ಕರಾವಳಿ ಟಾಪ್ ನ್ಯೂಸ್
– ರೈಲಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ : ಅಪರಾಧಿಗೆ 20 ವರ್ಷ ಜೈಲು!!
– ಬಂಟ್ವಾಳ: ಬಸ್ಸಿನಲ್ಲಿ ಚಿನ್ನದ ಸರ ಕಳವು, ಮೂವರು ಕಳ್ಳಿಯರು ಅಂದರ್
– ಮಂಗಳೂರು: ಮಾದಕ ವಸ್ತು ಮಾರಾಟ – ಆರು ಮಂದಿ ಆರೋಪಿಗಳು ಅರೆಸ್ಟ್!!
NAMMUR EXPRESS NEWS
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ.ಎಸ್. ಅವರು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಅ. 28ರಂದು ತೀರ್ಪು ನೀಡಿದ್ದಾರೆ. ಬಂಟ್ವಾಳ ಬಿ. ಕಸಬಾ ಗ್ರಾಮ ನೆಹರೂ ನಗರದ ಅಬುತಾಹಿರ್ ಆಲಿಯಾಸ್ ಶಾಝಿಲ್(20) ಶಿಕ್ಷೆಗೊಳಗಾದ ಆರೋಪಿ.
* ಬಂಟ್ವಾಳ: ಬಸ್ಸಿನಲ್ಲಿ ಚಿನ್ನದ ಸರ ಕಳವು, ಮೂವರು ಕಳ್ಳಿಯರು ಅಂದರ್
ಹರಿಪಾಡ್: ಬಸ್ ಹತ್ತುವಾಗ ಮಹಿಳೆಯ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮನ್ನರಸಲ ದೇವಸ್ಥಾನಕ್ಕೆ ಭೇಟಿ ನೀಡಲು ಬಂದಿದ್ದ ಮಹಿಳೆಯೊಬ್ಬರ ಚಿನ್ನ ಸರ ಕದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ. ಬಂಟ್ವಾಳ ನಿವಾಸಿಗಳಾದ ಚೋಟಮ್ಮ(52), ಲಕ್ಷ್ಮಿ(37) ಮತ್ತು ಕೆಂಡಮ್ಮ(47) ಎಂಬುವರನ್ನು ಹರಿಪಾಡ್ ಪೊಲೀಸರು ಬಂಧಿಸಿದ್ದಾರೆ.
ಮನ್ನಾರಸಾಲ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ಕೊಲ್ಲಂ ಮೂಲದ ರಾಜಮ್ಮ ಎಂಬುವರ ಒಂದು ಮುಕ್ಕಾಲು ಪವನ್ ಚಿನ್ನದ ಸರವನ್ನು ಕದ್ದೊಯ್ದ ಘಟನೆ ಹರಿಪಾಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿತ್ತು.
ಬಸ್ ಹತ್ತುವಾಗ ಮೂವರು ಮಹಿಳೆಯರು ಕೈಚಳಕ ತೋರಿಸಿದ್ದಾರೆ. ಇದನ್ನು ಗಮನಿಸಿದ ರಾಜಮ್ಮ ಗಲಾಟೆ ಮಾಡಿದ್ದು, ಇತರೆ ಪ್ರಯಾಣಿಕರು ಯುವತಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಪಾಸಣೆ ವೇಳೆ ಬ್ಯಾಗ್ನೊಳಗೆ ಕಳ್ಳತನವಾದ ಸರ ಪತ್ತೆಯಾಗಿದೆ.
* ಮಂಗಳೂರು: ಮಾದಕ ವಸ್ತು ಮಾರಾಟ – ಆರು ಮಂದಿ ಆರೋಪಿಗಳು ಅರೆಸ್ಟ್!!
ಮಂಗಳೂರು: ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪದಲ್ಲಿ ಆರು ಮಂದಿ ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಚಂದನ್ ಮತ್ತು ಶರತ್ ಮತ್ತು ಮಾದಕ ವಸ್ತು ಮಾರಾಟ ಮಾಡಲು ಸಹಕರಿಸಿದ ಇತರ ಆರೋಪಿಗಳಾದ ಮಧುಸೂಧನ ಕೊಂಚಾಡಿ, ಧನುಷ್ ಆಕಾಶ್ ಭವನ, ನೈಜಿರಿಯಾದ ಪ್ರಜೆ ಮೈಕಲ್ ಬಾಲಾಜಿ ಮತ್ತು ಮುಖೇಶ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಮಾದಕ ವಸ್ತುಗಳನ್ನು ಮತ್ತು ಸಾಗಾಟಕ್ಕೆ ಬಳಸಿದ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ. 11 ಗ್ರಾಮ್ ಕೋಕೇನ್ ಮತ್ತು 30 ಗ್ರಾಂ ತೂಕದ ಎಂಡಿಎಂಎ , ಸ್ಕೂಟರ್ ಮತ್ತು 9 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 91,000 ರೂ. ಎಂದು ಅಂದಾಜಿಸಲಾಗಿದೆ. ಕೆಐಒಸಿಎಲ್ ಹಿಂಭಾಗದ ಸಮುದ್ರ ಕಡೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಸ್ಕೂಟರ್ ನಿಲ್ಲಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಪಣಂಬೂರು ಠಾಣಾ ಪಿಎಸ್ಐ ಶ್ರೀಕಲಾ ಕೆ.ಟಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.