ಕಾರ್ಕಳದ ಜನತೆಗೆ ಹಕ್ಕು ಪತ್ರ ಭಾಗ್ಯ!
– ಕಾರ್ಕಳ ತಾಲೂಕಿನ 74 ಮಂದಿಗೆ 94ಸಿ ಹಕ್ಕುಪತ್ರ
– ಕುಮ್ಕಿ ಜಾಗದಲ್ಲಿದ್ದವರಿಗೆ ಹಕ್ಕುಪತ್ರ ಕೊಡಿಸಲು ಯತ್ನ: ಸುನಿಲ್ ಕುಮಾರ್
NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಬಡ ಜನರಿಗೆ ಹಕ್ಕು ಪತ್ರ ಭಾಗ್ಯ ಸಿಗುತ್ತಿದೆ. ಸುಮಾರು 74 ಮಂದಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದು ಮತ್ತಷ್ಟು ಮಂದಿಗೆ ಹಕ್ಕು ಪತ್ರ ಸಿಗಲಿದೆ. ಸರಕಾರಿ ಜಾಗದಲ್ಲಿ ವಾಸವಿರುವರಿಗೆ ಡೀಮ್ಡ್ ಫಾರೆಸ್ಟ್ ಸಮಸ್ಯೆ ನಿವಾರಿಸಿ ಕಳೆದ ಎರಡು ವರ್ಷಗಳಿಂದ ಹಕ್ಕು ಪತ್ರ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಹಕ್ಕು ಪತ್ರ ಮತ್ತು ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಮ್ಕಿ ಜಾಗದಲ್ಲಿದ್ದವರಿಗೆ ಹಕ್ಕು ಪತ್ರ ವಿತರಣೆಯಾಗಿಲ್ಲ. ಉಡುಪಿ ಮತ್ತು ದ.ಕ. ಜಿಲ್ಲೆಯ ಹಲವಾರು ಪ್ರದೇಶದಲ್ಲಿ ಕುಮ್ಕಿ ಜಾಗವಿದ್ದು, ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆದು ಹಕ್ಕು ಪತ್ರ ವಿತರಿಸಲಾಗುವುದು ಎಂದರು. ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಹಕ್ಕು ಪತ್ರ ಮತ್ತು ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ 74 ಮಂದಿಗೆ 94ಸಿ ಹಕ್ಕುಪತ್ರ ಹಾಗೂ ಅರ್ಹ ಫಲಾನುಭವಿಗಳಿಗೆ ಕಾರ್ಮಿಕ ಕಿಟ್ ಗಳನ್ನು ವಿತರಿಸಲಾಯಿತು. ತಹಶೀಲ್ದಾರ್ ನರಸಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ರೂಪ ಟಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಷ್ಪ ಪ್ರಾರ್ಥಿಸಿ, ಕಂದಾಯ ನಿರೀಕ್ಷಕ ರಿಯಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ಹಣಾಧಿಕಾರಿ ಗುರುಶಾಂತಪ್ಪ ವಂದಿಸಿದರು.