ಕರಾವಳಿ ಟಾಪ್ ನ್ಯೂಸ್
– ಮಂಗಳೂರು: ಶಾಲಾ ಬಸ್ ಚಾಲಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ!
– ಪುತ್ತೂರು: ಗುಡಿಸಲು ಬೆಂಕಿಗಾವುತಿ,15 ಸಾವಿರ ನಗದು, ದಾಖಲೆ ಪತ್ರ ಭಸ್ಮ!
– ಕುಂದಾಪುರ: ವೆಲ್ಡಿಂಗ್ ಕೆಲಸ ವೇಳೆ ಶೀಟ್ ಮಾಡಿನಿಂದ ಬಿದ್ದು ಸಾವು!
NAMMUR EXPRESS NEWS
ಮಂಗಳೂರು: 9ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಾಲಾ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ತೃಕ್ಕಾರಿಪುರ ಮಣಿಯನೋಡಿ ನಿವಾಸಿ ಶಬೀರ್ ಆಲಿ ಬಂಧಿತ ಆರೋಪಿ.
ಚಾಂತೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಸಂತ್ರಸ್ತೆಯ ತಾಯಿಯ ಪರಿಚಯವಿದ್ದ ಶಬೀರ್ ಇದರ ಲಾಭ ಪಡೆದು ಆಕೆಗೆ ಕಿರುಕುಳ ನೀಡಿದ್ದಾನೆ.
ಬಾಲಕಿಯ ವರ್ತನೆಯ ಬಗ್ಗೆ ಅನುಮಾನಗೊಂಡ ಪೋಷಕರು ವಿಚಾರಿಸಿದಾಗ ಬಸ್ ಚಾಲಕ ದೌರ್ಜನ್ಯ ಎಸಗಿರುವುದು ತಿಳಿದುಬಂದಿದೆ. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಶಬೀರ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
* ಗುಡಿಸಲು ಬೆಂಕಿಗಾವುತಿ,15 ಸಾವಿರ ನಗದು ಹಣ, ದಾಖಲೆ ಪತ್ರಗಳು ಭಸ್ಮ!
ಪುತ್ತೂರು: ತಾಲ್ಲೂಕಿನ ಕುಂಬ್ರ ಸಮೀಪದ ಸಾರೆಪುಣಿ ಪಾದೆಡ್ಕ ಎಂಬಲ್ಲಿ ಗುಡಿಸಲೊಂದು ಅ. 18ರಂದು ಬೆಂಕಿಗಾವುತಿಯಾಗಿ ಅಪಾರ ನಷ್ಟ ಉಂಟಾಗಿದೆ. ಗುಡಿಸಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಪಾದೆಡ್ಕ ನಿವಾಸಿ ಪದ್ಮಾವತಿ ಹಾಗೂ ಅವರ ಎಳೆಯ ಪ್ರಾಯದ ಪುತ್ರ ವಾಸ್ತವ್ಯವಿದ್ದ, ಮನೆಯೊಳಗೆ ಬ್ಯಾಗ್ನಲ್ಲಿ ಇರಿಸಿದ್ದ 15 ಸಾವಿರ ನಗದು ಹಣ, ಆಧಾರ್ ಕಾರ್ಡ್ ಸಹಿತ ದಾಖಲೆ ಪತ್ರಗಳು, ದಿನಸಿ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಗೋಡೆ ಇಲ್ಲದ ಗುಡಿಸಲಿನ ಸುತ್ತ ಅಳವಡಿಸಲಾಗಿದ್ದ ನೆಟ್ ಸುಟ್ಟು ಹೋಗಿದೆ.
ಬೆಂಕಿ ಅವಘಡ ನಡೆದ ವಿಷಯ ತಿಳಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ, ಎಸ್ಕೆಎಸ್ಎಸ್ಎಫ್ ಮುಖಂಡ ಅಶ್ರಫ್ ಸಾರೆಪುಣಿ ಜತೆಗೆ ಸ್ಥಳೀಯರಾದ ಹುಕ್ರ ಎಂಬುವರು ಬೆಂಕಿ ನಂದಿಸಲು ಶ್ರಮಿಸಿದರು. ಘಟನಾ ಸ್ಥಳಕ್ಕೆ ಕೆದಂಬಾಡಿ ಗ್ರಾಮ ಸಹಾಯಕ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
* ವೆಲ್ಡಿಂಗ್ ಕೆಲಸ ವೇಳೆ ಶೀಟ್ ಮಾಡಿನಿಂದ ಬಿದ್ದು ಸಾವು!
ಕುಂದಾಪುರ: ಅ.19: ವ್ಯಕ್ತಿಯೊಬ್ಬರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಶೀಟ್ ಮಾಡಿನಿಂದ ಬಿದ್ದು ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ರಾಧಿಕಾ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಜಪ್ರುದ್ದಿನ್ ಎಂದು ಗುರುತಿಸಲಾಗಿದೆ. ಇವರು ಫ್ಯಾಕ್ಟರಿಯಲ್ಲಿ ಹಳೆಯ ಶೀಟ್ ಮಾಡಿನ ವೆಲ್ಡಿಂಗ್ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಅ.17ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ ದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.