ಹೆಬ್ರಿ ಎಸ್ಆರ್ ಸಮೂಹ ಶಿಕ್ಷಣ ಸಂಸ್ಥೆ ರಜತ ಮಹೋತ್ಸವ!
– ಇ-ಲೈಬ್ರರಿ ಮತ್ತು ನೂತನ ಕಚೇರಿ ಉದ್ಘಾಟನಾ ಸಮಾರಂಭ
– ರಾಜ್ಯದ ಗಣ್ಯರ ಆಗಮನ : ಜ.13ರ ಸಂಜೆ ಕಾರ್ಯಕ್ರಮ
NAMMUR EXPRESS NEWS
ಹೆಬ್ರಿ: ಹೆಬ್ರಿಯ ಎಸ್ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 2023-24ನೇ ಸಾಲಿನ ರಜತ ಮಹೋತ್ಸವ ಹಾಗೂ ಇ-ಲೈಬ್ರರಿ ಮತ್ತು ನೂತನ ಕಚೇರಿ ಉದ್ಘಾಟನಾ ಸಮಾರಂಭವನ್ನು ಜನವರಿ 13ರ ಸಂಜೆ 6 ಗಂಟೆಗೆ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ನಲ್ಲಿ ನಡೆಸಲಾಗುತ್ತದೆ. ಈಗಾಗಲೇ ಕ್ಯಾಂಪಸ್ ಸಿಂಗಾರಗೊಂಡಿದೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಹುಲಿವೇಷ, ಡೊಳ್ಳು ಕುಣಿತ, ಚಕ್ರ ಕುಣಿತ,ಥಯಂ, ಹೂ ಕಾವಡಿ, ವೀರಗಾಸೆ, ಕೋಳಿ, ನವದುರ್ಗೆ, ಬೇಡರ ವೇಷ, ಶಾಲೆಯ ಟ್ಯಾಬ್ಲೋ, ಪೇಟ ಸಹಿತ 20 ಬಣ್ಣದ ಕೊಡೆ, ಪೇಟ ಸಹಿತ 21 ಬಾವುಟ, ಘಟೊತ್ಗಜ, ಕೇರಳ ಚಂಡೆ ಇದನ್ನು ಒಳಗೊಂಡಂತೆ 37ಕ್ಕೂ ಮಿಕ್ಕಿ, ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಆಯ್ದ ಕಲಾತಂಡಗಳ ಪುರ ಮೆರವಣಿಗೆ ಮತ್ತು ವಿದ್ಯಾರ್ಥಿ ಪ್ರತಿಭಾ ಪ್ರದರ್ಶನಗಳು ಸಾಯಂಕಾಲ 4 ಗಂಟೆಗೆ ಹೆಬ್ರಿಯ ಬಂಟರ ಭವನದಿಂದ ಮೊದಲ್ಗೊಂಡು ಮುಖ್ಯ ರಸ್ತೆಯಲ್ಲಿ ಹಾದು ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಗೆ ತಲುಪಲಿದೆ.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕರ್ನಾಟಕ ವಿಧಾನಸಭಾ ಕ್ಷೇತ್ರ ಗೌರವಾನ್ವಿತ ಸಭಾಧ್ಯಕ್ಷರಾದ ಯು ಟಿ ಖಾದರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್, ನೈರುತ್ಯ ಶಿಕ್ಷಕರ ಕ್ಷೇತ್ರ ಎಂಎಲ್ಸಿ ಎಸ್ ಎಲ್ ಭೋಜೇಗೌಡ, ಸ್ಥಳೀಯ ಅಧಿಕಾರಿಗಳ ಕ್ಷೇತ್ರ ಎಂಎಲ್ಸಿ ಮಂಜುನಾಥ್ ಭಂಡಾರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್ ಎಂ ಮಂಜುನಾಥ್ ಗೌಡ, ಹೆಬ್ಬಾರ್ & ಅಸೋಸಿಯೇಟ್ಸ್ ಉಡುಪಿ ಗಣೇಶ್ ಹೆಬ್ಬಾರ್, ಎಂಬಿಬಿಎಸ್ಎಂಡಿ ಡಾ. ಚೇತನ್ ಹೆಬ್ಬಾರ್ ರವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ನೇರ ಪ್ರಸಾರವನ್ನು https://youtube.com/live/HWsB7GFVZWg? feature=share ಲಿಂಕ್ ಬಳಸಿ ವೀಕ್ಷಿಸಬಹುದು.
1st Std To 2nd pu admission open 2024-25
Contact : 9448724251, 9448373109