- ಸುರತ್ಕಲ್ ಎನ್ಐಟಿಕೆ ಸ್ಟೆಪ್ ಕ್ಯಾಂಪಸ್ಸಲ್ಲಿ ಬಿಡುಗಡೆ
- ಶಿಕ್ಷಣ, ತರಬೇತಿ, ಕೌಶಲ್ಯಕ್ಕೆ ಹೊಸ ಸಾಧನ
ಮಂಗಳೂರು: ರಾಜ್ಯ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಆಪ್ ಸೇರ್ಪಡೆಯಾಗಿದೆ. ಆಕೃತಿ 3ಡಿ Pvt. Ltd ಕಂಪನಿಯ “ಆವಿಷ್ಕಾರ್ ಆಪ್” ಇತ್ತೀಚೆಗೆ ಮಂಗಳೂರು ಸಮೀಪದ ಸುರತ್ಕಲ್ ಎನ್ಐಟಿಕೆ ಸ್ಟೆಪ್ ಕ್ಯಾಂಪಸ್ಸಲ್ಲಿ ಬಿಡುಗಡೆಗೊಂಡಿದೆ.
ಎಲ್ಲಾ ಹಂತದ ಶಿಕ್ಷಣ, ತರಬೇತಿ, ಕೌಶಲ್ಯಕ್ಕೆ ಹೊಸ ರೀತಿಯ ಬೋಧನಾ ಕ್ರಮದೊಂದಿಗೆ ಈ ಆಪ್ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಿದೆ. ಲಾಕ್ಡೌನ್ ಬಳಿಕ ದೇಶದ ಶಿಕ್ಷಣ ಕ್ರಮದಲ್ಲಿ ಬದಲಾವಣೆಯಾಗಿದ್ದು ಡಿಜಿಟಲ್ ಆಧಾರಿತ ಶಿಕ್ಷಣ ಜಾರಿಗೆ ಬಂದಿದೆ. ಡಿಜಿಟಲ್ ಎಜುಕೇಶನ್ ಕ್ಷೇತ್ರದಲ್ಲಿ ಆವಿಷ್ಕಾರ್ ಆಪ್ ಹೊಸ ಮೈಲುಗಲ್ಲಾಗಿದೆ. ಏಕೆಂದರೆ ಇಲ್ಲಿ ಶಿಕ್ಷಣದ ಜತೆ ಜತೆಗೆ ಪ್ರಾಯೋಗಿಕ ಕೋರ್ಸ್ಗಳಿಗೂ ಒತ್ತು ನೀಡಲಾಗಿದೆ.
ರಾಜ್ಯದ ನವೋದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಂಶೋಧಕ ರಾಘವೇಂದ್ರ ಎಸ್ ಅವರು ಹುಟ್ಟು ಹಾಕಿರುವ ಈ ಆಪ್ನಲ್ಲಿ ಪ್ರೌಢ ಶಿಕ್ಷಣದಿಂದ ಇಂಜಿನಿಯರಿಂಗ್ ಶಿಕ್ಷಣದವರೆಗೆ ತರಬೇತಿ ಪಡೆಯಬಹುದು.
ಎನ್ಐಟಿಕೆ ನಿರ್ದೇಶಕರಾದ ಉಮಾಮಹೇಶ್ವರ್ ರಾವ್ ಆನ್ಲೈನ್ ಮೂಲಕ ಆಪ್ ಬಿಡುಗಡೆಗೊಳಿಸಿದ್ದು, ಮಂಗಳೂರು ಎಸ್ಎಮ್ಇಸಿಸಿ ಎಸ್ಬಿಐ ಎಜಿಎಂ ನಾಯಕ್
ಅವರು ಹಾಜರಿದ್ದು ಲೋಕಾರ್ಪಣೆಗೊಳಿಸಿದರು. ಈ ವೇಳೆ ಆಕೃತಿ 3 ಡಿ ಅಕ್ಯಾಡೆಮಿಕ್ ಡೈರೆಕ್ಟರ್ ರೇವಣಸಿದ್ಧಪ್ಪ, ಸಿ.ಎಫ್.ಒ ಸುರೇಂದ್ರ, ಎನ್.ಟಿ ಸಿಸ್ಟಮ್ಸ್ ಸಂಸ್ಥಾಪಕ ನವೀನ್ ಎನ್.ಟಿ, ಬೇಸ್ ಮುಖ್ಯಸ್ಥ ನವೀನ್ ಗುರುರಾಜ್, ರಾಮನ್ ಪಬ್ಲಿಕೇಷ್ನ ನ ಪ್ರಸನ್ನ, ಇನ್ಫೋಫೈನೆಟ್ ಸಂಸ್ಥಾಪಕ ಸುಹಾಸ್ ವೈ.ಎನ್. ಇತರರು ಇದ್ದರು. ಹೆಚ್ಚಿನ ಮಾಹಿತಿಗೆ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
https://play.google.com/store/apps/details?id=com.edmingle.aakruthi3d
For more information Please visit our website: www.aakruthi3d.com