ಕರಾವಳಿ ಟಾಪ್ ನ್ಯೂಸ್
ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ..!
– ಉಪ್ಪಿನಂಗಡಿ ಬಳಿ ನದಿಯಲ್ಲಿ ಮೊಸಳೆಗಳು ಪತ್ತೆ
– ಗೆಳತಿ ಮನೆಗೆ ಹೋದವನ ದರೋಡೆ: ಓರ್ವ ಅರೆಸ್ಟ್
– ಕಾರ್ಕಳ: ಧರ್ಮ ಅವಹೇಳನಕಾರಿ ಬ್ಯಾನರ್: ಇಬ್ಬರ ಬಂಧನ
NAMMUR EXPRESS NEWS
ಉಪ್ಪಿನಂಗಡಿ: ಹೊಸ ಬಸ್ ನಿಲ್ದಾಣದ ಬಳಿಯ ನೇತ್ರಾವತಿ ನದಿ ಸೇತುವೆಯ ಬದಿ ಸೆ.3ರಂದು ಮೊಸಳೆ ಪತ್ತೆಯಾಗಿದ್ದು, ಜನತೆಯ ಆತಂಕಕ್ಕೆ ಕಾರಣವಾಗಿದೆ.
ಸೆ.3ರ ಸಂಜೆ ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ನದಿಯ ಮತ್ತೊಂದು ಬದಿಯಲ್ಲಿ ಮೊಸಳೆಯೊಂದು ಮರಳ ದಿಬ್ಬದಲ್ಲಿ ವಿರಮಿಸುತ್ತಿರುವುದನ್ನು ಇಳಂತಿಲ ಗ್ರಾ.ಪಂ. ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ಫಯಾಜ್ ಯು.ಟಿ. ಅವರು ಗಮನಿಸಿದ್ದು, ಇದರ ಪೋಟೋವನ್ನು ಕ್ಲಿಕ್ಕಿಸಿದ್ದಾರೆ. ದೊಡ್ಡ ಗಾತ್ರದ ಮೊಸಳೆ ಇದಾಗಿದೆ. ಕಳೆದ 2022ರ ಸೆಪ್ಟೆಂಬರ್ ತಿಂಗಳಲ್ಲಿ ಪಂಜಳದ ಪೆಟ್ರೋಲ್ ಪಂಪ್ ಸಮೀಪ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಕಂಡು ಬಂದಿದ್ದವು. ಮಧ್ಯಾಹ್ನ ಹೊತ್ತಿನಲ್ಲಿ ನದಿ ಮಧ್ಯದಲ್ಲಿ ುವ ಕುರುಚಲು ಹುಲ್ಲನ್ನು ಹೊಂದಿರುವ ಮರಳ ದಿಬ್ಬದ ಮೇಲೆ ಈ ಮೊಸಳೆಗಳು ವಿಶ್ರಾಂತಿ ಪಡೆಯುವುದು ಕಂಡು ಬಂದಿತ್ತು. ಇದರಲ್ಲಿ ಒಂದು ಮೊಸಳೆ ದೊಡ್ಡ ಗಾತ್ರದಾದರೆ, ಇನ್ನೆರಡು ಮೊಸಳೆಗಳು ಅದಕ್ಕಿಂತ ಸ್ವಲ್ಪ ಸಣ್ಣ ಗಾತ್ರದವಾಗಿದ್ದವು.ಆದರೆ ಈ ಬಾರಿ ಒಂದು ಮೊಸಳೆ ಮಾತ್ರ ಕಂಡು ಬಂದಿದೆ. ನೇತ್ರಾವತಿ ನದಿಯಲ್ಲಿ ಮೊಸಳೆಗಳ ವಾಸ ಇವೆ ಎನ್ನುವುದಕ್ಕೆ ಇದು ಪುಷ್ಠಿ ನೀಡಿದೆ.
ಮೊಸಳೆ ಕಂಡು ಬಂದ ಸುಮಾರು 500 ಮೀ. ದೂರದಲ್ಲಿ ನೇತ್ರಾವತಿ- ಕುಮಾರಧಾರ ನದಿಗಳು ಸಂಗಮವಾಗುತ್ತಿದ್ದು, ಅಲ್ಲೇ ಇರುವ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ಸ್ನಾನಘಟ್ಟದಲ್ಲಿ ಪಿಂಡ ಪ್ರದಾನ ಕಾರ್ಯ, ತೀರ್ಥ ಸ್ನಾನಗಳು ನಿರಂತರ ನಡೆಯುತ್ತಿವೆ. ಅಲ್ಲದೇ, ಈ ಭಾಗದಲ್ಲೆಲ್ಲಾ ನದಿಗಿಳಿದು ಮೀನು ಹಿಡಿಯಲು ಬಲೆ ಹಾಕುವುದು, ಗಾಳ ಹಾಕುವುದು ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಇದೇ ನದಿಯಲ್ಲಿ ಮೊಸಳೆ ಕಂಡು ಬಂದಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.
