- ಭಟ್ಕಳ ಬಂದರಿನಲ್ಲಿ ಕ್ರೇನ್ ಸಹಾಯದಿಂದ ಮೀನು ಸಾಗಣೆ
ಭಟ್ಕಳ( ಉತ್ತರ ಕನ್ನಡ): ಮೀನು ಅಂದರೆ ಎಷ್ಟಿರಬಹುದು 50 ರಿಂದ 100 ಕೆ.ಜಿ!. ಆದರೆ ಅಚ್ಚರಿ ಎಂಬಂತೆ ಭಟ್ಕಳ ಬಂದರಿನಲ್ಲಿ ಬುಧವಾರ ರಾತ್ರಿ ಸುಮಾರು 400 ಕೆಜಿ( 4ಕ್ವಿಂಟಾಲ್), 2 ಮೀಟರ್ ಉದ್ದದ ಮೀನು ಮೀನುಗಾರರ ಬಲೆಗೆ ಬಿದ್ದಿದೆ.
ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ, ಜಯದುರ್ಗ ಗಣೇಶ ಬೋಟುಗಳಿಗೆ ಬೃಹತ್ ಗಾತ್ರದ ತೊರ್ಕೆ ಮೀನುಗಳು ದೊರಕಿದ್ದು, ಒಂದೊಂದು ಮೀನುಗಳು ಅಂದಾಜು 300ರಿಂದ 400 ಕೆಜಿ ತೂಕವಿದೆ. ಸುಮಾರು 2 ಮೀಟರ್ ಉದ್ದದ ಮೀನು ಇದಾಗಿದ್ದು, ಈ ಮೀನುಗಳನ್ನು ಬೃಹತ್ ಕ್ರೇನಿನ ಸಹಾಯದಿಂದ ಮೇಲಕ್ಕೆತ್ತಲಾಗಿದೆ. ವೈಜ್ಞಾನಿಕವಾಗಿ ರೇ ಫೀಶ್, ಮೆಂಟ್ ರೇ ಎಂದು ಕರೆಯಲ್ಪಡುವ ಈ ಮೀನು ಸಂಪೂರ್ಣ ಬೆಳವಣಿಗೆಯ ನಂತರ ಸುಮಾರು ನಾಲ್ಕು ಸಾವಿರ ಪೌಂಡ್ ತೂಕ ಹೊಂದಿರುತ್ತದೆ. ಮೀನುಗಾರರು ಪ್ರಯಾಸಪಟ್ಟು ಈ ಮೀನನ್ನು ದಡಕ್ಕೆ ತಂದು ಕ್ರೇನ್ ಸಹಾಯದಿಂದ ಮೇಲಕ್ಕೆ ತರಲಾಯಿತು. ಬೃಹತ್ ಗಾತ್ರದ ಮೀನನ್ನು ನೋಡಲು ಅಕ್ಕ ಪಕ್ಕದ ನೂರಾರು ಜನರು ಮುಗಿ ಬಿದ್ದರು.