ಕ್ರೀಡಾ ದಿನದ ವಿಶೇಷ
ಪವರ್ ಲಿಫ್ಟಿಂಗ್ ಅಲ್ಲಿ ಕರಾವಳಿ ಕುವರಿ ಪ್ರತೀಕ್ಷಾ ಶೆಟ್ಟಿ ಸಾಧನೆ
– ದೇಶ ವಿದೇಶದಲ್ಲಿ ಕ್ರೀಡಾ ಸಾಧನೆ
ಯೂನಿವರ್ ಸಿಟಿ ಹೆಜ್ಜೆ ಮೂಲಕ ಅಂತ ರಾಷ್ಟ್ರೀಯ ಕ್ರೀಡೆಯಲ್ಲಿ ಏಶಿಯಾಮಟ್ಟದಲ್ಲಿ ಖ್ಯಾತಿ ಪಡೆದ ಬಂಗಾರದ ಪದಕ ಗೆದ್ದ ಹೆಮ್ಮೆಯ
ಪವರ್ ಲಿಫ್ಟರ್ ಉಡುಪಿಯ ಪ್ರತೀಕ್ಷಾ ಶೆಟ್ಟಿ.
ಓದಿದ್ದೆಲ್ಲ ಉಡುಪಿ, ಬಳಿಕ ಸಿಎ ಪಾಸ್
ತನ್ನ ವಿದ್ಯಾಭ್ಯಾಸ, ಬಡತನದ ನಡುವೆ ಕ್ರೀಡೆಯಲ್ಲಿ ಅಂತಾರಾಷ್ಟ್ರಿಯ ಸಾಧನೆಗೈದ ದಿಟ್ಟ ಯುವತಿ ಪ್ರತೀಕ್ಷಾ. ತನ್ನ ದಿವ್ಯ ಪರಿಶ್ರಮ ಹಾಗೂ ಉತ್ತಮ ಗುರಿಯೊಂದಿಗೆ ಪವರ್ ಲಿಫ್ಟಿಂಗ್ ನಲ್ಲಿ ಯೂನಿರ್ವಸಿಟಿ ಯಲ್ಲಿ ಏಶಿಯಾದಲ್ಲಿಯೇ ಬಂಗಾರದ ಪದಕ ಗೆದ್ದ ಧೀರ ಮಹಿಳೆ.
11-09-1998 ಹುಟ್ಟಿ ಉಡುಪಿಯ ಕೆಮ್ಮಣ್ಣು ವಿನಲ್ಲಿ ವಾಸವಿರುವ ಇವರು ಮಂಗಳೂರಿನ ಯೂನಿವರ್ಸಿಟಿ ಉಡುಪಿಯ ತ್ರಿಷಾ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು, 2 ನಂತರ 2019ರಲ್ಲಿ ಮಂಗಳೂರಿನ ಕರ್ನಾಟಕ ಕಂಪ್ಯೂಟರ್ ಅಕಾಡೆಮಿ ಮೂಲಕ ಕಂಪ್ಯೂಟರ್ ಸಿ. ಎ ಪದವಿ ಪಡೆದಿದ್ದಾರೆ.
ಹತ್ತು ಹಲವು ಕಡೆ ಚಾಂಪಿಯನ್
2021ರಲ್ಲಿ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಟೇಟ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಗೋಲ್ಡ್ ಮೆಡಲ್ ಮತ್ತು ಸ್ಟ್ರಾಂಗ್ ಉಮೆನ್ ಪ್ರಶಸ್ತಿ. ಉತ್ತರಪ್ರದೇಶದ ಗಾಜಿಪುರ್ ನಡೆದ ರಾಷ್ಟ್ರೀಯ ಜೂನಿಯರ್ ಪವರ್ ಲಿಫ್ಟಿಂಗ್ ನಲ್ಲಿ ಕಂಚು ಪದಕ ಪಡೆದಿದ್ದಾರೆ. 2022 ರಲ್ಲಿ ಆಂಧ್ರಪ್ರದೇಶ ದಲ್ಲಿ ನಡೆದ ಸೌತ್ ಇಂಡಿಯಾ ರಾಷ್ಟ್ರೀಯ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗೋಲ್ಡ್ ಮೆಡಲ್ ಮತ್ತು ಸ್ಟ್ರಾಂಗ್ ಉಮೆನ್ ಪ್ರಶಸ್ತಿ,
ಸೀನಿಯರ್ ನ್ಯಾಷನಲ್ ಮಂಗಳೂರು ನಲ್ಲಿ ಉಮೆನ್ ಎಕ್ಯೂಪ್ಪಡ್ ಪವರ್ ಲಿಫ್ಟಿಂಗ್ ಚಾಂಪಿಯನ್ ಕಂಚು, ಮಂಗಳೂರು ಯೂನಿವರ್ಸಿಟಿ ಯ ಇಂಟೆರ್ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಚಿನ್ನ, ನ್ಯೂ ಮೀಟ್ ರೆಕಾರ್ಡ್ ಮತ್ತು ಸ್ಟ್ರಾಂಗ್ ಉಮೆನ್ ಪ್ರಶಸ್ತಿ ಪಡೆದಿದ್ದಾರೆ
2023 ರಲ್ಲಿ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪವರ್ ಲಿಫ್ಟಿಂಗ್ ಗೋಲ್ಡ್ ಮೆಡಲ್ ಚಾಂಪಿಯನ್, ಮಂಗಳೂರು ಯೂನಿವರ್ಸಿಟಿ ಇಂಟರ್ ಕಾಲೇಜಿನ ಗೋಲ್ಡ್ ಮೆಡಲ್ ಚಾಂಪಿಯನ್ ಶಿಪ್ ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಸಾಧನೆ ಮಾಡಿದ ಹುಡುಗಿ
ಛಲ ಬಿಡದೆ ತನ್ನ ಕ್ರೀಡಾ ಸ್ಫೂರ್ತಿಯೊಂದಿಗೆ ಇನ್ನಷ್ಟುಉತ್ತಮ ಸಾಧನೆಯಡೆಗೆ ಮುನ್ನಡೆದ ಇವರು 2024ಮೇ ತಿಂಗಳಿನಲ್ಲಿ ಹಾಂಗ್ ಕಾಂಗ್ ನಡೆದ ಅಂತಾರಾಷ್ಟ್ರೀಯ ಮಟ್ಟದ ಎಶಿಯನ್ ಯೂನಿವರ್ಸಿಟಿ ಎಕ್ಯೂಪ್ಪಡ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಬೆಸ್ಟ್ ಲಿಫ್ಟರ್ ಪ್ರಶಸ್ತಿ.
