- ನಿವೃತ್ತ ಪ್ರಾಂಶುಪಾಲನ ಕೊಲೆ: ಹುಬ್ಬಳ್ಳಿಯಲ್ಲಿ ಘಟನೆ
- ಪತಿ ಬಿಟ್ಟು ತಂದೆ ಮನೆಗೆ ಪತ್ನಿ ಬಂದಿದ್ದಕ್ಕೆ ರೋಷಾವೇಷ
ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನೇ ಮಾವನನ್ನು ಕೊಚ್ಚಿ ಕೊಲೆಗೈದ ಘಟನೆ ಶನಿವಾರ ಬೆಳಗಿನ ಜಾವ ವಿದ್ಯಾನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ಲಿಂಗರಾಜನಗರದ ಕಟ್ಟಿಮಂಗಳಮ್ಮ ದೇವಸ್ಥಾನ ಬಳಿವಿರುವ ನಿವಾಸದಲ್ಲಿ ನಡೆದಿದೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾಗಿದ್ದ ಎಸ್.ಎಸ್. ಮುಶಣ್ಣವರ ಕೊಲೆಯಾದ ದುರ್ದೈವಿ. ಗದಗಿನ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ಹುಬ್ಬಳ್ಳಿಯಲ್ಲಿ ಬಂದು ನೆಲೆಸಿದ್ದರು. ಮುಶಣ್ಣವರ ಅವರ ಮಗಳ ಪತಿ ಸಂತೋಷ ಜಿ.ಎಸ್. ಎಂಬುವನೇ ಹತ್ಯೆಗೈದ ಆರೋಪಿ. ಸದ್ಯ ಸಂತೋಷನನ್ನು ಬಂಧಿಸಿರುವ ಪೆÇಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಕುಟುಂಬವನ್ನೇ ಕೊಲ್ಲುವ ಬೆದರಿಕೆ!: ಸಂತೋಷ ಜಿ.ಎಸ್., ತನ್ನ ಪತ್ನಿಯೊಂದಿಗೆ ಆಗಾಗ ಜಗಳ ಕಾಯುತ್ತಿದ್ದ. ಇದರಿಂದ ಬೇಸತ್ತು ಆಕೆ, ಗಂಡನ ಮನೆ ತೋರೆದು ತವರು ಮನೆಯಲ್ಲಿ ವಾಸವಾಗಿದ್ದಳೆನ್ನಲಾಗಿದೆ. ಪತ್ನಿ ಹಾಗೂ ಮಕ್ಕಳು ತನ್ನೊಟ್ಟಿಗೆ ಇರದಿದ್ದರಿಂದ ರೊಚ್ಚಿಗೆದಿದ್ದ ಸಂತೋಷ, ತನ್ನ ಸಂಸಾರ ಹಾಳು ಆಗಲು ಪತ್ನಿಯ ತವರು ಮನೆಯವರೇ ಕಾರಣ ಎಂದು ದೂಷಿಸುತ್ತಿದ್ದನಲ್ಲದೇ, ಇಡೀ ಕುಟುಂಬವನ್ನೇ ಕೊಲ್ಲುವುದಾಗಿ ಬೆದರಿಕೆಯೊಡ್ಡುತ್ತಿದ್ದ ಎಂದು ಗೊತ್ತಾಗಿದೆ.
ಇದೇ ಕಾರಣಕ್ಕಾಗಿ ಪತ್ನಿ ಮನೆಯವರಿಗೆಲ್ಲರಿಗೂ ಜೀವ ಸಹಿತಿ ಬಿಡುವುದಿಲ್ಲ ಎಂದು ಕೈಯಲ್ಲಿ ಮಚ್ಚು ಹಿಡಿದುಕೊಂಡೇ ಓಡಾಡುತ್ತಿದ್ದ ಎಂದು ಹೇಳಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಮುಶಣ್ಣವರ ಮಕ್ಕಳು ಮನೆಯಲ್ಲೇ ಇದ್ದರಿಂದ ಆರೋಪಿಯನ್ನು ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ
ಪೊಲೀಸ್ ಆಯುಕ್ತ ಲಾಬುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ವಿದ್ಯಾನಗರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.