ಕರಾವಳಿ ನ್ಯೂಸ್
– ಮಲ್ಪೆ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ!
– ಉಡುಪಿ:ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
– ಪುತ್ತೂರು:ಅಪರಿಚಿತರ ತಂಡ ಯುವಕನ ಮೇಲೆ ಹಲ್ಲೆ
NAMMUR EXPRESS NEWS
ಮಲ್ಪೆ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಅತ್ರಾಡಿ ಗ್ರಾಮದ ಬಾಳು (89) ಅವರು ಅ. 15ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದು ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮನೆಯವರು ಪರೀಕ ಪರಿಸರದ ಸುವರ್ಣ ನದಿ ಸೇತುವೆಯ ಬಳಿ ಹುಡುಕಾಟ ನಡೆಸಿದಾಗ ಅವರ ಚಪ್ಪಲಿ ಪತ್ತೆಯಾಗಿತ್ತು. ಈ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ಯಾರೋ ವ್ಯಕ್ತಿಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿಸಿದ್ದರು. ಅ. 16ರಂದು ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಅ. 17ರಂದು ತಿಮ್ಮಣ್ಣಕುದ್ರು ಹ್ಯಾಂಗಿಂಗ್ ಬ್ರಿಡ್ಜ್ ನದಿಯ ಬಳಿ ಬಾಳು ಅವರ ಮೃತದೇಹ ಪತ್ತೆಯಾಗಿದೆ. ಬಾಳು ಅವರು ಮಕ್ಕಳಿಲ್ಲದ ಕೊರಗಿನಿಂದ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಲ್ಪೆ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಡುಪಿ:ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಉಡುಪಿ: ಕೆಮ್ಮಣ್ಣು ಪಡುತೋನ್ಸೆಯ ಕುದುರು ನೆಕ್ಸ್ಟ್ ಹೊಳೆಯಲ್ಲಿ ವ್ಯಕ್ತಿಯ ಶವ. ಪತ್ತೆಯಾಗಿದೆ. ಮೃತವ್ಯಕ್ತಿಯನ್ನು ಬಾಲು ನಾಯ್ಕ್ ಎಂದು ಗುರುತಿಸಲಾಗಿದೆ. ಹೊಳೆಯಿಂದ ಶವ ಮೇಲೆತ್ತಲು ಅಲ್ವಿನ್, ಹರಿದಾಸ್, ನಿಖಿಲ್, ಸತ್ಯ ಅವರು ಸಹಕರಿಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಮಲ್ಪೆ ಠಾಣೆಯ ಎಎಸ್ಐ ವಿಶ್ವನಾಥ್, ನಾಗರಾಜ್ ಸ್ಥಳಕ್ಕೆ ಬಂದು ಮಹಜರು ಪ್ರಕ್ರಿಯೆ ನಡೆಸಿದರು.
ಅಪರಿಚಿತರ ತಂಡದಿಂದ ಯುವಕನ ಮೇಲೆ ಹಲ್ಲೆ!
ಪುತ್ತೂರು: ನಗರದ ಕೂರ್ನಡ್ಕದಲ್ಲಿ ಕಾರಿನಿಂದ ಇಳಿದು ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಅಪರಿಚಿತರ ತಂಡವೊಂದು ಹಲ್ಲೆ ನಡೆಸಿದ ಘಟನೆ ಅ. 16ರ ತಡರಾತ್ರಿ ನಡೆದಿದೆ. ಕಲ್ಲಡ್ಕದ ಲೈಟ್ಸ್ ಸೌಂಡ್ಸ್ಗೆ ಸಂಬಂಧಿಸಿದ ಬಾಲಕ ಹಲ್ಲೆಗೊಳಗಾದವ. ಕಾರ್ಯಕ್ರಮಕ್ಕೆ ಸಂಬಂಧಿಸಿ ಲೈಟಿಂಗ್ ಮಾಡಿ ಟೆಂಪೊ ಮತ್ತು ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಕಾರಿನಲ್ಲಿದ್ದ ಬಾಲಕನೋರ್ವನಿಗೆ ವಾಂತಿ ಬರುವ ಅನುಭವವಾಗಿದ್ದು, ಹೀಗಾಗಿ ಕೂರ್ನಡ್ಕದ ಬಳಿ ಕಾರು ನಿಲ್ಲಿಸಲಾಗಿತ್ತು.ಬಾಲಕ ರಸ್ತೆ ಬದಿ ನಿಂತಿದ್ದ ವೇಳೆ ಕಾರಿನಲ್ಲಿದ್ದವರು ಆತನಿಗೆ ಬಾಟಲಿಯಲ್ಲಿ ನೀರು ಕೊಡುತ್ತಿದ್ದು, ಈ ವೇಳೆ ಅಪರಿಚಿತರು ಬಂದು ಹಲ್ಲೆ ನಡೆಸಿದ್ದಾರೆ.