ಕರಾವಳಿಯಲ್ಲಿ ದಸರಾ ಸಂಭ್ರಮ!
* 3ನೇ ವರ್ಷದ ಉಡುಪಿ ಉಚ್ಚಿಲ ದಸರಾ!
* ಮೂಡಬಿದ್ರೆಯಲ್ಲಿ ಭರ್ಜರಿ ದಸರಾ ಸಂಭ್ರಮ!
* ಬಂಟ್ವಾಳ,ಪಾಣೆಮಂಗಳೂರಿನಲ್ಲಿ ವೇಷಧಾರಿಗಳ ಜೊತೆಗೆ ದಸರಾ ಸಂಭ್ರಮ!
NAMMUR EXPRESS NEWS
ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಐತಿಹಾಸಿಕ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ – 2024 ಕೊನೆಯ ಹಂತ ತಲುಪಿದ್ದು, ಶರನ್ನವರಾತ್ರಿಯ ವಿಜಯದಶಮಿ ದಿನವಾದ ಅ. 12ರಂದು ನಡೆಯಲಿರುವ ಭವ್ಯ ಶೋಭಾಯಾತ್ರೆಗೆ ಭರದ ಸಿದ್ಧತೆ ನಡೆಸಲಾಗಿದೆ.
ಶೋಭಾಯಾತ್ರೆಯನ್ನು ಶಿಸ್ತುಬದ್ಧವಾಗಿ ನಿರ್ವಹಿಸಲು ಪೊಲೀಸ್ ಇಲಾಖಾಧಿ ಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಮೆರವಣಿಗೆಯ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿ ಏಕ ನಾಯಕತ್ವದೊಂದಿಗೆ ಶೋಭಾಯಾತ್ರೆ ಮುಂದುವರಿಸಲು ನಿರ್ಧರಿಸಲಾಗಿದೆ. ಪೊಲೀಸರು ಶೋಭಾಯಾತ್ರೆಯ ಮಾರ್ಗವನ್ನು ಪರಿಶೀಲಿಸಿದ್ದು, ಅಗತ್ಯವಿದ್ದೆಡೆ ಹೆಚ್ಚು ಬಂದೋಬಸ್ತ್ ನಿರ್ವಹಿಸಲು ಸಿದ್ಧತೆ ನಡೆಸಿದ್ದಾರೆ.
ದಸರಾ ರೂವಾರಿ ನಾಡೋಜ ಡಾ.ಜಿ.ಶಂಕರ್ ಮತ್ತು ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಹಾಗೂ ಪದಾಧಿ ಕಾರಿಗಳ ಜತೆ ನಡೆದ ಸಭೆಯಲ್ಲಿ ಕಾಪು ಸಿಪಿಐ ಜಯಶ್ರೀ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಕುಮಾರ್ ಎಂ.ಎಸ್., ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ.
ಮೂಡಬಿದ್ರೆಯಲ್ಲೂ ಶರದಾ ದೇವಿ ಪ್ರತಿಷ್ಠಾಪನೆ!
ಮೂಡಬಿದ್ರೆ:ದಕ್ಷಿಣ ಕನ್ನಡದ ಮೂಡಬಿದ್ರೆಯಲ್ಲಿ ಶರದಾ ದೇವಿ ಪ್ರತಿಷ್ಠಾಪನೆ ಮಾಡಿದ್ದು, ಅದ್ದೂರಿಯಿಂದ ದಸರಾ ಸಂಭ್ರಮದ ಆಚರಣೆಗೆ ಸಿದ್ಧತೆಯಾಗುತ್ತಿದೆ.
ಹತ್ತು ಹಲವು ವೇಷಧಾರಿಗಳು ಮನೆ ಮನೆಗೆ ಹೋಗಿ ವಿಭಿನ್ನ ರೀತಿಯ ಹುಲಿ ವೇಷ, ಶಾರ್ದುಲ, ವೇಷಗಳು ಕೆನ್ಮಣ ಸೆಳೆಯುತ್ತಿದೆ.ಟ್ಯಾಬ್ಲೋ, ನೃತ್ಯಗಳು ಶಾರದಾ ಮೆರವಣಿಗೆಗೆ ಸಿದ್ದವಾಗಿದೆ.
ಬಂಟ್ವಾಳ,ಪಾಣೆಮಂಗಳೂರಿನಲ್ಲಿ ವೇಷಧಾರಿಗಳ ಜೊತೆಗೆ ದಸರಾ ಸಂಭ್ರಮ!
ಬಂಟ್ವಾಳ: ಬಂಟ್ವಾಳ ಮತ್ತು ಪಾಣೆಮಂಗಳೂರು ಶಾರದಾ ದೇವಿ ಅಲಂಕಾರದೊಂದಿಗೆ ಶಾರದಾ ಹೈ ಸ್ಕೂಲ್ ನಲ್ಲಿ ಪ್ರತಿಷ್ಠಾಪನೆ ಮಾಡಿದ್ದು, ಹತ್ತು ಹಲವು ವೇಷದ್ದಾರಿಗಳು ಮನೆ ಮನೆಗೆ ಬಂದು ನೃತ್ಯ ಪ್ರದರ್ಶನ ಮಾಡುತ್ತಿದ್ದಾರೆ.
ವೈಭವ ದಸರಾ ಹಬ್ಬಕ್ಕೆ ಸಜ್ಜಾಗಿರುವ ಹಬ್ಬದ ಹುಲಿ, ಶಾರ್ದುಲ ತಂಡ ಅದ್ದೂರಿಯಾಗಿದೆ.ಇದೊಂದು ವಿಭಿನ್ನ ರೀತಿಯ ವೈಭವವಾಗಿದ್ದು, ಹತ್ತು ಹಲವು ತಂಡ ಹಾಗೂ ವೈಯಕ್ತಿಕ ವ್ಯಕ್ತಿಗಳು ವೇದಿಕೆ ಪ್ರವೇಶಿಸಿ ನೃತ್ಯ ಪ್ರದರ್ಶಿಸುವ ಅವಕಾಶ ಕಲ್ಪಿಸಲಾಗುವುದು.
ನೃತ್ಯ ಪ್ರದರ್ಶನದ ಬಳಿಕ ಪ್ರಶಸ್ತಿ ಮೂಲಕ ಗೌರವಿಸಲಾಗುತ್ತದೆ. ಅ. 13ಕ್ಕೆ ಶಾರದಾ ವಿಸರ್ಜನೆ ಕಾರ್ಯಕ್ರಮ ನೆರವೇರಿಸಲು ನಿಶ್ಚಯಿಸಿರುತ್ತಾರೆ.ಬಂಟ್ವಾಳ ತಾಲ್ಲೂಕಿನಲ್ಲಿ ಮರುದಿನ ವಿಸರ್ಜನೆ ಮಾಡಲಾಗುವುದು.