ಎಶಿಯನ್ ಯೂನಿವರ್ಸಿಟಿ ಕ್ಲಾಸಿಕ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಹಾಗೂ ಬೆಸ್ಟ್ ಲಿಫ್ಟರ್ ಉಮೆನ್ ಪ್ರಶಸ್ತಿ.
ಎಶಿಯನ್ ಯೂನಿವರ್ಸಿಟಿ ಎಕ್ಯೂಪ್ಪಡ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಮತ್ತು ಬೆಸ್ಟ್ ಲಿಫ್ಟರ್ ಉಮೆನ್ ಪ್ರಶಸ್ತಿ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕ್ರೀಡಾ ಪ್ರತಿಭೆಯಾಗಿ ಸಾಧನೆಗೈದ ಅಪ್ರತಿಮ ಮಹಿಳೆಯಾಗಿದ್ದಾಳೆ.ಇವರ ಈ ಎಲ್ಲಾ ಸಾಧನೆಗೆ ಸ್ಫೂರ್ತಿ ಹಾಗೂ ಪರಿಶ್ರಮ ಇವರ ತಾಯಿ ಪದ್ಮಾ ಜೆಪಿ ಶೆಟ್ಟಿ ಅವರಿಗೆ ಸಲ್ಲುತ್ತದೆ.
ಕುಟುಂಬದ ತ್ಯಾಗಕ್ಕೆ ಸಾಧನೆಯ ಉಡುಗೊರೆ
ಮಾಸ್ತಿಕಟ್ಟೆಯಲ್ಲಿ ಸುಮಾರು 30 ವರ್ಷಗಳ ಕಾಲ ಬ್ಯಾಂಕ್ ನೌಕರಾಿ ಸೇವೆ ಸಲ್ಲಿಸಿದ ಸಾಕಷ್ಟು ಜನರಿಗೆ ಚಿರಪರಿಚಿತರಾದ ಲೋಕುಶೆಟ್ಟಿ ಇವರ ಮೊಮ್ಮಗಳು, ಅಂದರೆ ಶಪದ್ಮಾ ಜಯಪ್ರಕಾಶ್ ಶೆಟ್ಟಿ ಇವರ ಪ್ರಥಮ ಪುತ್ರಿ. ತಂದೆ ಲೋಕು ಶೆಟ್ಟಿ ನಿವೃತ್ತಿ ನಂತರ ಸುಮಾರು 20 ವರ್ಷಗಳಿಂದ ಉಡುಪಿಯಲ್ಲಿ ವಾಸವಾಗಿದ್ದಾರೆ.
ತನ್ನ ವೈಯಕ್ತಿಕ ಬದುಕಿನಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಸಲಹುತ್ತ ಉತ್ತಮ ವಿದ್ಯಾಭ್ಯಾಸ ನೀಡುತ್ತಾ, ಅದರ ನಡುವೆ ತನ್ನ ವೃದ್ಧ ತಂದೆ ತಾಯಿಯರನ್ನು ಸಹ ತನ್ನ ಜೊತೆಯಲ್ಲಿಯೇ ಸಲಹುತ್ತ, ಬದುಕಿಗಾಗಿ ಉಡುಪಿಯಲ್ಲಿ ಟೈಲರಿಂಗ್ ವೃತ್ತಿ ಮೂಲಕ ಅತ್ಯಂತ ಕಠಿಣವಾದ ರೀತಿಯಲ್ಲಿ ಬದುಕು ನಡೆಸುತ್ತ ಬಂದಿರುವ ಶ್ರೀಮತಿ ಪದ್ಮಾ ಜಯಪ್ರಕಾಶ್ ಅವರ ಪುತ್ರಿ ಇದೀಗ ಭಾರತದ ಹೆಮ್ಮೆಯ ಕ್ರೀಡಾಪಟುವಾಗಿದ್ದಾರೆ.
ಬೆಸ್ಟ್ ಆಫ್ ಲಕ್ ಪ್ರತೀಕ್ಷಾ
ಮುಂದಿನ ದಿನಗಳಲ್ಲಿ ಇನ್ನಷ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಗೈಯಬೇಕೆಂಬ ಹಂಬಲ, ತವಕ ಹೊಂದಿರುವ ಈ ಯುವತಿ ಇನ್ನಷ್ಟು ಸಾಧನೆ ಮಾಡಲಿ ಎಂಬುದು ನಮ್ಮ ಆಶಯ.
ಎಲ್ಲಾ ಕ್ರೀಡಾಪಟುಗಳಿಗೂ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು