ಆಳ್ವಾಸ್ ಕಾಲೇಜು, ಎಐಇಟಿ: ‘ಸಂಸ್ಕೃತ ಚಿಂತನ’!
– ಪುರಾತನ ಸಂಸ್ಕೃತಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳುವ ಆಸಕ್ತಿ ಬೇಕು: ಸಾಹಿತಿ ಪ್ರೊ.ಗೋಪಾಲಕೃಷ್ಣ ಎನ್. ಭಟ್
NAMMUR EXPRESS NEWS
ಮೂಡುಬಿದಿರೆ: ದೇಹ, ಇಂದ್ರೀಯ, ಮನಸ್ಸು ಸೇರಿ ವ್ಯಕ್ತಿ ಸಂಪೂರ್ಣವಾಗುತ್ತಾನೆ. ಬಾಹ್ಯ ಪ್ರಪಂಚದ ಕಡೆಗೆ ಗಮನ ಹರಿಸುವ ಬದಲು, ನಮ್ಮ ಆತ್ಮದ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮನ್ನು ನಾವು ಅರಿತಾಗ ಮಾತ್ರ ಹೊರ ಜಗತ್ತಿನಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಸಾಹಿತಿ ಪ್ರೊ.ಗೋಪಾಲಕೃಷ್ಣ ಎನ್. ಭಟ್ ಹೇಳಿದರು.
ಅವರು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು(ಎಐಇಟಿ) ಹಾಗೂ ಆಳ್ವಾಸ್ ಕಾಲೇಜು ಸಂಸ್ಕೃತ ವಿಭಾಗ, ಸಂಸ್ಕೃತ ಸಂಘ ಹಾಗೂ ಪ್ರಜ್ಞಾ ಜಿಜ್ಞಾಸಾವೇದಿಃ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಂಸ್ಕೃತ ಚಿಂತನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಜ್ಞಾನ ವೃದ್ಧಿಗೆ ಸ್ವಯಂ ಅನಾವರಣ ಮಾಡಬೇಕು.
ಓಂ ಉಚ್ಚಾರ, ಧ್ಯಾನ ಹಾಗೂ ಯೋಗದಿಂದ ಹಲವು ರೋಗ ಮುಕ್ತಿ ಸಾಧ್ಯ. ಪುರಾತನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದರು.
ಪಶ್ಚಿಮ ಬಂಗಾಳದ ಬೇಲೂರು ರಾಮಕೃಷ್ಣ ಮಿಷನ್ ವಿವೇಕಾನಂದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ ಮುಖ್ಯಸ್ಥ ಜಪಸಿದ್ಧಾನಂದ ಸ್ವಾಮೀಜಿ ಶಿಖರೋಪನ್ಯಾಸ ನೀಡಿದರು.
ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ ಗಾಳಿಮನೆ ಸ್ವಾಗತಿಸಿ, ಅನಘಾ, ಚೈತ್ರಾ, ಸುನ್ನಿಧಿ ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿನಿ ಪ್ರತೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಿಂಧು ಭಟ್ ನಿರೂಪಿಸಿ, ಸಿವಿಲ್ ವಿಭಾಗದ ಉಪನ್ಯಾಸಕ ಡಾ ರಮೇಶ್ ರಾವ್ ವಂದಿಸಿದರು.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023