ಇತಿಹಾಸದ ಪುಟ ಸೇರಿದ “ಗೊರಬು”!
– ನಾಟಿ ಮಾಡಲು ಬಳಸುತ್ತಿದ್ದ ಹೊದಿಕೆ
– ಕರಾವಳಿ, ಮಲೆನಾಡಲ್ಲಿ ಗೊರಬು ಮಾಯ
NAMMUR EXPRESS NEWS
ಕಾರ್ಕಳ/ಹೆಬ್ರಿ: ಎರಡು ದಶಕಗಳ ಹಿಂದೆ ಮಳೆಗಾಲ ಬಂತೆಂದರೆ ಗೊರಬಿಗೆ ಭಾರಿ ಡಿಮಾಂಡ್. ಕೃಷಿ ಸಮಯದಲ್ಲಿ ಗದ್ದೆ ನಾಟಿ ಹಾಗೂ ಉಳುಮೆ ವೇಳೆಯಲ್ಲಿ ಗೊರಬು ಹಿಡಿದು ಕೆಲಸ ಮಾಡುವುದೇ ಚಂದ. ಧಾರಾಕಾರವಾಗಿ ಮಳೆ ಸುರಿದರೂ ಚಳಿಯು ಆಗದೆ ಬಿಸಿಯಾಗಿ ಇಡುವ ಗೊರಬು ಮಲೆನಾಡು ಹಾಗೂ ಕರಾವಳಿಗರ ಪ್ರೀತಿಯ ವಸ್ತುವಾಗಿತ್ತು. ಹೆಂಗಸರು ಗೊರಬು ಇಲ್ಲದೆ ನಾಟಿ ಕೆಲಸಕ್ಕೆ ಹೊರಡುತ್ತಿರಲಿಲ್ಲ. ಆದ್ರೆ ಕಾಲ ಬದಲಾಗಿದೆ. ಗೊರಬು ಬದಲು ಪ್ಲಾಸ್ಟಿಕ್ ಬಂದಿದೆ. ಇನ್ನು ಹೈಟೆಕ್ ಜರ್ಕಿನ್ ವಸ್ತುಗಳು ಗೊರಬನ್ನು ಗೊಬ್ಬರದ ಗುಂಡಿಗೆ ಎಸೆಯುವಂತೆ ಮಾಡಿದೆ.
ತುಳುವಿನಲ್ಲಿ ಗೊರಬಿಗೆ ಕೊರಂಬು, ಪನೋಲಿ ಎನ್ನುವುದು ವಾಡಿಕೆ ಕನ್ನಡದಲ್ಲಿ ಗೊರಬು , ಮಂಗಳೂರು ಭಾಗಗಳಲ್ಲಿ ಪನೋಲಿ ಎಂದು ಕರೆಯುವುದು ಜನಜನಿತ. ಇದೀಗ ಗೊರಬು ಕಾಣೆಯಾಗಿದೆ.
ಗೊರಬು ಹೆಣೆಯುವ ಕಲೆಯೇ ರೋಚಕ!
ಕಾಡಿನಿಂದ ಅಯ್ದುಕೊಂಡು ಬರುವ ಬಿದಿರನ್ನು ಕಡ್ಡಿಗಳನ್ನು ತ್ರಿಭುಜ ಆಕೃತಿಯಲ್ಲಿ ಪರಿವರ್ತಿಸಲಾಗುತ್ತದೆ , ದೂಪದ ಎಲೆಗಳಿಂದ ಹತ್ತಿರ ಕಲಾತ್ಮಕವಾಗಿ ಜೋಡಿಸಲಾಗುತ್ತದೆ. ಬಳಿಕ ಮಾರಾಟಕ್ಕೆ ಸಿದ್ದವಾಗುತ್ತದೆ. ಈ ಗೊರಬಿನ ಹೆಣೆಯಲು ಹೆಚ್ಚಿ ಕೆಲಸ , ದಿನಕ್ಕೆ ಒಂದು ಅಥವಾ ಎರಡು ಗೊರಬು ಮಾಡುವುದು ಹೆಚ್ಚು.ಗೊರಬು ತುಸು ಭಾರವಾಗಿದ್ದರು. ದೂಪದ ಮರದ ಎಲೆಗಳು ಬಿಸಿಯನ್ನು ಕಾಪಾಡುತಿದ್ದವು. ಮಳೆ ಎಷ್ಟೆ ಸುರಿದರು ಬಿಸಿಯ ಭಾವ ಕಮ್ಮಿಯಾಗುತ್ತಿರಲಿಲ್ಲ.
ಪ್ಲಾಸ್ಟಿಕ್ ಬಂತು ಗೊರಬು ಮರೆಯಾಯ್ತು!
