ಉಡುಪಿಯಲ್ಲಿ ಸಿದ್ಧವಾಗ್ತಿದೆ 80 ಕೆಜಿ ಬೆಳ್ಳಿಯ ಪುಷ್ಪರಥ!
– ಬೆಂಗಳೂರಿನ ರಾಯರಮಠಕ್ಕೆ ರಥ ನಿರ್ಮಾಣ
– ದೇಶ ವಿದೇಶದಲ್ಲಿ ಉಡುಪಿ ಶಿಲ್ಪಿಗಳ ಕೈಚಳಕ!
NAMMUR EXPRESS NEWS
ಉಡುಪಿ: ರಾಜ್ಯ, ದೇಶದ ವಿವಿಧ ದೇವಾಲಯಗಳಿಗೆ ಉಡುಪಿಯ ಶಿಲ್ಪಿಗಳೇ ಮರದ ಹಾಗೂ ವಿವಿಧ ಲೋಹದ ಅನೇಕ ರಥಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇದೀಗ ಬೆಂಗಳೂರಿನ ಹೊಸಕೆರೆಹಳ್ಳಿ ರಾಯರ ಮಠಕ್ಕೆ ಸುಮಾರು 80 ಕೆಜಿ ಬೆಳ್ಳಿಯ ಪುಷ್ಪ ರಥ ಉಡುಪಿಯಲ್ಲಿ ನಿರ್ಮಾಣವಾಗಿದೆ.
ಇದನ್ನು ಚಂದ್ರಮಂಡಲ ರಥ ಎಂದು ಕರೆಯಲಾಗುತ್ತದೆ. ಈ ರಥವನ್ನು ಉಡುಪಿಯ ಕಬ್ಯಾಡಿ ದೇವರತ್ನ ಶಿಲ್ಪ ಶಾಲೆಯ ಶಿಲ್ಪಿ ಗುರುರಾಜ ಆಚಾರ್ಯರವರು ತಮ್ಮ ತಂಡದ ಜೊತೆ ರಚಿಸಿದ್ದಾರೆ.
ಸುಮಾರು 22 ದಿನ ನಿರಂತರ ಬೆಳ್ಳಿಯ ಕುಸುರಿ ಕೆಲಸದೊಂದಿಗೆ ರಥವನ್ನು ನಿರ್ಮಿಸಲಾಗಿದೆ. ಇಲ್ಲಿನ ರಾಯರ ಮಠದ ಸನ್ನಿಧಿಯಲ್ಲಿ ನಿರ್ಮಿಸಿ ಕೊಟ್ಟಿದ್ದು, ಈ ಪುಷ್ಪ ರಥದ ನಿರ್ಮಾಣ ವೆಚ್ಚವು ಸುಮಾರು 80 ಲಕ್ಷ ಆಗಿರುತ್ತದೆ ಎಂದು ತಿಳಿದು ಬಂದಿದೆ.