* ಕುಂದಾಪುರ:ಯುವಕನ ಮೃತದೇಹ ಕೋಟೇಶ್ವರ ಕೋಟಿಲಿಂಗೇಶ್ವರ ಕೆರೆಯಲ್ಲಿ ಪತ್ತೆ!!
* ಕಾಸರಗೋಡು:ರಿಕ್ಷಾ ಚಾಲಕ ಕೊಲೆ ಪ್ರಕರಣ!!
* ಮುಲ್ಕಿ: ಕಳವು ಪ್ರಕರಣ,ನಕಲಿ ಪಾಸ್ಪೋರ್ಟ್!!
* ಸುಳ್ಯ: ನಿಯಂತ್ರಣ ತಪ್ಪಿ ಕಾರು ಪಲ್ಟಿ,ಚಾಲಕಿ ಬಚಾವ್!
NAMMUR EXPRESS NEWS
ಕುಂದಾಪುರ : ಎಂ.ಬಿ.ಬಿ.ಎಸ್ ಮುಗಿಸಿ ಎಂ.ಎಸ್ ಮಾಡಲು ಸಿದ್ಧತೆ ನಡೆಸುತ್ತಿದ್ದ ಯುವಕನ ಮೃತದೇಹ ಕೋಟೇಶ್ವರ ಕೋಟಿಲಿಂಗೇಶ್ವರ ಕೆರೆಯಲ್ಲಿ ಸೆ. 19ರಂದು ಮುಂಜಾನೆ ಪತ್ತೆಯಾಗಿದೆ.
ಹಂಗಳೂರು ಪಂಚಾಯತ್ ಬಳಿಯ ನಿವಾಸಿ ನಾರಾಯಣ ಎಂಬುವರ ಮಗ ಗೌರೀಶ್ ಗಾಣಿಗ (28) ಎಂಬಾತನ ಮೃತದೇಹ ಪತ್ತೆಯಾಗಿದ್ದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಕೋಟೇಶ್ವರ ಕೆರೆಯಲ್ಲಿ ಹುಡುಕಾಡಿದಾಗ ಗೌರೀಶ್ ಮೃತ ದೇಹ ಪತ್ತೆಯಾಗಿದೆ.ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಕಾಸರಗೋಡು:ರಿಕ್ಷಾ ಚಾಲಕ ಕೊಲೆ ಪ್ರಕರಣ!!
ಕಾಸರಗೋಡು: ರಿಕ್ಷಾ ಚಾಲಕ ಉಪ್ಪಳ ಹಿದಾಯತ್ ನಗರದ ಸಕೀರ್ ಮಂಜಿಲ್ನ ಜಮ್ಮಿ ಯಾನೆ ಮುಹಮ್ಮದ್ ಸಮೀರ್ (26) ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಅಬೂಬಕರ್ ಸಿದ್ದಿಕ್(45)ಗೆ ಕಾಸರಗೋಡು ಅಡಿಷನಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ(ಒಂದು) ಜೀವಾವಧಿ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.
ಪ್ರಕರಣದ ಎರಡನೇ ಆರೋಪಿ ಹಾರೂನ್ ರಾಶೀದ್ ತಲೆಮರೆಸಿಕೊಂಡಿದ್ದಾನೆ. ಮೂರನೇ ಆರೋಪಿ ಮುಹಮ್ಮದ್ ಕುಂಞಿ ವಿಚಾರಣೆಗೆ ಮೊದಲೇ ನಿಧನ ಹೊಂದಿದ್ದಾನೆ. 2008ರ ಆ. 24ರಂದು ರಾತ್ರಿ ಪೊಸೋಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲೆ ನಡೆದಿತ್ತು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಮುಲ್ಕಿ: ಕಳವು ಪ್ರಕರಣ,ನಕಲಿ ಪಾಸ್ಪೋರ್ಟ್!!
ಮುಲ್ಕಿ: ಮುಲ್ಕಿ ಠಾಣೆ ವ್ಯಾಪ್ತಿಯ ಕಿನ್ನಿಗೋಳಿಯಲ್ಲಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮನೆಯಲ್ಲಿ ಕೆಲವು ಸಮಯಗಳ ಹಿಂದೆ ನಡೆದಿದ್ದ ಕಳವು ಪ್ರಕರಣದ ಪ್ರಮುಖ ಆರೋಪಿ, ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಸಹಿತ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿದ್ದಕಟ್ಟೆ ನಿವಾಸಿ ಹುಸೈನಬ್ಬ ಯಾನೆ ಸುಹೈಲ್ (33), ಝುಬೈರ್ ಹಾಗೂ ಕಾಸರಗೋಡು ನಿವಾಸಿ ಕಲಾಂ ಬಂಧಿತರು.
ಸುಹೈಲ್ ಹಾಗೂ ಝುಬೈರ್ ನೇರವಾಗಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದು, ಕಲಾಂ ನಕಲಿ ಪಾಸ್ಪೋರ್ಟ್ ಮಾಡುವಲ್ಲಿ ಸಹಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಯ: ನಿಯಂತ್ರಣ ತಪ್ಪಿ ಕಾರು ಪಲ್ಟಿ,ಚಾಲಕಿ ಬಚಾವ್!
ಸುಳ್ಯ: ಮಹಿಳೆಯೋರ್ವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಚರಂಡಿಗಿಳಿದು ಪಲ್ಟಿಯಾದ ಘಟನೆ ಸುಳ್ಯ ಸಮೀಪದ ಆಲೆಟ್ಟಿ ರಸ್ತೆಯ ನಾಗಪಟ್ಟಣದ ವಿಶ್ರಾಂತಿ ಗೃಹದ ಬಳಿ ಸಂಭವಿಸಿದೆ.
ಕಾರು ಚಾಲಕಿ ಅಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ಕಾಸರಗೋಡು ಜಾಲ್ಸೂರು ಅಂತಾರಾಜ್ಯ ರಸ್ತೆಯ ಮುರೂರು ಸಮೀಪ ಸಂಭವಿಸಿದೆ.
ಕಾರು ಜಾಲ್ಸೂರು ಕಡೆಯಿಂದ ಕಾಸರಗೋಡು ಹೋಗುತ್ತಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕಾರಿಗೆ ಅಲ್ಪ ಹಾನಿಯಾಗಿದೆ.