ಕರಾವಳಿಯಲ್ಲಿ ವರುಣನ ಆರ್ಭಟ..!
– ಸಿಡಿಲ ಬಡಿತದಕ್ಕೆ ತತ್ತರಿಸಿದ ಜನ
– ಕಾರ್ಕಳ ಹೆಬ್ರಿ ಸೇರಿ ಎಲ್ಲೆಡೆ ಭಾರೀ ಮಳೆ
NAMMUR EXPRESS NEWS
ಕಾರ್ಕಳ: ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಹಲವೆಡೆ ಭಾನುವಾರ ಸಂಜೆ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಇನ್ನು 2 ದಿನ ಭಾರೀ ಮಳೆ ಸಾಧ್ಯತೆ ಇದೆ. ಕಾರ್ಕಳ ತಾಲೂಕಿನ ಬಜಗೋಳಿ ಮಾಳ ಕಡಾರಿ, ಕೆರ್ವಾಶೆ, ಶಿರ್ಲಾಲು ಈದು,ಅಜೆಕಾರು, ಕಣಂಜಾರು ಮುಂತಾದ ಕಡೆಗಳಲ್ಲಿ ಗಾಳಿ ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ.. ಹೆಬ್ರಿ ತಾಲೂಕಿನ ಕೆಲವೆಡೆ ಭಾರೀ ಹಾಗೂ ತುಂತುರು ಮಳೆಯಾಗಿದ್ದು,ಮುದ್ರಾಡಿ ವರಂಗ, ಅಂಡಾರು, ನಾತ್ಪಾಲು,ಕಬ್ಬಿನಾಲೆ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.
ಸಿಡಿಲಿನ ಆರ್ಭಟಕ್ಕೆ ಹಲವೆಡೆ ಹಾನಿ :
ಮಳೆಯೊಂದಿಗೆ ಭಾರೀ ಸಿಡಿಲಿನ ಆರ್ಭಟಕ್ಕೆ ಹಲವೆಡೆ ಮನೆಗಳ ವಿದ್ಯುತ್ ವಯರಿಂಗ್ ಸುಟ್ಟ ಹಾನಿ ಸಂಭವಿಸಿದೆ.
ಕಾರ್ಕಳ ತಾಲೂಕಿನ ಕಣಂಜಾರು ಗ್ರಾಮದ ಪೆಲತ್ತೂರು ಪಟ್ಲ ದೇವೇಂದ್ರ ನಾಯಕ್ ಎಂಬವರ ಮನೆಯ ಪಕ್ಕದಲ್ಲಿ ಸಿಡಿಲು ಬಡಿದಿದ್ದು ಸುಮಾರು 50 ಸಾವಿರ ಮೌಲ್ಯದ ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ. ಮರ್ಣೆ ಗ್ರಾಮದ ಕಾಡುಹೊಳೆ ಶಾಂತ ನಾಯ್ಕ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದ್ದುವಯರಿಂಗ್ ಸಂಪೂರ್ಣವಾಗಿ ಭಸ್ಮವಾಗಿದ್ದು, ಸುಮಾರು 20 ಸಾವಿರ ರೂ ನಷ್ಟ ಸಂಭವಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಭಾನುವಾರ ಮಳೆಯಾಗಿದೆ.