ಕರಾವಳಿ ಟೆಕ್ಕಿ ಈಗ ಗೂಗಲ್ ಕ್ಲೌಡ್ನ ಉಪಾಧ್ಯಕ್ಷ!
– ದೇಶಕ್ಕೆ ಹೆಮ್ಮೆ: ಗೂಗಲ್ ಕಂಪನಿಯಿಂದ ನೇಮಕಗೊಂಡ ಮಣಿಪಾಲ ಮೂಲದ ರಾಜ್ ಪೈ
– ಕರಾವಳಿಯಷ್ಟೇ ಅಲ್ಲ ಕರ್ನಾಟಕಕ್ಕೆ ಕೀರ್ತಿ ತಂದ ಕನ್ನಡಿಗ ಟೆಕ್
NAMMUR EXPRESS NEWS
ಮಣಿಪಾಲ ಪೈ ಕುಟುಂಬದ ಸದಸ್ಯರಾಗಿರುವ ರಾಜ್ ಪೈ ಅವರು ಅಮೆರಿಕದ ಪ್ರತಿಷ್ಠಿತ ಗೂಗಲ್ ಕ್ಲೌಡ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ನೇಮಕಗೊಳ್ಳುವ ಮೂಲಕ ಕರಾವಳಿಗೆ ಹೆಮ್ಮೆ ತಂದಿದ್ದಾರೆ.
ರಾಜ್ ಪೈ ಅವರು ಕ್ಲೌಡ್ ಕೃತಕ ಬುದ್ಧಿಮತ್ತೆ ತಂಡದ ನಿರ್ವಹಣೆಯನ್ನು ನೋಡಿಕೊಳ್ಳಲಿದ್ದಾರೆ. ಗೂಗಲ್ ಸಂಸ್ಥೆಯು ಕ್ಲೌಡ್ ವ್ಯವಹಾರಕ್ಕೆ ಪ್ರಾಶಸ್ತ್ಯ ನೀಡಬಯಸಿರುವುದು ಈ ನೇಮಕಾತಿಯಿಂದ ಗೊತ್ತಾಗುತ್ತದೆ.
ಪೈ ಅವರು ಈ ಮೊದಲು ಅಮೆಜಾನ್, ಸಿಯಾಟಲ್ನಲ್ಲಿ ಕೆಲಸ ಮಾಡಿದ ಬಳಿಕ ವಿಶ್ವದ ಮುಂಚೂಣಿಯ ಗೂಗಲ್ ಕಂಪೆನಿ ಸೇರಿಕೊಂಡಿದ್ದಾರೆ. ಅವರು ಅಮೆಜಾನ್ನಲ್ಲಿ ಎಡಬ್ಲ್ಯುಎಸ್ನ ಉಪಾಧ್ಯಕ್ಷರಾಗಿದ್ದರು. ಪೈ ಅವರು ಅಮೆಜಾನ್ ಸಂಸ್ಥೆಯಲ್ಲಿ ಆರಂಭದಲ್ಲಿ ನಿರ್ದೇಶಕರಾಗ್ಗಿ(ಉತ್ಪಾದನೆ, ಅಮೆಜಾನ್ ಎಲಾಸ್ಟಿಕ್ ಕಂಪ್ಯೂಟ್ ಕ್ಲೌಡ್-ಇಸಿ) ಸೇವೆ ಸಲ್ಲಿಸಿ ಗಮನಸೆಳೆದಿದ್ದರು.
ವಿಶ್ವದ ಟೆಕ್ ದಿಗ್ಗಜ ಸಂಸ್ಥೆಗಳಲ್ಲಿ ಕೆಲಸ
ಅತುಲ್ ಅವರು ಮೈಕ್ರೋಸಾಫ್ಟ್, ಸಿಯಾಟಲ್ನಲ್ಲಿ 15 ವರ್ಷ ಹಾಟ್ಮೇಲ್, ವಿಜುವಲ್ ಸುಡ್ಡಿಯೋ, ವಿಂಡೋಸ್ 8 ಡೆವಲಪರ್ ಟೂಲ್ಸ್ ಹೀಗೆ ವಿವಿಧ ತಂಡಗಳನ್ನು ಮುನ್ನಡೆಸಿದ್ದರು. ಕೊನೆಯಲ್ಲಿ ಆಫೀಸ್ 365 ಎಕ್ಸ್ಚೇಂಜ್ ಎಂಟರ್ಪ್ರೈಸ್ ಕ್ಲೌಡ್ನ ಗ್ರೂಪ್ ಪ್ರೋಗ್ರಾಂ ಮ್ಯಾನೇಜರ್ ಕೂಡ ಆಗಿದ್ದರು. ಈ ನಡುವೆ ರಾಜ್ ಪೈ ಅವರು ಮೈಕ್ರೋಸಾಫ್ಟ್ನ ಬಿಲ್ಗೇಟ್ಸ್ ಮತ್ತು ಅಮೆಜಾನ್ನ ಜೆಫ್ ಬೆಜೋಸ್ ಅವರ ನಿಕಟವರ್ತಿಯಾಗಿದ್ದರು.
ರಾಜ್ ಪೈ ಸ್ಟಾನ್ಫೋರ್ಡ್ ವಿವಿಯಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಬಿಎಸ್ ಪದವಿ ಪಡೆದುಕೊಂಡಿದ್ದಾರೆ. ರಾಜ್ ಪೈ ಅವರು ಕೆಎಂಸಿಯಲ್ಲಿ ಅನಾಟಮಿ ಪ್ರಾಧ್ಯಾಪಕರಾಗಿದ್ದ ದಿ ಡಾ.ಟಿ. ಉಮೇಶರಾಯ ಪೈ ಮತ್ತು ನಳಿನಿ ಪೈ ದಂಪತಿ ಪುತ್ರರಾಗಿದ್ದಾರೆ.