- ಕಲಬುಗಿಯ ಸೇಡಂನಲ್ಲಿ 4.22 ಲಕ್ಷ ಪತ್ತೆ
- ಕಂತೆ ಕಂತೆ ಖೋಟಾ ನೋಟು: ಓರ್ವ ಅರೆಸ್ಟ್!
ಕಲಬುರಗಿ: ಕಂತೆ ಕಂತೆ ಖೋಟಾ ನೋಟುಗಳನ್ನು ಬ್ಯಾಗಿನಲ್ಲಿಟ್ಟು ಬೇರೆಡೆ ಸಾಗಿಸಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಕಲಬುರಗಿ ಪೆÇೀಲೀಸರು ಬಂಧಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹಲವೆಡೆ ಕಳ್ಳ ನೋಡು ದಂಧೆ ಸಕ್ರೀಯವಾಗಿದೆ ಎಂಬುದಕ್ಕೆ ಪುರಾವೆ ಸಿಕ್ಕಿದೆ. ಈ ಹಿನ್ನೆಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿಯನ್ನು ಸೇಡಂ ಆಶ್ರಯ ಕಾಲೋನಿ ನಿವಾಸಿ ಚಿನ್ನಸಾಬ ಮಳಗಿ ಎಂದು ಗುರುತಿಸಲಾಗಿದೆ. ಈತನಿಂದ 500, 200 ಮತ್ತು 100 ರೂಪಾಯಿ ಮುಖ ಬೆಲೆಯ 4.22 ಲಕ್ಷ ರೂಪಾಯಿ ಮೌಲ್ಯದ ಖೋಟಾ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ಒಂದು ಬೈಕ್ ಹಾಗೂ ಮೊಬೈಲ್ ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ. ಖೋಟಾನೋಟು ಎಲ್ಲಿ ತಯಾರಾಗುತ್ತಿತ್ತು? ಅದನ್ನೆಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎನ್ನುವ ಬಗ್ಗೆ ಹೆಚ್ಚಿನ ತನಿಖೆಯಿಂದ ತಿಳಿಯಬೇಕಿದೆ. ಈ ಮೂಲಕ ಮತ್ತೆಕಳ್ಳ ನೋಟು ಸದ್ದು ಮಾಡಿದೆ.