ಕರಾವಳಿ ದೇಗುಲಗಳು ಮಹಿಳೆಯರಿಂದ ಫುಲ್ ಫುಲ್!
– ಸರ್ಕಾರಿ ಬಸ್ಸಲ್ಲಿ ಮಹಿಳೆಯರಿಗೆ ಫ್ರೀ: ಹೆಚ್ಚಿದ ಪ್ರವಾಸಿಗರ ಸಂಖ್ಯೆ
– ಕರಾವಳಿಯ ಬಹುತೇಕ ದೇವಾಲಯಗಳಲ್ಲಿ ಮಹಿಳೆಯರ ಕ್ಯೂ!
NAMMUR EXPRESS NEWS
ಮಂಗಳೂರು/ಉಡುಪಿ: ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೇವೆ ನೀಡಿರುವ ಹಿನ್ನೆಲೆಯಲ್ಲಿ ಕರಾವಳಿಯ ದೇಗುಲಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಗುಂಪು ಗುಂಪಾಗಿ ಮಹಿಳೆಯರು ಪ್ರವಾಸಕ್ಕೆ ಬರುತ್ತಿದ್ದಾರೆ.
ಕರಾವಳಿಯ ಪ್ರಮುಖ ದೇವಸ್ಥಾನಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಮಂದಾರ್ತಿ, ಆನೆಗುಡ್ಡೆ, ಕೊಲ್ಲೂರು ಸೇರಿದಂತೆ ಬಹುತೇಕ ಎಲ್ಲಾ ದೇಗುಲಗಳಲ್ಲೂ ಮಹಿಳೆಯರ ರಶ್ ಕಂಡುಬರುತ್ತಿದೆ. ಇನ್ನು ಪ್ರವಾಸಿಗರು ಕೂಡ ಹೆಚ್ಚಾಗಿದ್ದು ಮಹಿಳೆಯರ ಜೊತೆ ಕುಟುಂಬದವರು ಕೂಡ ಆಗಮಿಸುತ್ತಿರುವಂತಹ ದೃಶ್ಯಗಳು ಹೆಚ್ಚಾಗಿ ಕಂಡುಬರುತ್ತಿದೆ.
ಸರ್ಕಾರಿ ಬಸ್ ಗಳಿಂದ ಬೆಂಗಳೂರು, ಮೈಸೂರು, ದಾವಣಗೆರೆ, ಚಿತ್ರದುರ್ಗ, ಉತ್ತರ ಕರ್ನಾಟಕದ ಬಹುತೇಕ ಭಾಗಗಳಿಂದ ಮಹಿಳೆಯರು ದೇವಾಲಯದ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಮಳೆ ಹೆಚ್ಚಾದ ಬಳಿಕ ದೇವಸ್ಥಾನಕ್ಕೆ ಆಗಮಿಸುವುದು ಕಷ್ಟಕರವಾಗಿರುವುದರಿಂದ ಈಗಲೇ ಮಹಿಳೆಯರು ಸರ್ಕಾರಿ ಬಸ್ ನಲ್ಲಿ ದೇವಸ್ಥಾನಗಳಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ದೇಗುಲಗಳಲ್ಲಿ ಕ್ಯೂ ಹೆಚ್ಚಾಗಿದೆ.
ಸರ್ಕಾರಿ ಬಸ್ ಸೇವೆಯನ್ನು ಮಹಿಳೆಯರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಇನ್ನೂ ರಾಜ್ಯದ ಬಹುತೇಕ ಬೇರೆ ಭಾಗಗಳಲ್ಲೂ ಕೂಡ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ಅದರಲ್ಲೂ ಮಹಿಳೆಯರೇ ಹೆಚ್ಚಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಸೀಟ್ ಗಾಗಿ ಜಟಾಪಟಿ ನಡೆಸುತ್ತಿರುವಂತಹ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿದೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023