ಕರಾವಳಿ ಟಾಪ್ ನ್ಯೂಸ್
ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ ಮಾಡಿದ ವಿದ್ಯಾರ್ಥಿನಿ!
* ಬಂಟ್ವಾಳದ ಚಿರಣ್ಯ ಆರ್ ಪೂಜಾರಿ ಅವರ ಮಾನವೀಯ ಸೇವೆ
ಉಡುಪಿ: 24ರಿಂದ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ!
– 2 ಸಾವಿರಕ್ಕೂ ಅಧಿಕ ವಿದ್ವಾಂಸರು ಭಾಗಿ:23 ವಿಚಾರ ಸಂಕಿರಣ
NAMMUR EXPRESS NEWS
ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಮಾಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಚಿರಣ್ಯ ಆರ್ ಪೂಜಾರಿ ಟೀಂ ಸೇವಾಪಥದ ಮೂಲಕ ಕ್ಯಾನ್ಸರ್ ಪೀಡಿತ ತನ್ನ ಕೇಶ ದಾನಗೈದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಚಿರಣ್ಯ ಆರ್ ಪೂಜಾರಿ ವೀರಕಂಭ ಗ್ರಾಮದ ಗಣೇಶಕೋಡಿಯ ರಾಮಚಂದ್ರ ರೇಖಾ ದಂಪತಿಗಳ ಪುತ್ರಿ ಹಿಡಿದ, ತನ್ನ ಮಗಳನ್ನು ಕೇಶದಾನಗೈಯಲು ಪ್ರೇರಣೆ ನೀಡಿದ ರಾಮಚಂದ್ರರವರು ಆತ್ಮೀಯ ಮಿತ್ರರೆಲ್ಲರ ಸಹಕಾರದೊಂದಿಗೆ ನಮ್ಮ ಶ್ರೀ ಸಾಯಿಗಣೇಶ ಸೇವಾ ಸಂಘದ ಸಾರಥಿಯಾಗಿ ಅಶಕ್ತರಿಗೆ ನೆರವು ನೀಡುತ್ತಾ ಯುವಶಕ್ತಿಪಥ, ಯುವಶಕ್ತಿ ರಕ್ತನಿಧಿಯ ಮೂಲಕ ಸಮಾಜ ಸೇವೆಗೆ ಸದಾ ಕೈ ಜೋಡಿಸುವ ನಿಷ್ಠಾವಂತ ಕಾರ್ಯಕರ್ತರು ಇವರ ಈ ಸೇವಾಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ.ವಿದ್ಯಾರ್ಥಿನಿಯ ಈ ಸೇವಾ ಕಾರ್ಯಕ್ಕೆ ವಿದ್ಯಾರ್ಥಿನಿಯ ಕುಟುಂಬಸ್ಥರು, ಗ್ರಾಮಸ್ಥರು ಶಾಲಾ ಶಿಕ್ಷಕರು, ಸಹಪಾಠಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
24ರಿಂದ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ!!
ಉಡುಪಿ: ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ತು,ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಅ.24ರಿಂದ 26ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಐತಿಹಾಸಿಕ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಆಯೋಜಿಸಲಾಗಿದೆ. ದೇಶ -ವಿದೇಶಗಳ 2 ಸಾವಿರಕ್ಕೂ ಅಧಿಕ ವಿದ್ವಾಂಸರು ಸಮ್ಮೇಳನದಲ್ಲಿ ವಿದ್ವತ್ತೂರ್ಣ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ದೇಶದ ವಿವಿಧ ವಿಶ್ವವಿದ್ಯಾಲಯಗಳ 18ಕ್ಕೂ ಹೆಚ್ಚಿನ ಕುಲಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ದೀಪಾವಳಿ ಸಂದರ್ಭ ಕೃಷ್ಣನ ಸನ್ನಿಧಿಯಲ್ಲಿ ಜ್ಞಾನ ದೀಪೋತ್ಸವ ನಡೆಯಲಿದೆ ಎಂದರು.ಆಲ್ ಇಂಡಿಯಾ ಓರಿಯಂಟಲ್ ಕಾನ್ವರೆನ್ಸ್ ಕಾರ್ಯದರ್ಶಿ ಡಾ.ಶಿವಾನಿ ವಿ. ಮಾತನಾಡಿ, 1919ರಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾ ನಗರದಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ಭಾರತೀಯ ಭಾಷೆಗಳು ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸುತ್ತಿದೆ. ಪ್ರತಿ 2 ವರ್ಷಕ್ಕೊಮ್ಮೆ ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ 50 ಸಮಾವೇಶಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದರು.
ಅಷ್ಟಮಠಗಳ ಆವರಣ, ಸಂಸ್ಕೃತ ಕಾಲೇಜು ಮೊದಲಾದ ಸ್ಥಳಗಳಲ್ಲಿ ಏಕಕಾಲದಲ್ಲಿ ಶಿಕ್ಷಣ, ಬಾಲಸಾಹಿತ್ಯ, ಕನ್ನಡ, ಸಂಸ್ಕೃತ ಪಾಲಿ, ಉರ್ದು, ಯೋಗ, ಆಯುರ್ವೇದ ಮೊದಲಾದ ಒಟ್ಟು 23 ವಿಷಯಗಳಲ್ಲಿ ಪ್ರತ್ಯೇಕ ವಿಚಾರಸಂಕಿರಣ ನಡೆಯಲಿದೆ ಎಂದರು.
ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶ್ರೀನಿವಾಸ ವರಖೇಡಿ, ಕರ್ನಾಟಕ ಸಂಸ್ಕೃತ ವಿವಿ ಡೀನ್ ಡಾ.ವೀರನಾರಾಯಣ ಪಾಂಡುರಂಗಿ ಮಾತನಾಡಿದರು. ದಿವಾನ್ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಅಚಾರ್ಯ, ಎಐಒಸಿ ಕಾರ್ಯದರ್ಶಿ ಡಾ.ಶ್ರುತಿ ರಾವ್, ವಿದ್ವಾಂಸರಾದ ಭಾಸ್ಕರ ಜೋಶಿ, ವೇದೇಶ ಆಚಾರ್ಯ, ಷಣ್ಮುಖ ಹೆಬ್ಬಾರ್ ಮತ್ತಿತರರು ಇದ್ದರು..