ಕ್ರಿಯೇಟಿವ್ ಕಾಲೇಜಿನ ಎನ್. ಎಸ್.ಎಸ್ ಶಿಬಿರ
* ಅ. 4ರಿಂದ 07ರವರೆಗೆ ವೈವಿಧ್ಯಮಯ ಕಾರ್ಯಕ್ರಮ!
* ಸಾರ್ವಜನಿಕಗೂ ಪಾಲ್ಗೊಳ್ಳಲು ಮುಕ್ತ ಅವಕಾಶ
NAMMUR EXPRESS NEWS
ಕಾರ್ಕಳ:ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಇದರ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2024 ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ. 4ರಂದು ಎನ್.ಎಸ್.ಎಸ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಹಲವಾರು ಕಾರ್ಯಕ್ರಮಗಳು ನಡೆದಿದೆ.
ಯಾವೆಲ್ಲಾ ಕಾರ್ಯಕ್ರಮಗಳ ಆಯೋಜನೆ?
ಅ.5ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಮಾಣ ಪತ್ರ ಪುರಸ್ಕೃತ ಅಶು ಬಜಗೋಳಿ ವಿರಚಿತ, ತುಳು ಭಕ್ತಿ ಪ್ರಧಾನ ನಾಟಕ “ದೈವದೃಷ್ಟಿ” ಕಾರ್ಯಕ್ರಮ
ಅ.6ರಂದು ಸ್ಥಳೀಯ ಪ್ರತಿಭೆ ಮಹಿಮಾ ಬಜಗೋಳಿ ಮತ್ತು ತಂಡದವರಿಂದ ಹಾಗೂ ಕ್ರಿಯೇಟಿವ್ ಹವ್ಯಾಸಿ ಕಲಾವಿದರಿಂದ “ಕ್ರಿಯೇಟಿವ್ ರಸಸಂಜೆ”ಕಾರ್ಯಕ್ರಮ.
ಅ.07ರಂದು ಕ್ರಿಯೇಟಿವ್ ಯಕ್ಷಾರಾಧನಮ್ ಕಲಾವಿದರಿಂದ ಯಕ್ಷಗಾನ ಪ್ರದರ್ಶನ,”ಕೃಪಾಸಿಂಧು” ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ, ಬಜಗೋಳಿ, ಕಾರ್ಕಳ ಹಾಗೂ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜಿಸಲಾಗಿದೆ.
ಅ.7ರವರೆಗೆ ಸಂಜೆ 6.00ರಿಂದ ಪ್ರಾರಂಭವಾಗುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು, ತಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