ಬಿಜೆಪಿ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ಇನ್ನಿಲ್ಲ!
* ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ
* ಬೆಂಗಳೂರಿನಲ್ಲಿ ಕೊನೆಯುಸಿರೆಳೆದ ನಾಯಕ
* ಬೆಂಗಳೂರಲ್ಲಿ ಅಂತಿಮ ದರ್ಶನ: ಸಂಜೆ ಅಂತ್ಯಕ್ರಿಯೆ
NAMMUR EXPRESS NEWS
ಬೈಂದೂರು: ಮಾಜಿ ಶಾಸಕ ಬೈಂದೂರು ಕೆ ಲಕ್ಷ್ಮೀ ನಾಯರಾಯಣ (85) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಪತ್ನಿ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು.
ಇವರು 2008ರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಸ್ನಾತಕೋತ್ತರ ಪದವಿಧರರಾಗಿರುವ ಇವರು ಉದ್ಯಮಿಯಾಗಿ ಹೆಸರು ಗಳಿಸಿದ್ದಾರೆ.
ಬೆಂಗಳೂರಲ್ಲಿ ಅಂತಿಮ ದರ್ಶನ: ಸಂಜೆ ಅಂತ್ಯಕ್ರಿಯೆ
ಮೃತರ ಅಂತಿಮ ದರ್ಶನಕ್ಕಾಗಿ ಅವರ ಡಾಲರ್ ಕಾಲೋನಿಯಲ್ಲಿರುವ ಮನೆಯಲ್ಲಿ ಬೆಳಿಗ್ಗೆ 10.30 ರಿಂದ ಇರಿಸಲಾಗುವುದು, ಸಂಜೆ 4.30ಕ್ಕೆ ಬನಶಂಕರಿಯ ಚಿತ್ತಾಗಾರದಲ್ಲಿ ಅಂತಿಮ ಸಂಸ್ಕಾರವನ್ನು ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.