ಹೆಬ್ರಿಯಲ್ಲಿ ನಡೆಯಿತು ಮನ ಕಲಕುವ ಘಟನೆ!
– ಬಸ್ಸಿನಲ್ಲಿ ಅಸ್ವಸ್ಥಗೊಂಡಿದ್ದ ಯುವತಿ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದರು
– ಮುಸ್ಲಿಂ ಯುವತಿಯಿಂದ ಹಿಂದೂ ಯುವತಿಗೆ ಉಸಿರು!
– ಕೋಟೇಶ್ವರ: ನಡೆದುಕೊಂಡು ಹೋಗುತ್ತಿದ್ದವನ ಬಲಿ ಪಡೆದ ಟಿಪ್ಪರ್!
NAMMUR EXPRESS NEWS
ಹೆಬ್ರಿ: ಶಿವಮೊಗ್ಗದಿಂದ ಉಡುಪಿಯತ್ತ ಬರುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಅಸ್ವಸ್ಥಗೊಂಡ ಯುವತಿಯೋರ್ವಳನ್ನು ಬಸ್ ಸಿಬ್ಬಂದಿಗಳು ನೇರವಾಗಿ ಹೆಬ್ರಿಯ ಸರ್ಕಾರಿ ಸಮುದಾಯ ಕೇಂದ್ರ ಆಸ್ಪತ್ರೆಗೆ ದಾಖಲು ಮಾಡಿ ಜೀವ ಉಳಿಸಿದ ಘಟನೆ ಸೆ. 30 ರಂದು ಸೋಮವಾರ ಸಂಜೆ ನಡೆದಿದೆ.
ಅಸ್ವಸ್ಥ ಗೊಂಡ ಪ್ರಯಾಣಿಕ ಯುವತಿ ಸುರಕ್ಷಾ ಎಂದು ತಿಳಿದು ಬಂದಿದೆ.
ಇವರು ಮೇಗರವಳ್ಳಿಯಲ್ಲಿ ಬಸ್ ಹತ್ತಿದ್ದರು ಆಗುಂಬೆ ಘಾಟಿಯಲ್ಲಿ ತೀವ್ರ ಅಸ್ವಸ್ಥಗೊಂಡಾಗ ನಿರ್ವಾಹಕ ವಾಸಿಮ್ ದೇಸಾಯಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಹೋದಾಗ, ಸುರಕ್ಷಾ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿಲ್ಲ. ಅಲ್ಲಿಂದ ನೇರವಾಗಿ ಪ್ರಯಾಣಿಕರ ಸಹಕಾರದೊಂದಿಗೆ ಹೆಬ್ರಿಯ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಬಂದು ಅವರನ್ನು ದಾಖಲು ಮಾಡಲಾಗಿದೆ.ಚಾಲಕ ತಾರೇಶ್ ಹಾಗೂ ನಿರ್ವಾಹಕ ವಾಸಿಮ್ ದೇಸಾಯಿ ಸುರಕ್ಷಾ ಚೇತರಿಕೆಗೆ ಬಹಳಷ್ಟು ಶ್ರಮವಹಿಸಿದರು. ಬಸ್ಸಿನಲ್ಲಿ ಯಾವುದೇ ಮಹಿಳೆಯರಿಂದ ಜೀವ ಉಳಿಸಲು ಸಹಾಯ ಕೇಳಿದಾಗ ಸಹಾಯ ಸಿಗದಿದ್ದರೂ, ಮುಸ್ಲಿಂ ಯುವತಿಯೊಬ್ಬರು ಒಬ್ಬಳು ಬಾಯಿಗೆ ಶ್ವಾಸ ನೀಡಿ ಮಾನವೀಯತೆ ಮೆರೆದಿದ್ದಾಳೆ.
