- ಚಿನ್ನಾಭರಣ ಕದ್ದು ಪರಾರಿಯಾಗುವ ವೇಳೆ ಘಟನೆ
- ಮಹಿಳೆ ಆಸ್ಪತ್ರೆಗೆ ದಾಖಲು: ರಾಯಚೂರಲ್ಲಿ ಪ್ರಕರಣ
ರಾಯಚೂರು: ಕಳ್ಳತನಕ್ಕೆ ಬಂದ ತಂಡ ಚಿನ್ನಾಭರಣ ಕಳವು ಮಾಡಲು ಮಹಿಳೆಯೊಬ್ಬಳ ಕಿವಿಯನ್ನೇ ಕತ್ತರಿಸಿದ ಅಪರೂಪದ ಘಟನೆ ರಾಯಚೂರು ತಾಲೂಕಿನ ಕುಕುನುರು ಗ್ರಾಮದಲ್ಲಿ ನಡೆದಿದೆ. ಕಳ್ಳತನಕ್ಕೆ ಆಗಮಿಸಿದ್ದ ಮೂವರು ಖದೀಮರು ನಗದು ಚಿನ್ನಾಭರಣ ಕಳವು ಮಾಡಿದ್ದು, ಇದಕ್ಕೆ ಅಡ್ಡಿಪಡಿಸಲು ಬಂದ ಮಹಿಳೆ ಕಿವಿಯನ್ನೇ ಕತ್ತರಿಸಿದ್ದಾರೆ. ಇದೀಗ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮಳೆ ಸುರಿದ ಪರಿಣಾಮ ವಿದ್ಯುತ್ ಕಡಿತಗೊಂಡಿದ್ದ ವೇಳೆ ಕಳ್ಳರು ಗ್ರಾಮದ ಹನುಮಂತ್ರಾಯ ಅವರ ಮನೆಯಲ್ಲಿ ಕಳ್ಳತನ ನಡೆಸಿದ್ದು ಹಣ ನಗದು ಸೇರಿದಂತೆ ಕೆಲ ದಾಖಲೆಗಳನ್ನು ಕದಿದ್ದಾರೆ. ಈ ವೇಳೆ ಅಡ್ಡಬಂದ ಮಹಿಳೆಯ ಕವಿ ಕತ್ತರಿಸಿದ್ದಾರೆ. ಸ್ಥಳೀಯರೆಲ್ಲರೂ ಸೇರಿ ಕಳ್ಳರ ಗುಂಪಿನಲ್ಲಿದ್ದ ಅದೇ ಗ್ರಾಮದ ಮನೋಜ್ ಎನ್ನುವ ಯುವಕನನ್ನು ಹಿಡಿದ ಗ್ರಾಮಸ್ಥರು ಗಿಡಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಠಾಣೆ ಪೆÇಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ.