ಅಡಿಕೆ ವ್ಯಾಪಾರಸ್ಥರಿಗೆ ಮಂಗಳೂರಿನಲ್ಲಿ 2 ಕೋಟಿ ರೂ. ಗೋಲ್ಮಾಲ್!
– ಅಡಿಕೆ ಖರೀದಿ ಮಾಡಿಕೊಂಡು ಹಣ ಕೊಡದೆ ವಂಚನೆ: ದೂರು ದಾಖಲು
– ವಂಚನೆ ಹೇಗೆ..? ಏನು ಇತ್ತ..?.. ಇಲ್ಲಿದೆ ಡೀಟೇಲ್ಸ್
NAMMUR EXPRESS NEWS
ಮಂಗಳೂರು: ಮಂಗಳೂರಿನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿರುವುದರಿಂದ ಒಣ ಅಡಿಕೆ ಖರೀದಿ ಮಾಡಿರುವ ವ್ಯಾಪಾರಸ್ಥರು ಸುಮಾರು 2 ಕೋಟಿ ರೂ. ವಂಚಿಸಿರುವ ಪ್ರಕರಣ ದಾಖಲಾಗಿದೆ.
ರಾಹುಲ್ ಗುಪ್ತಾ ಎಂಬವರು ಕಪಿಲ್ ಮಟ್ಟಾನಿ ಎಂಬಾತನಿಗೆ ಮಾ.29ರಂದು 61 ಚೀಲ ಅಡಿಕೆ ಮಾರಾಟ ಮಾಡಿದ್ದು, ಅದೇ ನಂಬಿಕೆ ಮೇಲೆ ಮೇ 17ರಿಂದ ಜೂ.10ರವರೆಗೆ ಸಾಕಷ್ಟು ಅಡಿಕೆ ಮಾರಾಟ ಮಾಡಿದ್ದಾರೆ. ಆದರೆ, 85,47,139ರೂ. ಬಾಕಿ ಉಳಿಸಿಕೊಂಡಿದ್ದಾರೆ. ಹಣದ ಬಗ್ಗೆ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ.ಕಪಿಲ್ ಮಟ್ಟಾನಿ ಮತ್ತು ಕಮಲ್ ಮಟ್ಟಾನಿ ಸೇರಿಕೊಂಡು ಅಮಿತ್ ಶರ್ಮ, ವಿನಯ್ ಶರ್ಮ, ಸಿದ್ಧಾರ್ಥ ಶರ್ಮ ಅವರಿಂದ ಹಾಗೂ ಇತರರಿಂದ ಖರೀದಿಸಿದ ಒಣ ಅಡಿಕೆಯ ಒಟ್ಟು 1,34,71,854 ರೂ. ಬಾಕಿ ಉಳಿಸಿಕೊಂಡು ವಂಚಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹಬೀಬ್ ರಹಿಮಾನ್ ಕೆ. ಹಾಗೂ ಸೂಫಿ ಇಬ್ರಾಹಿಂ ಅವರ ಕಂಪೆನಿಯಿಂದ ಒಣ ಅಡಿಕೆ ಪಡೆದುಕೊಂಡಿರುವ ಕಮಲೇಶ್ ಪಡಲಿಯಾ 59,61,973ರೂ. ಬಾಕಿ ಇರಿಸಿಕೊಂಡಿದ್ದಾನೆ. ಇದೇರೀತಿ ಹಲವು ಅಡಿಕೆ ವ್ಯಾಪಾರಸ್ಥರಿಗೆ ಹಣ ಬಾಕಿ ಉಳಿಸಿಕೊಂಡಿದ್ದು, ಕೋಟ್ಯಂತರ ಹಣ ವಂಚಿಸಿರುವುದಾಗಿ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.