ಕರಾವಳಿ ಟಾಪ್ ನ್ಯೂಸ್
– ಬಂಟ್ವಾಳ: ರಾತ್ರಿ ವೇಳೆ ಪ್ರೇಯಸಿಗಾಗಿ ಬಂದ ಹುಡುಗನ ಮೇಲೆ ಹಲ್ಲೆ!
– ಮಂಗಳೂರು: 2 ವರ್ಷದ ಮಗು ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ!
– ಕಾರ್ಕಳ: ಪರಶುರಾಮ ಮೂರ್ತಿ ವಿವಾದ, ಕೃಷ್ಣ ನಾಯ್ಕ 7 ದಿನ ಪೊಲೀಸ್ ಕಸ್ಟಡಿಗೆ!
NAMMUR EXPRESS NEWS
ಬಂಟ್ವಾಳ: ರಾತ್ರಿ ವೇಳೆ ಪ್ರೇಯಸಿಯನ್ನು ನೋಡಲು ಬಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡದ ಬಂಟ್ವಾಳದ ಸಜೀಪನಡು ಗ್ರಾಮದ ಕಂಚಿನಡ್ಕಹದವು ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕ ಮಹಮ್ಮದ್ ಮುಸ್ತಾಹ(21)ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಸ್ತಾಫನ ಸಂಬಂಧಿ ಹುಡುಗಿಯೊಬ್ಬಳು ಸಜೀಪನಡು ಗ್ರಾಮದ ಕಂಚಿನಡ್ಕ ಹದವಿನಲ್ಲಿರುವ ಮನೆಗೆ ಬರಲು ಹೇಳಿದ್ದಳು. ಅದರಂತೆ ಆತ ಸಜೀವನಡು ಕಂಚಿನಡ್ಕ ಹದವು ಎಂಬಲ್ಲಿಗೆ ಬಂದಾಗ ಮುಸ್ತಾಫನ ಬಗ್ಗೆ ಅನುಮಾನಗೊಂಡು ಗುಂಪು ಸೇರಿ ಆತನನ್ನು ಕಂಬಕ್ಕೆ ಹಗ್ಗದಿಂದ ಕಟ್ಟಿಹಾಕಿ ಹಲ್ಲೆ ನಡೆಸಲಾಗಿದೆ. ಈ ಘಟನೆ ಸಂಬಂಧ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪ ಯುವಕರ ಗುಂಪು ಮುಸ್ತಾಫನನ್ನು ಕಂಬಕ್ಕೆ ಕಟ್ಟಿ ಹಾಕಿ ಅರೆಬೆತ್ತಲೆಗೊಳಿಸಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಮಹಮ್ಮದ್ ಸಪ್ಪಾನ್, ಮಹಮ್ಮದ್ ರಿಜ್ವಾನ್, ಇರ್ಪಾನ್, ಅನೀಸ್ ಅಹಮ್ಮದ್, ನಾಸೀರ್,ಶಾಕೀರ್ ಬಂಧಿಸಲಾಗಿದೆ. ಇವರ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
– ಮಂಗಳೂರು: 2 ವರ್ಷದ ಮಗು ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ!
ಮಂಗಳೂರು: ಗುರುಪುರ ಸೇತುವೆ ಮೇಲಿಂದ ವ್ಯಕ್ತಿಯೊಬ್ಬ 2 ವರ್ಷದ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನ. 10ರಂದು ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಕೈಕಂಬ ನಿವಾಸಿ ಸಂದೀಪ್ ಎಂದು ಗುರುತಿಸಲಾಗಿದೆ. ಸೇತುವೆಯ ತಡೆಗೋಡೆ ಏರಿ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದು ವಾಹನ ಸವಾರರು ತಡೆದು ರಕ್ಷಿಸಿ ಥಳಿಸಿದ್ದಾರೆ.
ಮೊದಲಿಗೆ ಕೆಲ ಮುಸ್ಲಿಂ ಯುವಕರು ಸಂದೀಪ್ನ ಮನವೊಲಿಸುವ ಪ್ರಯತ್ನ ಮಾಡಿದ್ದಾಗ ಅವನು ಯಾರನ್ನೂ ಸಮೀಪಕ್ಕೆ ಬಿಟ್ಟುಕೊಂಡಿಲ್ಲ. ಈ ವೇಳೆ ಅವನು ನದಿಗೆ ಹಾರಿದರೆ ರಕ್ಷಣೆ ಮಾಡಲು ಕೆಲ ಯುವಕರು ಸಿದ್ಧರಾಗಿ ನಿಂತಿದ್ದರು.
ಕೊನೆಗೆ ನದಿಗೆ ಹಾರಲು ಸಂದೀಪ್ ಯತ್ನಿಸಿದಾತ ಆಯತಪ್ಪಿ ಸೇತುವೆಯ ಮೇಲೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಹಿಡಿದು ಮಗುವನ್ನು ರಕ್ಷಣೆ ಮಾಡಿ ಆತ್ಮಹತ್ಯೆ ಮಾಡಲು ಮುಂದಾದವನಿಗೆ ಯುವಕರು ಎರಡೇಟು ನೀಡಿ ಬುದ್ಧಿ ಕಲಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಸ್ಥಳಕ್ಕೆ ಬಚ್ಛೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
– ಕಾರ್ಕಳ: ಪರಶುರಾಮ ಮೂರ್ತಿ ವಿವಾದ, ಕೃಷ್ಣ ನಾಯ್ಕ 7 ದಿನ ಪೊಲೀಸ್ ಕಸ್ಟಡಿಗೆ!
ಕಾರ್ಕಳ : ಬೈಲೂರಿನ ಥೀಮ್ ಪಾರ್ಕ್ನಲ್ಲಿ ಪರಶುರಾಮ ಮೂರ್ತಿ ನಿರ್ಮಾಣ ಮಾಡಿರುವ ಶಿಲ್ಪಿ, ಕೃಷ್ ಆರ್ಟ್ ವರ್ಲ್ಡ್ನ ಕೃಷ್ಣ ನಾಯ್ಕನನ್ನು ಕಾರ್ಕಳ ನಗರ ಪೊಲೀಸರು ನ.10ರಂದು ಬಂಧಿಸಿದ್ದು, ನ. 11ರಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಕೃಷ್ಣ ನಾಯ್ಕನನ್ನು 7 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಕೃಷ್ಣ ನಾಯ್ಕ ವಿರುದ್ಧ ಕೃಷ್ಣ ಶೆಟ್ಟಿ ಬಜಗೋಳಿ ದಾಖಲಿಸಿರುವ ದೂರಿಗೆ ಸಂಬಂಧಪಟ್ಟಂತೆ ನ.4ರಂದು ಕಾರ್ಕಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಶಿಲ್ಪಿ ಕೃಷ್ಣ ನಾಯ್ಕ ಅವರ ನಿರೀಕ್ಷಣಾ ಜಾಮೀನು ಆದೇಶವನ್ನು ನ.7ಕ್ಕೆ ಕಾಯ್ದಿರಿಸಿದ್ದರು. ನ.7ರಂದು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾಗಿದೆ. ಜಾಮೀನು ಅರ್ಜಿ ತಿರಸ್ಕೃತವಾದ ಬೆನ್ನಲ್ಲೇ ನ.10ರಂದು ಪೊಲೀಸರು ಕೃಷ್ಣ ನಾಯ್ಕನನ್ನು ಕ್ಯಾಲಿಕಟ್ನಲ್ಲಿ ಬಂಧಿಸಿದ್ದು, ನ. 11ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.