ಕರಾವಳಿ ಟಾಪ್ ನ್ಯೂಸ್
– 1 ಲಕ್ಷಕ್ಕೂ ಹೆಚ್ಚು ವೇಶ್ಯೆ ಇದ್ದಾರೆ!
– ಅರಣ್ಯಾಧಿಕಾರಿ ವಿವಾದಾತ್ಮಕ ಹೇಳಿಕೆಗೆ ಭಾರೀ ಖಂಡನೆ
– ಬೋಟ್ ಮುಳುಗಿ ನಾಪತ್ತೆ, ಮೃತದೇಹ ಸಮುದ್ರದಲ್ಲಿ ಪತ್ತೆ
– ಬೆಳ್ತಂಗಡಿ: ನಿಯಂತ್ರಣ ತಪ್ಪಿ ಕಾರ್ ಚರಂಡಿಗೆ ಬಿದ್ದಿತು!
NAMMUR EXPRESS NEWS
ಮಂಗಳೂರು : ಹಿಂದೂ ಧರ್ಮದ ಒಂದು ಸಮುದಾಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಹೆಣ್ಣು ಮಕ್ಕಳು ವೇಶ್ಯೆಯರಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪಂಜ ಉಪವಲಯ ಅರಣ್ಯಾಧಿಕಾರಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಂದೂ ಸಂಘಟನೆಯ ಕಾರ್ಯಕರ್ತ ಸುರೇಶ್ ಎಂಬುವರ ಜೊತೆ ಅವರು ದೂರವಾಣಿ ಮುಖಾಂತರ ಮಾತನಾಡುವಾಗ ಈ ಒಂದು ಹೇಳಿಕೆ ನೀಡಿದ್ದು ಅಧಿಕಾರಿಯ ಈ ಹೇಳಿಕೆಗೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ.
* ಬೋಟ್ ಮುಳುಗಿ ನಾಪತ್ತೆ, ಮೃತದೇಹ ಸಮುದ್ರದಲ್ಲಿ ಪತ್ತೆ!
ಕಾಸರಗೋಡು: ನೀಲೇಶ್ವರ ಅಳಿತಲದಲ್ಲಿ ಮೀನುಗಾರಿಕೆಯ ಬೋಟ್ ಮುಳುಗಿ ನಾಪತ್ತೆಯಾಗಿದ್ದ ಮುಜೀಬ್ ಅವರ ಮೃತದೇಹ ಪೂಂಜಾವಿ ಸಮುದ್ರದಲ್ಲಿ ಪತ್ತೆಯಾಗಿದೆ. ಜಿಲ್ಲಾಧಿಕಾರಿ ಕೆ. ಇಂಬುಶೇಖರ್ ಅವರ ನಿರ್ದೇಶ ಪ್ರಕಾರ ನೌಕಾದಳ ಬೇಪೂರಿನಲ್ಲಿರುವ ಡ್ರಾನಿಯರ್ ಏರ್ಕ್ರಾಫ್ಟ್, ನೌಕಾದಳ ಶಿಪ್, ಫಿಶರೀಸ್ ರೆಸ್ಕ್ಯೂ ಬೋಟ್, ಕೋಸ್ಟಲ್ ಪೊಲೀಸ್ ಪೆಟ್ರೋಲ್ ಬೋಟ್ ಬಳಸಿ ಶೋಧ ಕಾರ್ಯ ನಡೆಸುತ್ತಿರುವಂತೆ ಮೃತದೇಹ ಪತ್ತೆಯಾಗಿದೆ. ಮುಳುಗಿದ ಬೋಟ್ ಹಾಗೂ ಬಲೆ ಪತ್ತೆ ಹಚ್ಚಲಾಗಿದೆ
* ನಿಯಂತ್ರಣ ತಪ್ಪಿ ಕಾರ್ ಚರಂಡಿಗೆ ಬಿದ್ದ ಘಟನೆ!
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆಯ ಬೆಳ್ತಂಗಡಿ ಸಮೀಪದ ಕಾಶಿಬೆಟ್ಟು ಎನ್ನುವಲ್ಲಿ ಚರಂಡಿಗೆ ಬಿದ್ದ ಘಟನೆ ಅ. 16 ರಂದು ಸಂಭವಿಸಿದೆ.
ಉಡುಪಿಯಿಂದ ಮೂವರು ಯುವಕರು ಆರಿಕೋಡಿ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭ ಬೆಳಗ್ಗೆ ಸುಮಾರು 4:45ರ ವೇಳೆಗೆ ಈ ಘಟನೆ ಸಂಭವಿಸಿದೆ. ನಿದ್ದೆಯ ಮಂಪರಿನಲ್ಲಿ ಈ ಘಟನೆ ನಡೆದಿದ್ದು, ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಮೂವರೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿ ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದ ಕ್ರೇನ್ ಬಳಸಿ ಕಾರನ್ನು ಮೇಲಕ್ಕೆತ್ತಲಾಯಿತು. ಈ ಹಿಂದೆ ರಸ್ತೆ ಬದಿಯ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದ ವೇಳೆ ಕಬ್ಬಿಣದ ಸರಳುಗಳು ಅಪಾಯವನ್ನು ತಂದೊಡ್ಡುವಂತಿತ್ತು. ಕೆಲವೆಡೆ ಇನ್ನೂ ಕೂಡ ಅಪಾಯಕಾರಿಯಾಗಿದ್ದು, ಆಯ ತಪ್ಪಿದರೆ ಸವಾರರ ಜೀವಕ್ಕೆ ಕುತ್ತು ಎನ್ನುವಂತಿದೆ.