ಗೆಳತಿ ಮನೆಗೆ ಹೋದವನ ದರೋಡೆ: ಓರ್ವ ಅರೆಸ್ಟ್
ಉಪ್ಪಿನಂಗಡಿ: ರಾತ್ರಿ ವೇಳೆ ಗೆಳತಿಯ ಮನೆಗೆ ಹೋಗಿ ಹಿಂದಿರುಗುತ್ತಿದ್ದ ಯುವಕನನ್ನು ದರೋಡೆಕೋರನೆಂದು ಬಿಂಬಿಸಿ ಪೊಲೀಸರಿಗೊಪ್ಪಿಸುವೆನೆಂದು ಬೆದರಿಸಿ ಯುವಕನ ಬೈಕ್ನ್ನು ವಶದಲ್ಲಿರಿಸಿಕೊಂಡು 2 ಲಕ್ಷ ರೂಪಾಯಿ ಹಣ ಪಾವತಿಸಬೇಕೆಂದು ತಾಕೀತು ಮಾಡಿ 25 ಸಾವಿರ ರೂಪಾಯಿ ಹಣವನ್ನು ಮುಂಗಡವಾಗಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮುರಿಯಾಳ ಮನೆ ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಸಂಶು ಯಾನೆ ಸಂಶುದ್ದೀನ್ (38) ಬಂಧಿತ ಆರೋಪಿ. ಪುತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಧನುಶ್ ಅಗಸ್ಟ್ 31 ರಂದು ಬೆಳ್ತಂಗಡಿ ತಾಲೂಕಿನ ಕರಾಯದ ಮಸೀದಿ ಬಳಿ ತನ್ನ ಬೈಕ್ ನಿಲ್ಲಿಸಿ ತನ್ನ ಗೆಳತಿಯ ಮನೆಗೆ ಹೋಗಿದ್ದರು. ನಸುಕಿನ ೇಳೆ ತನ್ನ ಮನೆಗೆ ಹಿಂದಿರುಗುವ ಸಲುವಾಗಿ ಬೈಕಿನ ಬಳಿಗೆ ಬಂದಾಗ, ಸಂಶುದ್ದೀನ್ ಮತ್ತಾತನ ಸಂಗಡಿಗ ವಿಡಿಯೋ ಚಿತ್ರೀಕರಣ ಮಾಡುತ್ತಾ ಬಂದು, ತನ್ನನ್ನು ಕೈಯಲ್ಲಿ ಹಿಡಿದುಕೊಂಡು ಸಮೀಪದ ಅಂಗಡಿಯ ಬಳಿಗೆ ಕರೆದೊಯ್ದು, ನೀನು ಯಾರು ? ಯಾಕೆ ಇಲ್ಲಿಗೆ ಬಂದದ್ದು, ? ದರೋಡೆ ಮಾಡಲು ಬಂದಿದ್ದಾ ? ಇಲ್ಲಿ ಮೊದಲು ಆಗಿದ್ದ ದರೋಡೆಯನ್ನು ನೀನೇ ಮಾಡಿದ್ದಾ ? ಎಂದೆಲ್ಲಾ ಪ್ರಶ್ನಿಸಿದ್ದಾರೆ.ತಾನು ದರೋಡೆಗೆ ಬಂದವನಲ್ಲ ಎಂದು ತಿಳಿಸಿದರೂ ಕೇಳದೆ, ನಾವು ಜನ ಮಾಡಿ ನಿನಗೆ ಹೊಡೆಯುತ್ತೇವೆ. ದರೋಡೆ ಮಾಡಲು ಯತ್ನಿಸಿದ್ದಾಗಿ ಪೊಲೀಸ್ ಇಲಾಖೆಗೆ ದೂರು ನೀಡುತ್ತೇವೆ ಎಂದೆಲ್ಲಾ ಬೆದರಿಸಿದ್ದಾರೆ. ನೀನು 2 ಲಕ್ಷ ಹಣ ಕೊಟ್ಟರೆ, ನಿನ್ನ ಮೇಲೆ ಕೇಸು ಇಲ್ಲದಾಗೆ ಮಾಡುತ್ತೇನೆ ಎಂದು ಹೇಳಿದಾಗ, ಧನುಷ್ ಭಯಪಟ್ಟು ಹಣವನ್ನು ನಾಳೆ ಕೊಡುತ್ತೇನೆಂದು ತಿಳಿಸಿರುತ್ತಾರೆ. ಈ ವೇಳೆ ಆರೋಪಿಯು ಧನುಷ್ ಕೈಯಲ್ಲಿದ್ದ ಬೈಕ್ ಕೀಯನ್ನು ಪಡೆದು ಹಣ ಕೊಟ್ಟ ಬಳಿಕ ಬೈಕ್ ಅನ್ನು ತೆಗೆದುಕೊಂಡು ಹೋಗೆಂದು ತಾಕೀತು ಮಾಡಿದ್ದಲ್ಲದೆ, ಈ ಬಗ್ಗೆ ಏನಾದರೂ ಪೊಲೀಸರಿಗೆ ದೂರು ನೀಡಲು ಹೋದರೆ ನಿನ್ನ ಮೇಲೆ ಬೇರೆಯೇ ಕೇಸು ದಾಖಲಿಸಿ ಒಳಗೆ ಹಾಕಿಸುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾನೆ. ಬಳಿಕ ಹಣವನ್ನು ಪಾವತಿಸಲು ನೆರವಾಗುವ ಸಲುವಾಗಿ ಆರೋಪಿಯು ತನ್ನ ಮೊಬೈಲ್ ನಂಬ್ರವನ್ನು ಧನುಷ್ ಗೆ ನೀಡಿದ್ದು, ಬೆದರಿಕೆಗೆ ಮಣಿದ ಧನುಷ್ ಆರೋಪಿಯು ನೀಡಿದ ಸ್ಕ್ಯಾನರ್ ಗೆ 2000 ರೂ. ಹಾಗೂ 23,000 ರೂ. ದಂತೆ ಒಟ್ಟು 25 ಸಾವಿರ ರೂಪಾಯಿ ಹಣವನ್ನು ಜಮಾ ಮಾಡಿದ್ದರು. ಉಳಿಕೆ ಮೊತ್ತವಾದ 1,75,000ರೂ. ವನ್ನು ಮುಂದಿನ 5 ದಿನಗಳಾವಧಿಯಲ್ಲಿ ಪಾವತಿಸಬೇಕು ಹಾಗೂ ಬೈಕ್ ದಾಖಲೆಗಳನ್ನು ಒದಗಿಸಬೇಕೆಂದು ಹೆಚ್ಚುವರಿ ಬೇಡಿಕೆ ಇಟ್ಟಾಗ, ಕಂಗೆಟ್ಟ ಧನುಷ್ ಗೆಳೆಯರೊಡನೆ ಚರ್ಚಿಸಿ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮುಸ್ಲಿಂ ವಹೇಳನಕಾರಿ ಬಯಾನರ್ ಅಳವಡಿಕೆ: ಇಬ್ಬರ ಬಂಧನ
ಕಾರ್ಕಳ: ಕಮಲಾಕ್ಷ ನಗರ ಎಂಬಲ್ಲಿ ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಬ್ಯಾನರ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಸೆ.3ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬ್ಯಾನರ್ನಲ್ಲಿ ಹೆಸರು ಉಲ್ಲೇಖಿಸಿದ್ದ ಸ್ಥಳೀಯ ನಿವಾಸಿ ಸತೀಶ್ ದೇವಾಡಿಗ ಹಾಗೂ ಬ್ಯಾನರ್ ಮುದ್ರಿಸಿದ ಕಾರ್ಕಳ ಮಾರ್ಕೆಟ್ ರಸ್ತೆಯಲ್ಲಿರುವ ಅಮೂಲ್ಯ ಗ್ರಾಫಿಕ್ಸ್ನ ಮಾಲಕಿ ಪುಷ್ಪಲತಾ ಎಂದು ಗುರುತಿಸಲಾಗಿದೆ.
ಮುಸ್ಲಿಮರ ಬಗ್ಗೆ ಅವಹೇಳನಕಾರಿ ಬರಹಗಳೊಂದಿಗೆ ಹಾಕಲಾದ ಬ್ಯಾನರ್ ಸೆ.2ರಂದು ಪ್ರತ್ಯಕ್ಷವಾಗಿದ್ದು,ಇದರಲ್ಲಿ ಸತೀಶ್ ದೇವಾಡಿಗ ತನ್ನ ಹೆಸರು ಹಾಗೂ ತಾನು ಸ್ವಾತಂತ್ರ್ಯ ಹೋರಾಟಗಾರ ಎಂಬುದಾಗಿ ಬರೆದುಕೊಂಡಿದ್ದನು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಸತೀಶ್ ದೇವಾಡಿಗ ಹಾಗೂ ಪುಷ್ಪಲತಾರನ್ನು ಬಂಧಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇವರ ಪೈಕಿ ಸತೀಶ್ ದೇವಾಡಿಗನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದು, ಪುಷ್ಪಲತಾಳನ್ನು ಷರತ್ತು ಬದ್ಧ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.