- ಎಲ್ಲೆಲ್ಲೂ ಜನ: ಮೋದಿ ಹೆಸರಿನ ಜೈಕಾರ
- 3,700 ಕೋಟಿ ರೂ ಯೋಜನೆಗೆ ಚಾಲನೆ
NAMMUR EXPRESS NEWS
ಮಂಗಳೂರಿನಲ್ಲಿ ಶುಕ್ರವಾರ ವಿವಿಧ ಯೋಜನೆಗಳಿಗೆ ಮೋದಿ ಶಿಲಾನ್ಯಾಸ ನೆರವೇರಿಸಿದ್ದು ಒಟ್ಟು 3,700 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಪ್ರಧಾನಿಯಾದ ಬಳಿಕ ಮೋದಿ ಮೊದಲ ಬಾರಿಗೆ ಕರಾವಳಿಗೆ ಆಗಮಿಸಿದ್ದು ಭಾರೀ ಜನಸ್ತೋಮ ಕಂಡು ಬಂತು. ಎಲ್ಲಿ ನೋಡಿದರೂ ಜನರೇ ಕಾಣಿಸುತ್ತಿದ್ದರು.
ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಸುನಿಲ್ ಕುಮಾರ್, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಅನೇಕ ಗಣ್ಯರು ಹಾಜರಿದ್ದರು. ಅಚ್ಚರಿ ಎಂದರೆ ಕರಾವಳಿ ನಾಯಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಭಾರತದ ಸಮುದ್ರ ಶಕ್ತಿಗೆ ದೊಡ್ಡ ದಿನ. ಸೇನೆ, ಆರ್ಥಿಕ ಸುರಕ್ಷತೆಯಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ. ಕಐಎನ್ಎಸ್ ವಿಕ್ರಾಂತ್ ಲೋಕಾರ್ಪಣೆ ಮಾಡಿದ್ದೇನೆ. ಮಂಗಳೂರಲ್ಲಿ 3,800 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದೆ. 8 ವರ್ಷಗಳಲ್ಲಿ ಕರ್ನಾಟಕಕ್ಕೆ 70 ಸಾವಿರ ಕೋಟಿಯ ಹೈವೇ ಸಿಕ್ಕಿದೆ. ಮಂಗಳೂರು-ಚೆನ್ನೈ ಎಕ್ಸ್ಪ್ರೇಸ್ ವೇ ಆಗ್ತಿದೆ. ಬೆಂಗಳೂರು-ಮೈಸೂರು ಹೈವೇ ಯೋಜನೆ ಆಗ್ತಿದೆ ಎಂದರು.
ಮಂಗಳೂರು ಬಂದರು ವಿಸ್ತರಣೆ ಆಗಿದೆ. ಮಂಗಳೂರಿನ ಮೀನುಗಾರರ ಗಳಿಕೆ ಹೆಚ್ಚಿಸಲು ಯೋಜನೆ ತಂದಿದ್ದೇವೆ. ಕರ್ನಾಟಕದ ಜನತೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆಗಳಿಂದ ಕರ್ನಾಟಕದಲ್ಲಿ ವ್ಯಾಪಾರ ಹೆಚ್ಚಳವಾಗಲಿದೆ. ಕರ್ನಾಟಕದಲ್ಲಿ ಉದ್ಯೋಗ, ಉದ್ದಿಮೆ ಹೆಚ್ಚಾಗಲಿದೆ ಅಂತಾ ಮೋದಿ ಹೇಳಿದರು.
ರೈತರು, ಮೀನುಗಾರರು ಅಂತಾರಾಷ್ಟ್ರೀಯ ಮಟ್ಟಕ್ಕೇರಲು ಈ ಯೋಜನೆಗಳು ಸಹಕಾರಿಯಾಗಲಿದೆ. ಮೇಕ್ ಇನ್ ಇಂಡಿಯಾ ವಿಸ್ತರಣೆ ಅತ್ಯಂತ ಮುಖ್ಯವಾಗಿದೆ.
ಅಭಿವೃದ್ಧಿ ಭಾರತಕ್ಕೆ ಜಗತ್ತಿನೆಲ್ಲೆಡೆ ನಮ್ಮ ವಸ್ತುಗಳು ಮಾರಾಟವಾಗ್ಬೇಕು.ಕರ್ನಾಟಕ, ದೇಶದ ಅಭಿವೃದ್ಧಿ ಆಗಲಿದೆ
ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಲಾಭ ಆಗಿದೆ. ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುವ ವಿಶ್ವಾಸ ಇದೆ. ಕರಾವಳಿ, ಪಶ್ಚಿಮಘಟ್ಟ ಪ್ರವಾಸಿಗರನ್ನ ಸೆಳೆಯುತ್ತಿವೆ. ಭಾರತದಲ್ಲಿ ಮಧ್ಯಮ ವರ್ಗದ ಶಕ್ತಿ ಹೆಚ್ಚುತ್ತಿದೆ. ಕ್ರೂಸ್ ಟೂರಿಸಂ ಕೂಡ ಎಂದರು.
ಮೋದಿ ನೋಡಲು ಹರಿದು ಬಂದ ಜನಸಾಗರ
- ಜನರನ್ನು ಹದ್ದು ಬಸ್ತಿನಲ್ಲಿಡಲು ಪೊಲೀಸರ ಹರಸಾಹಸ
ಮಂಗಳೂರಿನ ಜನತೆ ಈ ಬಾರಿಯೂ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರಧಾನಿ ಮೋದಿಗೆ ಮೋದಿ ಪಠಣದ ಸ್ವಾಗತ ಕೋರಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಕೂಳೂರಿನ ಗೋಲ್ಡ್ ಫಿಂಚ್ ಸಿಟಿಗೆ ಹೋಗುವ ರಸ್ತೆಗಳಲ್ಲಿ ಬಿಸಿಲನ್ನೂ ಲೆಕ್ಕಿಸದೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಹಿಂದಿನ ಬಾರಿಯೂ ಮೋದಿಯವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಇದೇ ರೀತಿ ಜನಸಾಗರ ಹರಿದು ಬಂದಿತ್ತು, ಮತ್ತು ಇದನ್ನು ಮೋದಿ ಅವರು ತಮ್ಮಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಬಾರಿಯೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಪೊಲೀಸರು ಜನರನ್ನು ಹದ್ದು ಬಸ್ತಿನಲ್ಲಿಡಲು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದವು.
3,700 ಕೋಟಿಯ ಯೋಜನೆಗಳಿಗೆ ಮೋದಿ ಚಾಲನೆ
ಬಂದರಿನ 14ನೇ ಬರ್ತ್ ಯಾಂತ್ರೀಕರಣ ಲೋಕಾರ್ಪಣೆ: ₹281 ಕೋಟಿ
ಬಂದರು ಬಿಟುಮಿನ್ ಸಂಗ್ರಹಗಾರದ ಶಿಲಾನ್ಯಾಸ : ₹100 ಕೋಟಿ
ಪಿಎಂ ಗತಿಶಕ್ತಿ ಯೋಜನೆಯಡಿ ಹೆದ್ದಾರಿ ಅಭಿವೃದ್ಧಿಗೆ ಚಾಲನೆ
ಶೇಖರಣಾ ಟ್ಯಾಂಕ್, ತೈಲ ಸಂಗ್ರಹಗಾರದ ಶಿಲಾನ್ಯಾಸ: ₹100 ಕೋಟಿ
MRPLನ ಶುದ್ಧ ನೀರಿನ ಪ್ಲಾಂಟ್ ಉದ್ಘಾಟನೆ: ₹677 ಕೋಟಿ
MRPL 6ನೇ ಇಂಧನ ಸ್ಥಾವರ ಘಟಕ ಉದ್ಘಾಟನೆ:₹1,829 ಕೋಟಿ
MRPL ಎಲ್ಪಿಜಿ ಸ್ಟೋರೇಜ್ ಘಟಕ ಉದ್ಘಾಟನೆ: ₹500 ಕೋಟಿ
ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಘಟಕ: ₹200 ಕೋಟಿ
ಯಡಿಯೂರಪ್ಪ ಪಕ್ಕ ಕೂರಿಸಿಕೊಂಡ ಮೋದಿ!
ಮಂಗಳೂರಿನಲ್ಲಿ ಪ್ರಧಾನಿ ಮೋದಿ ವೇದಿಕೆಗೆ ಬರುತ್ತಿದ್ದಂತೆ ಮಾಜಿ ಸಿಎಂ ಯಡಿಯೂರಪ್ಪರನ್ನು ವೇದಿಕೆಗೆ ಕರೆದರು. ಬಳಿಕ ವೇದಿಕೆಯಲ್ಲಿ ತಮ್ಮ ಸಾಲಿನಲ್ಲೇ ಕೂರಿಸಿದರು. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದ ವೇದಿಕೆಗೆ ಯಡಿಯೂರಪ್ಪರಿಗೆ ಆಹ್ವಾನ ಇರಲಿಲ್ಲ. ಯಡಿಯೂರಪ್ಪ ಅಧಿಕಾರದಿಂದ ಇಳಿದ ನಂತರ ಮೋದಿಯವರ ಮೊದಲ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಇದ್ದರು. ಚುನಾವಣೆ ಹತ್ತಿರವಾಗ್ತಿದ್ದಂತೆ ಬಿಜೆಪಿಗೆ ಯಡಿಯೂರಪ್ಪ ಮತ್ತಷ್ಟು ಅನಿವಾರ್ಯ ಆಗ್ತಿದ್ದಾರೆ. ಇದೇ ಸುಳಿವಲ್ಲೋ ಏನೋ ಮೋದಿಯವರು ತಮ್ಮ ಜೊತೆಯ ಮೊದಲ ಸಾಲಿನಲ್ಲೇ ಬಿಎಸ್ವೈಗೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟರು. ಇನ್ನು ಪ್ರಧಾನಿ ಮೋದಿಗೆ ಉಡುಪಿ ಶ್ರೀಕೃಷ್ಣ ವಿಗ್ರಹ ನೀಡಿ ಗೌರವಿಸಲಾಯಿತು.