ಕರಾವಳಿ ಟಾಪ್ 4 ನ್ಯೂಸ್
ಮುಂಗಾರಿನ ಸಸಿಮಡಿಯಲ್ಲಿ ಅಂಗಮಾರಿ ರೋಗ!
– ಬೆಳ್ತಂಗಡಿ ಭಾಗದಲ್ಲಿ ಭತ್ತಕ್ಕೆ ರೋಗ: ಏನಿದು ರೋಗ
* ಪುತ್ತೂರು: ಪುತ್ತಿಲ ಅವರಿಗೆ ನ್ಯಾಯಾಲಯದ ಜಾಮೀನು
* ಬೆಳ್ತಂಗಡಿ: ಗಾಂಜಾ ಮಾರಾಟ ಮಾಡುತ್ತಿದ್ದಾತನ ಬಂಧನ
* ಬ್ರಹ್ಮಾವರ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ
NAMMUR EXPRESS NEWS
ಬೆಳ್ತಂಗಡಿ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಬ್ಯಾಕ್ಟೀರಿಯಾ ದುಂಡಾಣು ಅಂಗಮಾರಿ ರೋಗವು ಬೆಳ್ತಂಗಡಿ ತಾಲೂಕಿನ ಗದ್ದೆಯಲ್ಲಿ ಕಾಣಿಸಿಕೊಂಡಿದೆ.ಅಂಗಮಾರಿ ಹೆಚ್ಚಾಗಿ ಬಯಲು ಸೀಮೆಯಲ್ಲಿ ಕಾಣಿಸಿಕೊಳ್ಳುವ ರೋಗ, ಕಾಲುವೆ ನೀರಿನ ಮೂಲಕ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಡುತ್ತದೆ. ಆದರೆ ಈ ಬಾರಿ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಲಿಂಗಪ್ಪ ಪೂಜಾರಿ ಹಾಗೂ ಮೇಲಂತಬೆಟ್ಟು ಗ್ರಾಮದ ರಘುರಾಮ್ ಶೆಟ್ಟಿ ಅವರ ಭತ್ತದ ಗದ್ದೆಯಲ್ಲಿ ಈ ರೋಗದ ಲಕ್ಷಣ ಪತ್ತೆಯಾಗಿದ್ದು, ಇದರ ಬಗ್ಗೆ ಕೃಷಿ ಇಲಾಖೆ ಪರಿಶೀಲನೆ ನಡೆುತ್ತಿದೆ. ಬ್ರಹ್ಮಾವರ ಭಾಗದಲ್ಲೂ ಈ ವರ್ಷದ ಮುಂಗಾರಿನಲ್ಲಿ ಸಸಿಮಡಿಯಲ್ಲೇ ಈ ರೋಗ ಲಕ್ಷಣ ಪತ್ತೆಯಾಗಿತ್ತು.
* ರೋಗದ ಲಕ್ಷಣ
ಅಂಗಮಾರಿ ರೋಗವನ್ನು ಪತ್ತೆ ಹಚ್ಚುವುದು ಸ್ವಲ್ಪ ಕಷ್ಟದ ಕೆಲಸವಾಗಿದ್ದು, ಮೇಲ್ನೋಟಕ್ಕೆ ಸತುವಿನ ಕೊರತೆ, ಪೊಟ್ಯಾಷ್ ಮತ್ತು ಸಾರಜನಕದ ಜಂಟಿ ಕೊರತೆಯ ಲಕ್ಷಣಗಳಿಗೂ ಈ ರೋಗಕ್ಕೂ ಸಾಮ್ಯತೆ ಇದೆ. ಆದರೆ ಗರಿಗಳ ತುದಿ ಹಳದಿಯಾಗಿ ಮಡಚುವುದು ಹಾಗೂ ಒಣಗುವುದು ನಿರ್ದಿಷ್ಟವಾಗಿ ಈ ರೋಗದ ಲಕ್ಷಣ. ಭತ್ತದ ತೆನೆ ಬರುವ ಹಂತದಲ್ಲಿ ಕಾಣಿಸಿಕೊಂಡಲ್ಲಿ ಭತ್ತವು ಜೊಳ್ಳಾಗಿ (ಕಾಳುಗಳು ನಾಶವಾಗಿ) ಇಳುವರಿಗೆ ಹೊಡೆತ ಬೀಳುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದು ನೀರಿನಿಂದ ಹರಡುವ ರೋಗವಾಗಿದ್ದು, ಒಂದು ಬಾರಿ ಬಂದ ಸ್ಥಳದಲ್ಲಿ ಮುಂದಿನ ಬಾರಿಯೂ ಕಾಣಿಸಿಕೊಳ್ಳುವುದು. ಮೊದಲು ಗದ್ದೆಯ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬಂದು, ರೋಗದ ತೀವ್ರತೆ ಹೆಚ್ಚಿದಾಗ ಇಡೀ ಗದ್ದೆಯೇ ಸುಟ್ಟಂತೆ ಕಾಣಿಸುತ್ತದೆ. ತೆನೆ ಬಿಡುವ ಹಂತದಲ್ಲಿ ರೋಗ ಬಂದಲ್ಲಿ ಕಾಳು ಜೊಳ್ಳಾಗುತ್ತದೆ. ಬೆಳಾಲಿನ ಲಿಂಗಪ್ಪ ಪೂಜಾರಿ ಅವರ ಗದ್ದೆಯಲ್ಲಿ ಕಳೆದ ವರ್ಷ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದ್ದು, ಈ ವರ್ಷ ಮತ್ತೆ ಕಾಣಿಸಿಕೊಂಡಿದೆ. ಹೊಸ ಮಣ್ಣಿನಲ್ಲಿ ಗದ್ದೆ ಮಾಡಿ ಭತ್ತ ಬೆಳೆದಿದ್ದ ಮೇಲಂತಬೆಟ್ಟಿನ ರಘುರಾಮ್ ಶೆಟ್ಟರ ಗದ್ದೆಯಲ್ಲೂ ಈ ರೋಗ ಕಾಣಿಸಿಕೊಂಡಿದೆ ಎಂದಿದ್ದಾರೆ.
