ಕರಾವಳಿಯಲ್ಲಿ ಗಮನ ಸೆಳೆದ ವಿದ್ವತ್ ಶಿಕ್ಷಣ ಸಂಸ್ಥೆ
– ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಷನ್ ಕಾರ್ಯಕ್ರಮ
– ಓದು, ಭವಿಷ್ಯ, ಸಾಧನೆ, ಪರೀಕ್ಷೆ ಬಗ್ಗೆ ಮಾಹಿತಿ: ವಿದ್ವತ್ ಯುಟಿಲಿಟಿ ಆ್ಯಪ್”ಬಿಡುಗಡೆ
NAMMUR EXPRESS NEWS
ಬೆಳ್ತಂಗಡಿ: ಮಕ್ಕಳಿಗೆ ಸ್ಫೂರ್ತಿ ತುಂಬಿ ಓದಿನಡೆಗೆ ಹುರುದುಂಬಿಸಿ, ಪಿಯುಸಿಯಲ್ಲಿಯೇ ಮಹತ್ತರವಾದುದ್ದನ್ನ ಸಾಧಿಸಿ, ಭವಿಷ್ಯ ರೂಪಿಸಿಕೊಳ್ಳುವ ದೃಷ್ಠಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಗುರುವಾಯನಕೆರೆಯಲ್ಲಿರುವ ವಿದ್ವತ್ ಪಿಯು ಕಾಲೇಜಿನಲ್ಲಿ ಮಹತ್ವದ ಓರಿಯಂಟೇಷನ್ ಕಾರ್ಯಕ್ರಮ ವಿದ್ಯಾರ್ಥಿಗಳು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.
ವಿದ್ವತ್ ಸ್ಫೂರ್ತಿ ಸಂಚಿಕೆ( Motivational Edition) ಮೊದಲನೇ ಭಾಗವಾದ ಈ ಕಾರ್ಯಕ್ರಮವನ್ನು ವಿದ್ವತ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ ಮಂಡಗಳಲೆ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಗೆ ಓದುವ ವಿಧಾನ ಹಾಗೂ ನೆನಪಿನ ಶಕ್ತಿ ವೃದ್ಧಿಯ ಬಗ್ಗೆ ಕೆಲವು ವೈಜ್ಞಾನಿಕ ಸಲಹೆಗಳನ್ನೊಳಗೊಂಡಿತ್ತು.
ಪಿಯುಸಿ ಹಂತದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ವಿಸ್ತೃತ ಮಾಹಿತಿ, ಮಕ್ಕಳು ಸಾಧನೆ ಮಾಡುವ ಇಚ್ಛೆ ಇರುವವರು ಸಮಯವನ್ನ ಹೇಗೆ ಉಪಯೋಗಿಸಿಕೊಳ್ಳಬೇಕು, ಪ್ರತಿದಿನದ ದಿನಚರಿ ಹೇಗಿರಬೇಕು, ಬೇಸಿಕ್ಸ್ ಗಳನ್ನ ಹೇಗೆ ವರ್ಕ್ ಮಾಡಿಕೊಳ್ಳಬೇಕು, ಮನೆಯ ಕಷ್ಟದ ಪರಿಸ್ಥಿತಿಯನ್ನ ಹೇಗೆ ತೆಗೆದುಕೊಳ್ಳಬೇಕು, ಕೊರತೆಯನ್ನೇ ಹೇಗೆ ಮೆಟ್ಟಿನಿಲ್ಲಬೇಕು, ಪೋಷಕರ ಆಸೆಗಳೇನಾಗಿರುತ್ತವೆ ಹಾಗೂ ಅವುಗಳನ್ನ ಹೇಗೆ ಗಂಭೀರವಾಗಿ ಪರಿಗಣಿಸಬೇಕು ಎಂಬಿತ್ಯಾದಿ ಸೂಕ್ಷ್ಮಗಳನ್ನ ಮನಮುಟ್ಟುವಂತೆ ಎಲ್ಲಾ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ವಿದ್ವತ್ ಪಿಯು ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರತಾಪ್ ದೊಡ್ಡಮನಿಯವರು ವಿದ್ವತ್ ಕಾಲೇಜಿನ ಪರೀಕ್ಷಾ ಮಾದರಿ, ಕೌನ್ಸಲಿಂಗ್ ಮಾದರಿ ಹಾಗೂ ಸಾಧಕ ಮಾದರಿಯ ಸಮಗ್ರ ಮಾಹಿತಿ ನೀಡಿದರು.
ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷರಾದ ಸುಭಾಶ್ವಂದ್ರ ಶೆಟ್ಟಿ ವಿದ್ವತ್ ಪ್ರತಿಷ್ಠಾನದ ಭವಿಷ್ಯದ ಕನಸನ್ನು ವ್ಯಕ್ತ ಪಡಿಸಿ, ಮಹತ್ವದ ಪಿಯು ಶಿಕ್ಷಣಕ್ಕೆ ವಿದ್ವತ್ ಕರ್ನಾಟಕದ ಮಹತ್ವಾಕಾಂಕ್ಷಿ ಮಕ್ಕಳಿಗೆ ಹೇಗೆ ವೇದಿಕೆಯಾಗಲಿದೆ ಎಂಬುದನ್ನು ತಿಳಿಸಿದರು.
ಪ್ರಾಂಶುಪಾಲರಾದ ಜಯೇಂದ್ರ ಬಂದ್ಯಾ ನ್ ವಿದ್ವತ್ ಡಿಜಿಟಲ್ ಪ್ಲಾಟ್ ಫಾರಂ “ವಿದ್ವತ್ ಯುಟಿಲಿಟಿ ಆ್ಯಪ್” ಪರಿಚಯಿಸಿದರು..ವಿದ್ವತ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಪ್ರಜ್ವಿಲ್ ರೈ ಹಾಗೂ ಖಜಾಂಚಿ ಎಮ್. ಕೆ ಕಾಶೀನಾಥ್ ಉಪಸ್ಥಿತರಿದ್ದರು.ಕರಾವಳಿಯ ಮತ್ತೊಂದು ಶಿಕ್ಷಣ ಸಂಸ್ಥೆ ಇದೀಗ ರಾಜ್ಯ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಲು ಸಿದ್ಧವಾಗಿದೆ.