ಕರಾವಳಿಯಲ್ಲಿ ಹೆಚ್ಚಾದ ಆನ್ಲೈನ್ ಮೋಸ!
– ಆನ್ಲೈನ್ ಅಲ್ಲಿ ಸಾಲ ಪಡೆದು ಜೀವ ಕಳೆದುಕೊಂಡ ವ್ಯಕ್ತಿ
– ಮಂಗಳೂರು, ಉಡುಪಿಯಲ್ಲಿ ವಂಚಕರ ದೊಡ್ಡ ಜಾಲ
– ಒಮ್ಮೆ ನೀವೂ ಯಾಮಾರಿದ್ರೆ ಜೀವ, ಜೀವನ ತೆಗೀತಾರೆ!
NAMMUR EXPRESS NEWS
ಮಂಗಳೂರು/ಉಡುಪಿ: ಕರಾವಳಿಯಲ್ಲಿ ಆನ್ಲೈನ್ ಮೋಸ, ವಂಚನೆ ಪ್ರಕರಣಗಳು ದಿನ ಬೆಳಗಾದರೆ ಹೆಚ್ಚಾಗುತ್ತಿದೆ. ಇತ್ತೀಚಿಗೆ ಯುವತಿಯೊಬ್ಬಳಿಗೆ ಆಪ್ ಅಲ್ಲಿ ಸಾಲ ಕೊಟ್ಟು ಬಳಿಕ ಅಶ್ಲೀಲ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಜಾಲ ಇದೀಗ ಮತ್ತೊಂದು ಜೀವವನ್ನೇ ತೆಗೆದಿದೆ. ಆನ್ಲೈನ್ ಅಲ್ಲಿ ಮೋಸ ಮಾಡುವ ಜಾಲ ದಿನೇ ದಿನೇ ಹೆಚ್ಚಾಗಿದ್ದು, ಮಂಗಳೂರು, ಉಡುಪಿಯಲ್ಲಿ ವಂಚಕರ ದೊಡ್ಡ ಜಾಲ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಲೋನ್ ಆ್ಯಪ್ ಸಾಲ ಪಡೆದು ಜೀವ ಕಳೆದುಕೊಂಡ ವ್ಯಕ್ತಿ.!
ಆನ್ಲೈನ್ ಸಾಲ ಮಾಡಿ ಕರೆಗಳ ಕಾಟ ತಡೆಯಲಾರದೆ ವ್ಯಕ್ತಿ ಆತ್ಮಹತ್ಯೆ ಆನ್ಲೈನ್ ಸಾಲಕ್ಕೆ ಸಂಬಂಧಿಸಿ ಪೋನ್ ಕರೆಗಳಿಗೆ ಬೆದರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎನ್ನಲಾದ ಘಟನೆ ಆ.26ರಂದು ಸಂಜೆ ಮಣಿಪಾಲ ಹುಡ್ಕೊ ಕಾಲೋನಿ ಎಂಬಲ್ಲಿ ನಡೆದಿದೆ. ಮೃತರನ್ನು ಶಿವಳ್ಳಿಯ ರಾಘವೆಂದ್ರ ಎ.ಶಾನಭಾಗ್(49) ಎಂದು ಗುರುತಿಸಲಾಗಿದೆ.
ಇವರು ಆನ್ಲೈನ್ನಲ್ಲಿ ಸಾಲ ತೆಗೆದುಕೊಂಡಿದ್ದರು. ಇದರಿಂದ ಫೋನ್ ಕರೆಗಳು ಬರುತ್ತಿದ್ದು ಈ ಕಾರಣದಿಂದ ಜೀವನದಲ್ಲಿ ಜಿಗುಪ್ಪೆಗೊಂಡು ಮನೆಯ ಮಹಡಿಯ ಮೇಲೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗಿಯರ ಫೋಟೋ ಕಳುಹಿಸಿ ಬ್ಲಾಕ್ಮೇಲ್!
ಮತ್ತೊಂದು ಆನ್ಲೈನ್ ಜಾಲ ಹುಡುಗಿಯರ ಫೋಟೋ ಕಳುಹಿಸಿ ಬಳಿಕ ತಮ್ಮ ಫೋಟೋ ಜತೆ ಜೋಡಿಸಿ ಅವರ ವಾಟ್ಸಪ್, ಫೇಸ್ಬುಕ್ ಕಳುಹಿಸಿ ಅಲ್ಲಿಂದ ಮಾನ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಮಂಗಳೂರು, ಉಡುಪಿ, ಮಣಿಪಾಲ ಭಾಗದಲ್ಲಿ ಈ ದಂಧೆ ಹೆಚ್ಚಾಗಿದೆ. ಹೊರ ಊರಿನವರು ಇಲ್ಲಿಯ ಜನರ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಪೊಲೀಸ್ ಇಲಾಖೆ, ಸೈಬರ್ ಪೊಲೀಸ್ ಇಂತಹ ವಂಚಕರ ಮೇಲೆ ಕಣ್ಣು ಇಡಬೇಕಿದೆ.