳಾಗಿದ್ದ ಗಂಗಾ, ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದ ಸಂತೋಷ ಕುಲಕರ್ಣಿ ಎಂಬುವರನ್ನು ಕೆಲಸ ಕೊಡಿಸುವುದಾಗಿ 3 ಲಕ್ಷ ರೂ. ವಂಚಿಸಿದ್ದಳು.
ಈ ಕುರಿತಂತೆ ಕುಷ್ಟಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆಕೆ ಜೈಲು ಪಾಲಾಗಿದ್ದಳು. ನಂತರ ಜಾಮೀನು ಮೇಲೆ ಬಿಡುಗಡೆಗೊಂಡಿದ್ದಳು. ಇದೇ ಪ್ರಕರಣದಲ್ಲಿ ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿದ್ದಳು.
ನ್ಯಾಯಾಲಯದ ಆವರಣದಲ್ಲೇ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಗಂಗಾಳನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸದ್ದರು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.
ಡೆತ್ ನೋಟ್ನಲ್ಲಿ ಏನಿದೆ?: ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ್ದ ಪೆÇಲೀಸರು ಆಕೆಯ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಡೆತ್ ನೋಟ್ನಲ್ಲಿ ತನ್ನ ಜೀವನದ ಘಟನೆಯನ್ನು ತನಗಾದ ನೋವನ್ನು ಪ್ರತಿಯೊಂದನ್ನು ಬರೆದಿಟ್ಟಿದ್ದಾಳೆ. ನಾನು ಜ್ಯೋತಿ ಕುಲಕರ್ಣಿ, ಅಂದ್ರೆ ಗಂಗಾ ಕುಲಕರ್ಣಿ ನನ್ನ ಆತ್ಮಹತ್ಯೆಗೆ ನಾನೇ ಜವಾಬ್ದಾರಳು. ನನ್ನ ಮೇಲೆ ಅನೇಕ ಆಪಾದನೆಗಳು ಬಂದಿವೆ. ನನ್ನ ಮೇಲೆ ಬೆಳಗಾವಿ ಮತ್ತು ಕುಷ್ಟಗಿಯಲ್ಲಿ ಪ್ರಕರಣ ದಾಖಲಾಗಿವೆ.
ನನ್ನದೇನು ತಪ್ಪಿಲ್ಲ ಆದರೂ ನನ್ನ ಮೇಲೆ ಕೇಸ್ ಮಾಡಿಸಿದ್ದಾರೆ. ನಾನು ಜೈಲಿಗೆ ಹೋಗಿ ಬಂದಿದ್ದು, ಜೈಲಿನಿಂದ ಹೊಂದ ಬಂದ ಮೇಲೆ ನನ್ನ ಹೆಸರು ಗಂಗಾ ಕುಲಕರ್ಣಿ ಎಂದು ಬದಲಾಯಿಸಿಕೊಂಡಿದ್ದು ಜನರಿಗೆ ಮೋಸ ಮಾಡಲಿಕ್ಕಲ್ಲ. ನನ್ನ ವೈಯಕ್ತಿಕ ಕಾರಣದಿಂದ ನಾನು ಬಹಳ ನೊಂದಿದ್ದೇನೆ. ನನ್ನ ಎರಡು ಮಕ್ಕಳು ನಾನು ಜೈಲಿಗೆ ಹೋಗಿ ಬಂದಿದ್ದಕ್ಕೆ ಎಲ್ಲರೂ ನನ್ನ ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಿದೆ. ಪಾಪ ಪ್ರಜ್ಞೆ ಕಾಡುತ್ತಿದೆ. ಅದಕ್ಕಾಗಿ ನಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾಳೆ.
ಕೆ.ಕಲ್ಯಾಣ್ ಕುಟುಂಬ ವಲಯದಲ್ಲೇ ಗುರುತಿಸಿಕೊಂಡು ಅವರ ಕುಟುಂಬವನ್ನೇ ದೂರ ಮಾಡಿದ ಆರೋಪ ಹೊತ್ತಿದ್ದ ಜ್ಯೋತಿ ಕುಲಕರ್ಣಿ, ಪಾಪ ಪ್ರಜ್ಞೆಯೊಂದು ಈ ರೀತಿ ಸಾವಿಗೀಡಾಗಿದ್ದು ದುರಂತವೇ ಸರಿ.