ಕರಾವಳಿ ಟಾಪ್ ನ್ಯೂಸ್
– ಪಕ್ಷಿಕೆರೆಯಲ್ಲಿ ನಡೆದ ಕೊಲೆ: ಕಾರ್ತಿಕ್ ತಾಯಿ, ಅಕ್ಕ ಅರೆಸ್ಟ್!
– ಮೂಡಬಿದ್ರೆ ನ್ಯಾಯಾಲಯದಲ್ಲಿ ಹೈಡ್ರಾಮ
– ಮಂಗಳೂರು: ನವಜಾತ ಶಿಶು ಸಾವು: ಆಸ್ಪತ್ರೆ 4ನೇ ಮಹಡಿಯಿಂದ ಬಿದ್ದು ಸಾವು
NAMMUR EXPRESS NEWS
ಮಂಗಳೂರು: ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಬಾಣಂತಿ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾರ್ಕಳ ನಿವಾಸಿ ರಂಜಿತಾ (28) ಆತ್ಮಹತ್ಯೆ ಮಾಡಿಕೊಂಡ ಬಾಣಂತಿ. ರಂಜಿತಾ ಹೆರಿಗೆಗೆಂದು ಲೇಡಿಗೋಷನ್ ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಟೋಬರ್ 30ರಂದು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೆರಿಗೆಯಾಗಿತ್ತು. ಎನ್ ಐಸಿಯುಗೆ ದಾಖಲಾಗಿದ್ದ ಶಿಶು ನ.3ರಂದು ಮೃತಪಟ್ಟಿದ್ದು, ಬಾಣಂತಿ ರಂಜಿತಾ ಗುಣಮುಖರಾಗಿದ್ದರು. ನ. 11ರಂದು ಡಿಸ್ಚಾರ್ಜ್ ಗೆಂದು ವೈದ್ಯರು ಸೂಚಿಸಿದ್ದರು. ಮನೆಯವರು ಕೂಡ ಸಿದ್ದರಾಗಿ ಬಂದಿದ್ದರು. ಆದರೆ ರಂಜಿತಾ ಏಕಾಏಕಿ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ವೈದ್ಯಾಧಿಕಾರಿಯವರು ತಿಳಿಸಿದ್ದಾರೆ.
ಪಕ್ಷಿಕೆರೆಯಲ್ಲಿ ನಡೆದ ಕೊಲೆ ಪ್ರಕರಣ, ಕಾರ್ತಿಕ್ ತಾಯಿ ಹಾಗೂ ಅಕ್ಕ ಬಂಧನ!
ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ತಿಕ್ ಭಟ್ ತಾಯಿ ಹಾಗೂ ಅಕ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಶ್ಯಾಮಲಾ ಭಟ್(61) ಹಾಗೂ ಸುರತ್ಕಲ್ ಬಾಳ ನಿವಾಸಿ ಕಣ್ಮಣಿ ರಾವ್(36) ಬಂಧಿತರು.ಇಬ್ಬರ ವಿರುದ್ಧ ಕಾರ್ತಿಕ್ ಭಟ್ ಪತ್ನಿಯ ತಾಯಿ ಸಾವಿತ್ರಿ ನೀಡಿದ ದೂರಿನಂತೆ 308 ಭಾರತೀಯ ನ್ಯಾಯ ಸಂಹಿತೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಳಿಕ ನಡೆದ ಮಹತ್ವದ ಬೆಳವಣಿಗೆಯಲ್ಲಿ ಮೃತ ಕಾರ್ತಿಕ್ ಭಟ್ ಡೆತ್ ನೋಟ್ ಪತ್ತೆಯಾಗಿದ್ದು ನಾಲ್ಕು ಪುಟಗಳ ಡೆತ್ ನೋಟ್ ನಲ್ಲಿ ತಾಯಿ ಶ್ಯಾಮಲಾ ಹಾಗೂ ಅಕ್ಕ ಕಣ್ಮಣಿಯನ್ನು ಪ್ರಸ್ತಾಪ ಮಾಡಿ ತಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ.
ನೈಜೀರಿಯಾದಲ್ಲಿ ಕೆಲಸ ಮಾಡಿತ್ತಿದ್ದ ಕಾರ್ತಿಕ್ ಭಟ್ ಬಿಟ್ಟು ಬಂದ ಬಳಿಕ ಊರಿನಲ್ಲಿ ಸರಿಯಾದ ಕೆಲಸ ಸಿಗದೇ ಆರ್ಥಿಕ ಮುಗ್ಗಟ್ಟಿನಿಂದ ಮತ್ತು ಆನ್ಲೈನ್ ಆಟದಿಂದ ನಷ್ಟ ಅನುಭವಿಸಿದ್ದ. ಈ ನಡುವೆ ಕಣ್ಮಣಿ ಭಟ್ ರವರು ಕಾರ್ತಿಕ್ ಭಟ್ ಹಾಗೂ ಪತ್ನಿ ಸಮೇತ ಮನೆಯಿಂದ ಹೊರ ಹಾಕುವ ಯತ್ನ ಬಗ್ಗೆ ತಾಯಿ ಜೊತೆ ಪ್ಲಾನ್ ಮಾಡಿದ್ದಳು ಎನ್ನಲಾಗಿದೆ.
ಕಿರಿಕಿರಿ ಅನುಭವಿಸಿದ ಕಾರ್ತಿಕ್ ಭಟ್ ಏಕಾಏಕಿ ತನ್ನ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದು ಡೆತ್ ನೋಟ್ ಆಧಾರದ ಮೇಲೆ ಕಾರ್ತಿಕ್ ಭಟ್ ಹಾಗೂ ಅಕ್ಕನ ಮೇಲೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿ ಪ್ರಕರಣದ ಬಗ್ಗೆ ಕೂಲಂಕುಶ ತನಿಖೆ ನಡೆಯುತ್ತಿದೆ.
ಪಕ್ಷಿಕೆರೆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಕಾರ್ತಿಕ್ ಪತ್ನಿಯ ತಾಯಿ ನೀಡಿದ ದೂರಿನಂತೆ ಹಾಗೂ ಡೆತ್ ನೋಟಿನ ಅನ್ವಯ ಮೃತ ಕಾರ್ತಿಕ್ ತಾಯಿ ಶ್ಯಾಮಲಾ ಹಾಗೂ ಸಹೋದರಿ ಕಣ್ಮಣಿ ಮೇಲೆ ಪ್ರಕರಣ ದಾಖಲಾಗಿದ್ದು ಮುಲ್ಕಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಆರೋಪಿಗಳು ಹೈಡ್ರಾಮ ಮಾಡಿ ಅನಾರೋಗ್ಯದಿಂದ ತಲೆ ತಿರುಗಿ ಬಿದ್ದಿದ್ದಾರೆ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲಿನಡಿ ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಭಟ್ ಕುಟುಂಬದ ವಿರುದ್ಧ ಮತ್ತಷ್ಟು ಆರೋಪಗಳ ಸರಮಾಲೆ ಕೇಳಿ ಬಂದಿದೆ
ಮೃತ ಕಾರ್ತಿಕ್ ಭಟ್ ಅನ್ ಲೈನ್ ಆಟದ ಗೀಳು ಹೊಂದಿದ್ದು ಸ್ಥಳೀಯ ವ್ಯಕ್ತಿಯೋರ್ವರು ಕಾರ್ತಿಕ್ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಚಿನ್ನದ ಒಡವೆ ಇಟ್ಟಿದ್ದು, ಈ ಮೂಲಕ 3 ಲಕ್ಷ ರೂ ಸಾಲ ಪಡೆದಿದ್ದರು. ಇದೀಗ ಅದನ್ನು ಪರಿಶೀಲನೆ ಮಾಡುವಾದ ಆ ಚಿನ್ನದ ಒಡವೆ, ಅಡವಿಟ್ಟು ನಾಲ್ಕು ತಿಂಗಳಲ್ಲೇ ನಾಪತ್ತೆಯಾಗಿದೆ ಎಂದು ಸ್ಥಳೀಯ ವ್ಯಕ್ತಿಯೋರ್ವರು ಆರೋಪಿಸುತ್ತಿದ್ದಾರೆ.
ಕಾರ್ತಿಕ್ ಪತ್ನಿ ಪ್ರಿಯಾಂಕ, ಪ್ರತೀ ದಿನ ಸುರತ್ಕಲ್ ಗೆ ಜಿಮ್ ಗೆ ಹೋಗುತ್ತಿದ್ದು, ನಂತರ ಮನೆಯ ಕೋಣೆಯ ಕೋಣೆಯಲ್ಲಿ ಇರುತ್ತಿದ್ದಳು ಇಡೀ ದಿನ ಮನೆಯ ಕೊಣೆಯಲ್ಲಿ ಏನು ಮಾಡುತ್ತಿದ್ದಳು ಎಂಬುದೇ ಪ್ರಶ್ನೆಯಾಗಿದೆ.ಈ ನಡುವೆ ಕೊಲೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕಾರ್ತಿಕ್ ಭಟ್ ಹಾಗೂ ಪತ್ನಿಯ ಮೊಬೈಲ್ ಕೊಲೆ ನಡೆದ ರೂಮ್ ನ ಟಾಯ್ಲೆಟ್ ಕಮೋಡ್ ನಲ್ಲಿ ಪತ್ತೆಯಾಗಿದ್ದು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.