ಕುಡಿದ ಮತ್ತಲ್ಲಿ ಮಹಿಳೆ ಸ್ನಾನದ ಚಿತ್ರೀಕರಣ: ಆರೋಪಿ ಅರೆಸ್ಟ್!
– ಮಂಗಳೂರು ಸಮೀಪದ ಮುಲ್ಕಿ ಪಕ್ಷಿಕೆರೆಯಲ್ಲಿ ಘಟನೆ: ಬಜರಂಗದಳ ಕಾರ್ಯಕರ್ತರು ಹಿಡಿದರು
– ಬೆಳ್ತಂಗಡಿಯಲ್ಲಿ ಸ್ಮಾರ್ಟ್ ಕಳ್ಳ ಕೊನೆಗೂ ಸಿಕ್ಕಿ ಬಿದ್ದ!
NAMMUR EXPRESS NEWS
ಮಂಗಳೂರು: ನೆರೆ ಮನೆಯ ಮಹಿಳೆಯೊಬ್ಬರು ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿರುವಾಗ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಯುವಕನನ್ನು ಸ್ಥಳೀಯ ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮುಲ್ಕಿ ಸಮೀಪದ ಪಕ್ಷಿಕೆರೆ ಎಂಬಲ್ಲಿ ನಡೆದಿದೆ. ಆರೋಪಿ ಸುಮಂತ್ ( 22) ತನ್ನ ನೆರೆ ಮನೆಯ ಬಚ್ಚಲು ಕೋಣೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ವಿಡಿಯೋ ಮಾಡುತ್ತಿರುವಾಗ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುವುದು ಗಮನಿಸಿ ಕಿರುಚಾಡಿದ್ದಾರೆ. ಕೂಡಲೇ ಒಟ್ಟಾದ ಸ್ಥಳೀಯ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಸುಮಂತ್ ಪೂಜಾರಿ ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿ ಈ ಹಿಂದೆ ಬಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಆದರೆ ವಿಪರೀತ ಮದ್ಯದ ಚಟ ಇದ್ದ ಸುಮಂತ್ ಪೂಜಾರಿಯನ್ನು ಕೆಲ ಸಮಯಗಳ ಹಿಂದೆ ಸಂಘಟನೆಯಿಂದ ಹೊರದಬ್ಬಿದ್ದರು ಎಂದು ಪಕ್ಷಿಕೆರೆ ಬಜರಂಗದಳ ಮುಖಂಡರು ಸ್ಪಷ್ಟನೆ ನೀಡಿದ್ದಾರೆ. ಈ ವೀಡಿಯೋ ಚಿತ್ರೀಕರಣ ಮಾಡುವಾಗ ಕೂಡ ವಿಪರೀತವಾಗಿ ಕುಡಿದಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಳಿಕ ಮುಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಹಿಳೆ ಸ್ನಾನ ಮಾಡುವ ವೀಡಿಯೊ ಮಾಡಿದ್ದ ಮೊಬೈಲ್ ಸಹಿತ ಆತನನ್ನು ವಶಕ್ಕೆ ಪಡೆದು ಠಾಣೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.ಆರೋಪಿಯ ಸಂಬಂಧಿಯೊಬ್ಬರು ಠಾಣೆಗೆ ಧಾವಿಸಿ ಜಾಮೀನು ನೀಡಿದ್ದಾರೆ. ಪೊಲೀಸರು ಬಂಧಿತನಿಗೆ ಕಡಕ್ ಆಗಿ ವಾರ್ನಿಂಗ್ ನೀಡಿ 50000 ಸಾವಿರ ರೂಪಾಯಿಯ ಬಾಂಡ್ ಮತ್ತು ಆತನ ಬಳಿ ಮುಚ್ಚಳಿಕೆ ಬರೆಸಿ ಆತನನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ಶಿಕ್ಷಕಿ ಬೆದರಿಸಿ ಒಂದು ಲಕ್ಷ ದರೋಡೆ: ಜೈಲು
ಬೆಳ್ತಂಗಡಿ: ಸಾಮಾಜಿಕ ಜಾಲತಾಣ ‘ಟೆಲಿಗ್ರಾಂ’ ಮೂಲಕ ಅಮಾಯಕ ಶಿಕ್ಷಕಿಯನ್ನು ಬೆದರಿಸಿ ಒಂದು ಲಕ್ಷ ರೂ ವಸೂಲಿ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ವೇಣೂರು ಪೊಲೀಸರು ಆರೋಪಿಯನ್ನು ಸೆರೆ ಹಿಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಸುಕ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ ಹೆಬ್ಬಾರ್ (23) ಬಂಧಿತ ಆರೋಪಿಯಾಗಿದ್ದಾನೆ.
