ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ನೋಂದಣಿ ಶುರು
* ಮಂಗಳೂರಿನಲ್ಲಿ ಅಕ್ಟೋಬರ್ 26, 27ರಂದು ಆಯೋಜನೆ
* ಯುವಜನರಿಗೆ ವಿಶೇಷ ಅವಕಾಶ: ಎರಡು ದಿನ ನೋಂದಣಿಗೆ 100 ರೂ.
NAMMUR EXPRESS NEWS
ಮಂಗಳೂರು : ಕೊಂಕಣಿ ಮಾತೃಭಾಷೆ ಜನರು ಕರ್ನಾಟಕ, ಗೋವಾ,ಕೇರಳ ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ಇದ್ದು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಗೋವಾದ ಮಡ್ಗಾಂವ್ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ್ 26,27 ರಂದು ನಡೆಯಲಿದೆ.
ಆಖಿಲ ಭಾರತ ಕೊಂಕಣಿ ಪರಿಷತ್ತಿನ ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ ಮಾಹಿತಿ ನೀಡಿದರು.
ಮಂಗಳೂರು ಕೊಂಕಣಿ ಭಾಷಾ ಮಂಡಲ ಕರ್ನಾಟಕ ಇದರ ಸಮ್ಮೇಳನದ ಮೊದಲ ನೋಂದಣಿ ಹಿರಿಯ ಕೊಂಕಣಿ ಕಾರ್ಯಕರ್ತೆ ಗೀತಾ ಕಿಣಿ ಅವರು ಸ್ವೀಕರಿಸಿ ಮಾತನಾಡಿದರು.
ಪ್ರದೇಶದ ಪ್ರಭಾವ ಭಾಷೆಯ ಮೇಲೆ ಇದೆ ಅದರೂ ಮಾತೃಭಾಷೆ ಹೃದಯದಿಂದ ಅರ್ಥವನ್ನು ನೀಡುತ್ತದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಗೋವಾದ ಚಳುವಳಿಯ ಹಿರಿಯ ಪ್ರಶಾಂತ್ ನಾಯಕ್ ನುಡಿದರು.
ಈ ಬಾರಿಯ ಸಮ್ಮೇಳನದಲ್ಲಿ ಯುವಜನರಿಗೆ ವಿಶೇಷ ಅವಕಾಶಗಳನ್ನು ನೀಡಲು ಎರಡು ದಿನಗಳ ನೋಂದಣಿಗೆ ಕೇವಲ ನೂರು ರೂಪಾಯಿಯಾಗಿದೆ ಎಂದು ಹೇಳಿದರು.
ಕೆಬಿಎಂಕೆ ಅಧ್ಯಕ್ಷ ಕೆ ವಸಂತ ರಾವ್ ಸ್ವಾಗತಿಸಿ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ನೀಡಿದರು. ಖಜಾಂಚಿ ಸುರೇಶ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು