- ಲಕ್ಷ್ಮೀನಾರಾಯಣ ದಸರಾ ಮಹೋತ್ಸವಕ್ಕೆ ಕರಿಛಾಯೆ
- 107 ವರ್ಷದ ಇತಿಹಾಸ ಹೊಂದಿರುವ ಜಾತ್ರೆ ರದ್ದು
ಧಾರವಾಡ: ಸುಮಾರು 107 ವರ್ಷದ ಇತಿಹಾಸವಿರುವ ಧಾರವಾಡ ನಗರದ ಪ್ರಸಿದ್ಧ ಲಕ್ಷ್ಮೀನಾರಾಯಣ ಜಾತ್ರಾ ಮಹೋತ್ಸವವು ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ನಡೆಯಲಿದೆ. ಭಾನುವಾರ ಪೇಟೆಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ ಆಚರಿಸಲಾಗುತ್ತಿದ್ದ ದಸರಾ ಮಹೋತ್ಸವಕ್ಕೆ ಕೋವಿಡ್ ಕರಿಛಾಯೆ ಆವರಿಸಿದ್ದು, ಕೇವಲ ಸಾಂಪ್ರದಾಯಿಕ ಪೂಜೆಗೆ ಮಾತ್ರವೇ ಸೀಮಿತವಾಗಲಿದೆ.
ಭಕ್ತಾಧಿಗಳಿಗೆ ಹೊರಗಿನಿಂದ ಮಾತ್ರವೇ ದರ್ಶನಾವಕಾಶ ಕಲ್ಪಿಸಲಾಗಿದೆ.
ಲಕ್ಷ್ಮೀನಾರಾಯಣ ಜಾತ್ರೆ ಕೇವಲ 9 ದಿನಕ್ಕೆ ಸೀಮಿತವಲ್ಲ. ಬದಲಿಗೆ ಒಂದು ತಿಂಗಳ ಜಾತ್ರೆ. ಆದರೆ ಜಿಲ್ಲಾಡಳಿತದ ಆದೇಶದನ್ವಯ 107 ವರ್ಷದ ಇತಿಹಾಸ ಹೊಂದಿರುವ ಈ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಈ ವರ್ಷ ಜಾತ್ರೆಯಲ್ಲಿ ಅಂಗಡಿ ಹಾಕಲು ಅವಕಾಶಇಲ್ಲ. ಕೇವಲ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮ ನಡೆಯಲಿದೆ.ಕೋವಿಡ್ ನಿಯಂತ್ರಣ ಅನಿವಾರ್ಯ ಇರುವುದರಿಂದ ಸರ್ಕಾರದ ಆದೇಶ ಪಾಲಿಸಲಾಗುತ್ತಿದೆ ಎಂದು ದೇವಸ್ಥಾನದ ಕಮಿಟಿ ಮುಖ್ಯಸ್ಥ ಅಮರಟಿಕಾರೆ ತಿಳಿಸಿದ್ದಾರೆ.
ದೇವಾಲಯಕ್ಕೆ ಸಾಂಪ್ರದಾಯಿಕ ಶೈಲಿಯ ಅಲಂಕಾರ 9 ದಿನಕ್ಕೆ ಸೀಮಿತವಾಗಿ ಹತ್ತನೇ ದಿನದ ದಶಮಿಗೆ ಮುಗಿದರೂ ಜಾತ್ರೆಗೆ ಬಂದ ಮಾರಾಟಗಾರರು ಬರೋಬ್ಬರಿಒಂದು ತಿಂಗಳು ಠಿಕಾಣಿ ಹೂಡುವುದುವಾಡಿಕೆಯಾಗಿತ್ತು. ಪ್ರತಿದಿನ ಸಂಜೆಜಾತ್ರೆಗೆ ಲಗ್ಗೆ ಇಡುತ್ತಿದ್ದ ಮಹಿಳೆಯರು ಮನೆಗೆ ಬೇಕಾಗುವ ಅಡುಗೆ, ಅಲಂಕಾರಿಕ ವಸ್ತುಗಳು, ನಾನಾ ಬಗೆಯ ಬಟ್ಟೆ, ಬ್ಯಾಗ್ಸೇರಿದಂತೆ ವಿವಿಧ ಬಗೆಯ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಆದರೆ ಈ ಬಾರಿ ಇವೆಲ್ಲವೂ ಇಲ್ಲದಾಗಿದೆ. ಪ್ರತಿವರ್ಷ ಒಂದು ತಿಂಗಳ ಕಾಲ ಜಾತ್ರೆಯಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡುತ್ತಿದ್ದೆವು. ಆದರೆ ಈ ಬಾರಿ ಅದಕ್ಕೆ ಅವಕಾಶವಿಲ್ಲ. ವ್ಯಾಪಾರ ಹಾಳಾಗಿದ್ದು, ದಿಕ್ಕೇ ತೋಚುತ್ತಿಲ್ಲ ಎಂಬುದು ವ್ಯಾಪಾರಸ್ಥರ ಅಳಲಾಗಿದೆ. ಬಹುತೇಕ ಕಡೆ ಎಲ್ಲಾ ಜಾತ್ರೆ, ಹಬ್ ರದ್ದು ಮಾಡಲಾಗಿದೆ.