ಏನಿದು ಘಟನೆ?:
ಬೆಳ್ತಂಗಡಿ ತಾಲೂಕಿನ ಸುಳ್ಳೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯ ಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಎಂಬವರಿಗೆ ಬೆದರಿಸಿ ಮೂರು ಲಕ್ಷ ರೂ. ನೀಡುವಂತೆ ಟೆಲಿಗ್ರಾಂ ನಕಲಿ ಖಾತೆಯ ಮೂಲಕ ವ್ಯಕ್ತಿಯೋರ್ವ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದೆ ಹೋದರೆ ನಿನ್ನ ಪತಿಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಶಿಕ್ಷಕಿ ಜ್ಯೋತಿ ವೇಣೂರು ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯಾ ಜೆ. ನೇತೃತ್ವದ ತಂಡ, ಜ್ಯೋತಿಯಿಂದ ಒಂದು ಲಕ್ಷ ರೂ. ನೀಡುವುದಾಗಿ ಆರೋಪಿಗೆ ಟೆಲಿಗ್ರಾಂ ಸಂದೇಶ ಕಳುಹಿಸಿದ್ದಾರೆ. ಅದರಂತೆ ಆರೋಪಿ ಬುಧವಾರ ಸಂಜೆ ಅಳದಂಗಡಿ ಕೆದ್ದು ಸಮೀಪ ಹಣ ಎಸೆದು ಹೋಗುವಂತೆ ಸೂಚಿಸಿದ್ದ. ಬಳಿಕ ಅಲ್ಲಿ ಬೇಡ ಎಂದು ಮತ್ತೊಮ್ಮೆ ಸಂದೇಶ ರವಾನಿಸಿ ಬೇರೊಂದು ಸ್ಥಳ ಸೂಚಿಸಿದ್ದಾನೆ. ಹೀಗೆ ಪದೆ ಪದೆ ಮೂರರಿಂದ ನಾಲ್ಕುಬಾರಿ ಸ್ಥಳವನ್ನು ಬದಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದ ಆರೋಪಿ ಕೊನೆಯದಾಗಿ ಶಿರ್ಲಾಲು ಸವಣಾಲು ಕ್ರಾಸ್ ಬಳಿ ಹಣವನ್ನು ವಾಹನದಿಂದ ಎಸೆದು ಹೋಗುವಂತೆ ಸೂಚಿಸಿದ್ದಾನೆನ್ನಲಾಗಿದೆ. ಅದರಂತೆ ಜ್ಯೋತಿ ಹಣದ ಕಟ್ಟನ್ನು ಎಸೆದು ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಹಣವನ್ನು ಹೆಕ್ಕಿಕೊಳ್ಳುತ್ತಿದ್ದಂತೆ ಮೊದಲೇ ಕಾದು ಕುಳಿತಿದ್ದ ಪೊಲೀಸರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದ್ರೆ ಆತ ಪರಾರಿಯಾಗಿದ್ದಾನೆ.ಬಳಿಕ ತಡರಾತ್ರಿ ಆತನನ್ನು ಗುಂಡೇರಿ ಸಮೀಪ ಬಂಧಿಸಿದ್ದು ಝೆಡ್ ಆರೋಪಿಯಿಂದ ಒಂದು ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023