* ಜಾಮೀನು ಮಂಜೂರುಗೊಳಿಸಿದ ನ್ಯಾಯಾಲಯ
ಮಂಗಳೂರು: ಪುತ್ತಿಲ ಪರಿವಾರದ ಸಂಸ್ಥಾಪಕ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ನಂಬಿಕೆ ದ್ರೋಹ, ಕೊಲೆ ಬೆದರಿಕೆ ಪ್ರಕರಣದಲ್ಲಿ ಪುತ್ತಿಲ ವರಿಗೆ ಬಿ್ ರಿಲೀಫ್ ಸಿಕ್ಕಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಅರುಣ್ ಕುಮಾರ್ ಪುತ್ತಿಲ ಪುತ್ತೂರಿನ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್.ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು ಪುತ್ತಿಲ ನಿರಾಳರಾಗಿದ್ದಾರೆ.
ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಸಾಮೆತ್ತಡ್ಕ ನಿವಾಸಿ 47 ವರ್ಷದ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ತನ್ನ ವಕೀಲರಾದ ನರಸಿಂಹ ಪ್ರಸಾದ್ ಮೂಲಕ ಅರುಣ್ ಕುಮಾರ್ ಪುತ್ತಿಲ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಲಯ ಅರುಣ್ ಕುಮಾರ್ ಪುತ್ತಿಲ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ತನ್ನ ವಕೀಲರಾದ ನರಸಿಂಹ ಪ್ರಸಾದ್ ಮೂಲಕ ಅರುಣ್ ಕುಮಾರ್ ಪುತ್ತಿಲ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಲಯ ಅರುಣ್ ಕುಮಾರ್ ಪುತ್ತಿಲ ಅವರಿಗೆ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದ್ದು ಮುಂದಿನ ದಿನಗಳಲ್ಲಿ ನನ್ನ ವಿರುದ್ಧ ಬಂದಿರುವ ಆರೋಪಗಳಿಗೆ ಕಾನೂನು ರೀತಿಯ ಹೋರಾಟ ಮಾಡುತ್ತೇನೆ ಎಂದು ಅರುಣ್ ಕುಮಾರ್ ಪುತ್ತಿಲ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
* ಗಾಂಜಾ ಮಾರಾಟ ಮಾಡುತ್ತಿದ್ದಾತ ಅರೆಸ್ಟ್!
ಬೆಳ್ತಂಗಡಿ: ಕುವೆಟ್ಟು ಗ್ರಾಮದ ಸಬರಬೈಲು ಬಸ್ ನಿಲ್ದಾಣದ ಬಳಿ ಓರ್ವ ವ್ಯಕ್ತಿಯು ಅಕ್ರಮವಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದಾತನನ್ನು ಬಂಧಿಸಲಾಗಿದೆ.
ಬೆಳ್ತಂಗಡಿ ನಿವಾಸಿ ಮಹಮ್ಮದ್ ರಫೀಕ್ (37) ಎಂಬಾತನನ್ನು ಪರಿಶೀಲಿಸಿದಾಗ ಆತನ ಬಳಿಯಿದ್ದ ಚೀಲದಲ್ಲಿ ಅಂದಾಜು 20,000 ರೂ. ಮೌಲ್ಯದ, 1,150 ಗ್ರಾಂ. ಮಾದಕ ವಸ್ತುವಾದ ಗಾಂಜಾ ಕಂಡುಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಕೇರಳದಿಂದ ತಂದಿರುವುದಾಗಿ ತಿಳಿಸಿದ್ದಾನೆ.
ಆರೋಪಿಯೊಂದಿಗೆ ಸೊತ್ತು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
* ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ!
ಬ್ರಹ್ಮಾವರ: ಉದ್ಯೋಗ ಕೊಡಿಸುವುದಾಗಿ ನಂಬಿಸಿ 8,96,448 ರೂ. ವಂಚಿಸಿರುವುದಾಗಿ ವಾರಂಬಳ್ಳಿ ಗ್ರಾದ ಲಿಶಾ ಆರೋಪಿಸಿದ್ದಾರೆ.
ಈ ಕುರಿತು ಸೈಬರ್ ಕ್ರೈಂಗೆ ದೂರು ದಾಖಲಿಸಲು ವೆಬ್ಸೈಟ್ ಸಂಪರ್ಕಿಸಿದಾಗ ಅದರಲ್ಲಿಯೂ 37,000 ರೂ. ಆನ್ಲೈನ್ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.