ಜಂಬೋ ಪ್ಲಾಸ್ಟಿಕ್, ರೈನ್ ಕೋಟ್ ಬಂದ ಬಳಿಕ ನಾಟಿ ಸಮಯದಲ್ಲಿ ಗದ್ದೆ ಕೃಷಿ ಕಾರ್ಯಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗ ತೊಡಗಿತು. ಪ್ಲಾಸ್ಟಿಕ್ ಹಗುರವಾದರೂ ಬಳಸಲು ಸುಲಭ ಎನ್ನುವುದು ಕೃಷಿಕರ ಲೆಕ್ಕಾಚಾರ,
ಎಳ್ಳಾರೆಯ ಚೆನ್ನಿಬೆಟ್ಟು ಅಂದಿನ ಕೇಂದ್ರ ಸ್ಥಾನ :ಇಪ್ಪತ್ತರ ದಶಕದಲ್ಲಿ ಕಾರ್ಕಳ ತಾಲೂಕಿನ ಎಳ್ಳಾರೆ ಚೆನ್ನಿಬೆಟ್ಟು ಪರಿಸರದಲ್ಲಿ ಕೆಲವು ಸಮುದಾಯದ ಜನರು ಗೊರಬುಗಳನ್ನು ತಯಾರಿಸುತಿದ್ದರು , ಸ್ಥಳೀಯ ಗೊರಬು ಉದ್ಯಮಿಯಾಗಿರುವ ಅನಂದ ಪೂಜಾರಿ ಎಲ್ಲೆಡೆಗಳಿಂದ ಗೊರಬುಗಳನ್ನು ಸಂಗ್ರಹಿಸಿ ಕುಂದಾಪುರ ಬೈಂದೂರು, ಬ್ರಹ್ಮಾವರ,ಉಡುಪಿ ಮಂಗಳೂರು ತಲಪಾಡಿವರೆಗೂ ಮಾರಾಟ ಮಾಡುತಿದ್ದರು. ಹತ್ತು , ಇಪ್ಪತ್ತು ರೂಪಾಯಿಗಳಿಗೆ ಗಾತ್ರಕ್ಕೆ ತಕ್ಕಂತೆ ಬೇಡಿಕೆಗೆ ತಕ್ಕಂತೆ ಗೊರಬನ್ನು ಮಾರಾಟ ಮಾಡುತಿದ್ದರು.
ಬೇಡಿಕೆಯಿದ್ದರೂ ಈಗ ಮಾಡುವವರಿಲ್ಲ!
ಕಾರ್ಕಳದ ಚೆನ್ನಿಬೆಟ್ಟು ಪರಿಸರದಲ್ಲಿ ಒಂದು ಕುಟುಂಬವಿದೆ. ಗೊರಬು ಮಾಡುವ ಹಳೆಯ ತಲೆಮಾರುಗಳಿಲ್ಲ, ಆದರೂ ಗೊರಬಿಗೆ ಬೇಡಿಕೆಯಿದೆ. ಕೆಲವು ರೆಸ್ಟೋರೆಂಟ್ ಗಳು, ಹೋಂ ಸ್ಟೇ ಗಳಿಗೆ ಗೊರಬುಗಳನ್ನು ಹೆಣೆದು ಕೊಡುವಂತೆ ವ್ಯಾಪಾರಿಗಳು ದುಂಬಲು ಬಿದ್ದಿದ್ದಾರೆ.ಆದರೆ ನಿರೀಕ್ಷಿತ ಮಟ್ಟದಲ್ಲಿ ಗೊರಬು ಹೆಣೆಯುವವರು ಈಗಿಲ್ಲ , ಒಂದು ಕುಟುಂಬ ಒಂದು ಗೊರಬಿಗೆ ರೂ 500-1000ವರೆಗೆ ಗಾತ್ರಕ್ಕೆ ತಕ್ಕಂತೆ ಮಾರಾಟವನ್ನು ಮಾಡುತ್ತಾರೆ
ಈಗ ಡಿಮಾಂಡ್ ಕಮ್ಮಿ ಇದೆ. ಹೋಮ್ ಸ್ಟೆ ಮಾಲೀಕರು ಸೇರಿದಂತೆ ರೆಸ್ಟೋರೆಂಟ್ ಗಳಲ್ಲಿ ಅಲಂಕಾರಿಕ ವಾಗಿ ಬಳಸುತ್ತಾರೆ. ಆದರೆ ಪ್ಲಾಸ್ಟಿಕ್ ಬಂದ ಬಳಿಕ ಮೊದಲಿನ ಗೊರಬುಗಳ ವ್ಯಾಪಾರವಿಲ್ಲ ಎನ್ನುತ್ತಾರೆ ಶಂಕರ ಚೆನ್ನಿ ಬೆಟ್ಟು.
ಆಗುಂಬೆ ಭಾಗದಲ್ಲೂ ಹೆಚ್ಚು ತಯಾರು!
ಕರಾವಳಿ ಮತ್ತು ಮಲೆನಾಡು ಸಂಪರ್ಕದ ಆಗುಂಬೆಯಲ್ಲಿ ಬೆತ್ತದ ಗೊರಬು ತಯಾರು ಮಾಡಿ ಕರಾವಳಿ ಮತ್ತು ಮಲೆನಾಡಿನ ಅನೇಕ ಕಡೆ ಸರಬರಾಜು ಆಗುತ್ತಿತ್ತು. ಈಗ ಮಲೆನಾಡಲ್ಲೂ ಗೊರಬು ಬಳಕೆ ಕಡಿಮೆಯಾಗಿದೆ.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!
HOW TO APPLY : NEET-UG COUNSELLING 2023