ಇವರೊಂದಿಗೆ ಸಿಬ್ಬಂದಿಗಳು ತೋರಿದ ಸಕಾಲಿಕ ಶ್ರಮದಿಂದ ಜೀವ ಉಳಿದಿದೆ. ಹೆಬ್ರಿಯ ಪೊಲೀಸರು, ಸಾರ್ವಜನಿಕರು ಅಭಿನಂದಿಸಿದ್ದಾರೆ.
ನನ್ನ ಸಹೋದ್ಯೋಗಿ ವಾಸಿಮ್ ದೇಸಾಯಿ ಯಾವುದನ್ನು ಲೆಕ್ಕಿಸದೆ ಯುವತಿಯನ್ನು ತುರ್ತಾಗಿ ಚಿಕಿತ್ಸೆ ನೀಡಲು ಹೊತ್ತುಕೊಂಡು ಹೋದ ರೀತಿ ನನಗೆ ಕಣ್ಣಲ್ಲಿ ಬರುತ್ತಿದೆ. ಮಹಿಳೆಯರು ಸಹಾಯಕ್ಕೆ ಬರಲೇ ಇಲ್ಲ. ಕುಳಿತುಕೊಳ್ಳಲು ಸೀಟು ತಪ್ಪಿ ಹೋಗುತ್ತದೆ ಎಂಬ ಭಯದಿಂದ ಯಾರೂ ಸಹಾಯಕ್ಕೆ ಬಂದಿಲ್ಲ. ಮುಸ್ಲಿಂ ಸಹೋದರ ಸಹೋದರಿಯಿಂದ ಸುರಕ್ಷಾ ಇಂದು ಚೇತರಿಸಿಕೊಳ್ಳುತ್ತಿದ್ದಾಳೆ. ಇದು ಸಮಾಜಕ್ಕೆ ಮಾದರಿಯಾಗಬೇಕು.
ಹೆಬ್ರಿ ಪೊಲೀಸರು ಕೂಡ ಸೋಮೇಶ್ವರ ದಿಂದ ಹೆಬ್ರಿಯ ಆಸ್ಪತ್ರೆಯ ತನಕ ಝೀರೋ ಟ್ರಾಪಿಕ್ ವ್ಯವಸ್ಥೆ ನೀಡಿ ಯುವತಿಯ ಜೀವ ಉಳಿಸಲು ಸಹಕಾರ ನೀಡಿದ್ದಾರೆ.
ಕೋಟೇಶ್ವರ: ನಡೆದುಕೊಂಡು ಹೋಗುತ್ತಿದ್ದವನ ಬಲಿ ಪಡೆದ ಟಿಪ್ಪರ್!
ಕುಂದಾಪುರ: ಕಾಲೇಜ್ ಮುಗಿಸಿ ಸ್ನೇಹಿತರೊಂದಿಗೆ ಫುಟ್ಬಾತಿನಲ್ಲಿ ನಡೆದು ಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು ಸಮೀಪ ಕೋಟೇಶ್ವರ ಹಾಲಾಡಿ ರಸ್ತೆಯ ಕಕ್ಕೇರಿ ಎಂಬಲ್ಲಿ ಮಂಗಳವಾರ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯನ್ನು ನಾಗೂರು ನಿವಾಸಿ ಪ್ರಸ್ತುತ ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಧನುಷ್ ಎಂದು ಗುರುತಿಸಲಾಗಿದೆ.
ಧನುಷ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಾಲೇಜು ಮುಗಿಸಿ ಕೋಟೇಶ್ವರದತ್ತ ರಸ್ತೆ ಬದಿಯ ಇಂಟರ್ ಲಾಕ್ ಮೇಲೆ ನಡೆದುಕೊಂಡು ಬರುತ್ತಿದ್ದ. ಅತೀ ವೇಗವಾಗಿ ಹಿಂದಿನಿಂದ ಬಂದ ಶ್ರೀ ಮಹಾಗಣಪತಿ ಪ್ರಸನ್ನ ಎಂಬ ಹೆಸರಿನ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ತೀರಾ ಬಲಬದಿಗೆ ಬಂದು ಧನುಷ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಧನುಷ್ ಲಾರಿಯಡಿಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.