ಪುತ್ತೂರಿನಲ್ಲಿ ಶ್ವಾನ-ಬೆಕ್ಕು ಪ್ರದರ್ಶನ, ಸ್ಪರ್ಧೆ!
– ಸೆ.10ಕ್ಕೆ ಮೊದಲ ಬಾರಿಗೆ ಪುತ್ತೂರಿನಲ್ಲಿ ಆಯೋಜನೆ
– ಕರಾವಳಿ ಭಾಗದ ಅನೇಕ ಪ್ರಾಣಿ ಪ್ರಿಯರ ಆಗಮನ
– ಏನಿದು ಸ್ಪರ್ಧೆ…ಅರೋಗ್ಯಕ್ಕಾಗಿ ಝುಂಬಾ ಡ್ಯಾನ್ಸ್!
NAMMUR EXPRESS NEWS
ಪುತ್ತೂರು: ಪುತ್ತೂರು ಮತ್ತೂರು ಜೆಸಿಐ ಮತ್ತು ಮತ್ತೂರು ಕ್ಲಬ್ ವತಿಯಿಂದ ಸೆ.10 ರಂದು ಮಧ್ಯಾಹ್ನ 3 ಗಂಟೆಗೆ ಪುತ್ತೂರಿನ ಸಾಮೆತ್ತಡ್ಕದ ಮತ್ತೂರು ಕ್ಲಬ್ನಲ್ಲಿ ಮೊದಲ ಬಾರಿಗೆ ಸಾಕುಪ್ರಾಣಿಗಳ ಪ್ರದರ್ಶನ ಹಾಗೂ ಸೆ.15ರಂದು ಬೆಳಿಗ್ಗೆ 7 ಗಂಟೆಗೆ ಪ್ರಥಮ ಬಾರಿಗೆ ವಿಶೇಷ ವ್ಯಾಯಾಮಗಳ ‘ಝುಂಬಾ ಡ್ಯಾನ್ಸ್’ ಕಾರ್ಯಕ್ರಮ ನಡೆಯಲಿದೆ ಎಂದು ಮತ್ತೂರು ಕ್ಲಬ್ ಅಧ್ಯಕ್ಷ ಡಾ.ದೀಪಕ್ ರೈ ಮತ್ತು ಜೆಸಿಐ ಅಧ್ಯಕ್ಷ ಸುಹಾಸ್ ಮರಿಕೆ ತಿಳಿಸಿದ್ದಾರೆ. ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಅವರು ಮಾತನಾಡಿ, ಜೆಸಿಐ ಸಪ್ತಾಹದ ಅಂಗವಾಗಿ ಈ ಎರಡು ಕಾಯಕ್ರಮಗಳು ಆಯೋಜನೆ ಮಾಡಲಾಗಿದೆ. ಸಾಕುಪ್ರಾಣಿ ಪ್ರಿಯರು ತಮ್ಮ ನಾಯಿಗಳನ್ನು ಹಾಗೂ ಬೆಕ್ಕುಗಳನ್ನು ಈ ಪ್ರದರ್ಶನದಲ್ಲಿ ಪ್ರದರ್ಶಿಸಬಹುದಾಗಿದೆ. ನಾಯಿ ಮತ್ತು ಬೆಕ್ಕು ಸಾಕಾಣಿಕೆ ಬಗ್ಗೆ ಸಮಗ್ರ ಮಾಹಿತಿಯನ್ನೂ ಈ ಸಂದರ್ಭದಲ್ಲಿ ತಿಳಿದುಕೊಳ್ಳಬಹುದಾಗಿದೆ. ಗಂಡು, ಹೆಣ್ಣು ಎರಡು ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಲಾಗುವುದು. ಪ್ರದರ್ಶನದಲ್ಲಿ ವಿಶೇಷ ಗಮನ ಸೆಳೆದ ಸಾಕುಪ್ರಾಣಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಇದೊಂದು ಸಾರ್ವಜನಿಕರಿಗೆ ಮುಕ್ತ ಅವಕಾಶವಾಗಿದ್ದು, ಕಾನೂನು ಅನುಸರಣೆಯಡಿಯಲ್ಲಿ ಈ ಪ್ರದರ್ಶನ ಸ್ಪರ್ಧೆ ನಡೆಯಲಿದೆ. ಸೆ.15 ರಂದು ಪುತ್ತೂರು ಫಿಲೋಮಿನಾ ಪ್ರೌಢಶಾಲೆಯ ವಠಾರದಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ವಿವಿಧ ವ್ಯಾಯಾಮಗಳ ಝುಂಬಾ ಡ್ಯಾನ್ಸ್ ನಡೆಯಲಿದೆ. ಮ್ಯೂಸಿಕ್ ನೊಂದಿಗೆ ವಿವಿಧ ವ್ಯಾಯಾಮ ನಡೆಸುವ ಈ ಡ್ಯಾನ್ಸ್ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಆಯೋಜನೆ ಮಾಡಲಾಗಿದೆ, ಸೆ.9ರಿಂದ 15 ತನಕ ನಡೆಯುವ ಜೇಸಿಐ ಸಪ್ತಾಹದಲ್ಲಿ ಸೆ. 9ರಂದು ಮೊಟ್ಟೆತಡ್ಕ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗಾಗಿ ಉಚಿತ ಯೋಗ ತರಬೇತಿ ಮತ್ತು ಆರೋಗ್ಯ ತಪಾಸಣೆ, ಸೆ.11ರಂದು ದರ್ಬೆ ವೃತ್ತದಲ್ಲಿ ಗಿಡ ನೆಡುವ ಕಾರ್ಯಕ್ರಮ, ಸೆ.12ರಂದು ಕಿಡ್ನಿ ವೈಫಲ್ಯ ಹಾಗೂ ಆಶಕ್ತರಿಗೆ ನೆರವು, ಸೆ.13ರಂದು ನೀರುಳಿತಾಯದ ಅರಿವಿನ ಬಿತ್ತರ, ಸೆ.14ರಂದು ‘ವಿದ್ಯಾಭಿಯಾನ’ ಆಯೋಜನೆ ಮಾಡಲಾಗಿದೆ.
ಮಾಹಿತಿಗೆ 9480535708, 9538892570 ಸಂಖ್ಯೆಯನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು. ಜೆಸಿಐ ಸಪ್ತಾಹ ನಿರ್ದೇಶಕ ಮೋಹನ ಕೆ, ಜೆಸಿಐ ಪುತ್ತೂರು ಕಾರ್ಯದರ್ಶಿ ಕಾರ್ತಿಕ್ ಬಿ, ಪ್ಲೆಟ್ಪ್ಲಾನೆಟ್ ಸಂಸ್ಥೆಯ ವಾಲಕ ಪ್ರವೀಣ್ ರಾಜ್ ಉಪಸ್ಥಿತರಿದ್ದರು.